ಶಿರಸಿ: ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದರೂ ಇನ್ನೂ ನಿಮ್ಮ ವಾಹನಗಳ ಚಕ್ರಕ್ಕೇ ಚಕ್ರ ಬಿದ್ದೀತು. ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ಪಾರ್ಕಿಂಗ್ ಮಾಡಿ ತೆರಳುವ ಸವಾರರಿಗೆ ಶಿಸ್ತಿನ ಪಾಠ ಹೇಳಿಕೊಡಲು ಪೊಲೀಸ್ ಇಲಾಖೆ ವ್ಹೀಲ್ ಲಾಕ್ ಮಾಡಲು ಮುಂದಾಗಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ವ್ಹೀಲ್ ಲಾಕ್ ಖರೀದಿಸಿ ಹೊಸ ಪಾಠ ಮಾಡಲು ಶುರುವಿಟ್ಟುಕೊಂಡಿದೆ.
ಶಿರಸಿಗೆ ಪ್ರತ್ಯೇಕ ಟ್ರಾಫಿಕ್ ಫೂಲೀಸ್ ಠಾಣೆ ನಿರ್ಮಿಸುವಂತೆ ಆಗ್ರಹ ಇದ್ದರೂ ಈಗ ಇರುವ ಸಿಬ್ಬಂದಿಗಳೆ ಈ ಸೂತ್ರಕ್ಕೆ ಬಂದಿದ್ದಾರೆ. ಮಹಾನಗರಗಳಲ್ಲಿ ಇದ್ದಂತೆ ಇಲ್ಲೂ ವೀಲ್ ಲಾಕ್ ಮಾಡಲು ಇಲಾಖೆ ಮುಂದಾಗಿದೆ. 67ಸಾವಿರಕ್ಕೂ ಅಧಿ ಕ ಜನಸಂಖ್ಯೆ ಇರುವ ಶಿರಸಿ ನಗರಕ್ಕೆ ಪ್ರತಿನಿತ್ಯ ಸಾವಿರಾರು ವಾಹನಗಳು ಬಂದು ತೆರಳುತ್ತವೆ. ಆ ನಿಟ್ಟಿನಲ್ಲಿ ದಿನವಿಡಿ ವಾಹನ ದಟ್ಟಣೆಯಿಂದ ಕೂಡಿರುವ ಶಿರಸಿಯಲ್ಲಿ ಟ್ರಾಫಿಕ್ ನಿರ್ವಹಣೆ ಮಾಡುವಂತೆ ಒತ್ತಡ ಹೇರಿದ್ದ ಜನಸಾಮಾನ್ಯರ ಬೇಡಿಕೆಯಂತೆ ಶಿರಸಿಯಲ್ಲಿ ಟ್ರಾಫಿಕ್ ಒತ್ತಡ ನಿರ್ವಹಣೆಗೆ ಪೊಲೀಸರು ಈ ಕ್ರಮ ಅನುಸರಿಸುತ್ತಿದ್ದಾರೆ.
ಬೈಕ್‌ಗಳ ಹೊರತಾಗಿ ಕಾರುಗಳ ಸಂಖ್ಯೆಯೂ ಬಹಳವೇ ಹೆಚ್ಚಿದೆ. ಇವೆಲ್ಲ ಕಾರಣದಿಂದ ನಗರದಲ್ಲಿ ದಿನೇದಿನೇ ಟ್ರಾಫಿಕ್ ಸಮಸ್ಯೆ ಮಿತಿಮೀರುತ್ತಿದೆ. ಅದರಲ್ಲೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವುದು, ನೋ ಪಾರ್ಕಿಂಗ್ ಸ್ಥಳದಲ್ಲೂ ನಿಲ್ಲಿಸುವುದು ಹೆಚ್ಚುತ್ತಿದೆ. ಇದರಿಂದ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದು ಹೀಗೆ ಬೇಕಾಬಿಟ್ಟಿಯಾಗಿ ಕಾರುಗಳನ್ನು ನಿಲ್ಲಿಸಿದರೆ ಅದಕ್ಕೆ ಲಾಕ್ ಹಾಕಲು ಮುಂದಾಗುತ್ತಿದ್ದೇವೆ ಎನ್ನುತ್ತಾರೆ ಸಿಪಿಐ ಗಿರೀಶ.
ಇಲ್ಲಿನ ನಟರಾಜ ರಸ್ತೆ, ದೇವಿಕೆರೆ, ಸಿಂಪಿಗಲ್ಲಿ, ಶಿವಾಜಿ ಚೌಕ, ಅಂಚೆ ವೃತ್ತ, ಸಿ.ಪಿ ಬಝಾರ್, ಹೊಸಪೇಟೆ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿ ಕಿರಿದಾದ ರಸ್ತೆಗಳಿವೆ. ಹೆಚ್ಚು ವಾಹನ ದಟ್ಟಣೆಯಿಂದ ಕೂಡಿರುವ ರಸ್ತೆಗಳ ಅಂಚಿನಲ್ಲಿಯೆ ಬೇಕಾಬಿಟ್ಟಿಯಾಗಿ ವಾಹನ ಮಾಲೀಕರು ಪಾರ್ಕಿಂಗ್ ಮಾಡಿ ತೆರಳುತ್ತಾರೆ.
ಎರಡು ದೊಡ್ಡ ವಾಹನಗಳು ಪರಸ್ಪರ ಎದುರಾದರೆ ದಾಟಿ ಮುಂದಕ್ಕೆ ಸಾಗುವುದಕ್ಕೆ ಹರಸಾಹಸಪಡುವ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ವಾಹನಗಳು ರಸ್ತೆಯಲ್ಲೇ ಕಾರುಗಳನ್ನು ನಿಲ್ಲಿಸಿ ಹೋದರೆ ಸಂಚಾರಕ್ಕೆ ಪಜೀತಿಯುಂಟಾಗುತ್ತದೆ. ಹಾಗೇ ನೋ ಪಾರ್ಕಿಂಗ್ ಬೋರ್ಡ್ ಇರುವಲ್ಲಿಯೂ ನಿಲ್ಲಿಸುವುದರಿಂದ ಇನ್ನಷ್ಟು ಪಜೀತಿಯಾಗುತ್ತದೆ. ಇದಕ್ಕೆಲ್ಲ ಕಡಿವಾಣ ಹಾಕಲು ಲಾಕ್ ಅಳವಡಿಕೆಯ ಮೂಲಕ ಬಿಸಿ ಮುಟ್ಟಿಸಲು ಇಲಾಖೆ ಮುಂದಾಗಿದೆ.
ನಗರದಲ್ಲಿ ದಿನೇದಿನೇ ಟ್ರಾಫಿಕ್ ಸಮಸ್ಯೆ ಮಿತಿಮೀರುತ್ತಿದೆ. ಅದರಲ್ಲೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವುದು, ನೋ ಪಾರ್ಕಿಂಗ್ ಸ್ಥಳದಲ್ಲೂ ನಿಲ್ಲಿಸುವುದು ಹೆಚ್ಚುತ್ತಿದೆ.
ವ್ಹೀಲ್ ಲಾಕ್.