Advertisement

ಶಿಕ್ಷಕರಿಂದಲೇ ಕ್ರೀಡಾ ವಿದ್ಯಾರ್ಥಿಗೆ ಅನ್ಯಾಯ

03:05 PM Sep 20, 2018 | Team Udayavani |

ಸಕಲೇಶಪುರ: ಕ್ರೀಡೆಯಿಂದಲೇ ಬದುಕು ಕಟಿ ಕೊಳ್ಳುವ ಕನಸು ಕಂಡಿದ್ದ ವಿದ್ಯಾರ್ಥಿಗೆ ಶಿಕ್ಷಕ ರಿಂದಲೇ ಅನ್ಯಾಯವಾದ ಘಟನೆ ತಾಲೂಕು ಕ್ರೀಡಾಕೂಟದಲ್ಲಿ ನಡೆದಿದೆ.

Advertisement

ಹೌದು ಪ್ರಾಥಮಿಕ, ಪ್ರೌಡಶಾಲಾ ವಿಭಾಗದ ಹಲವು ಕ್ರೀಡಾಕೂಟಗಳಲ್ಲಿ ಓಟದ ಸ್ಪರ್ದೆಯಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿ ಗಳಿಸಿದ್ದ ನವಾಜ್‌ ಖಾನ್‌ ಶಿಕ್ಷಕರಿಂದಲೇ ಅನ್ಯಾಯಕ್ಕೊಳ ಗಾದ ವಿದ್ಯಾರ್ಥಿ. ಇತ್ತೀಚೆಗೆ ಪಟ್ಟಣದ
ಸುಭಾಷ್‌ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜು ಮಟ್ಟದ ಕ್ರೀಡಾಕೂಟದಲ್ಲಿ ನಾಲ್ಕು ನೂರು ಮೀಟರ್‌ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದ ಸೈಂಟ್‌ ಆಗ್ನೇಸ್‌ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ನವಾಜ್‌ ಖಾನ್‌ ಅವರನ್ನು ತಾಲೂಕು ಮಟ್ಟದ ಕ್ರೀಡಾ ಸಮಿತಿ ಜಿಲ್ಲಾ ಕ್ರೀಡಾ ಕೂಟಕ್ಕೆ ಆಯ್ಕೆ ಮಾಡಿತ್ತು. ಈ ನಿಟ್ಟಿನಲ್ಲಿ ಜಿಲ್ಲಾ ಕ್ರೀಡಾಕೂಟ ದಲ್ಲಿ ಸ್ಪರ್ಧೆ ಮಾಡಲು ಸಕಲ ಸಿದ್ಧತೆಯೊಂದಿಗೆ ಕ್ರೀಡಾಕೂಟ ನಡೆಯುವ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿದ್ದ ವಿದ್ಯಾರ್ಥಿ ತಮ್ಮ ಸ್ಪರ್ಧೆ ಆರಂಭವಾದ ವೇಳೆ ಅಂಕಣಕ್ಕೆ ಇಳಿದು ಓಟಕ್ಕೆ ಸಿದ್ಧನಾಗಿದ್ದ. ಆದರೆ, ಈ ವೇಳೆ ಕ್ರೀಡಾ ಮುಖ್ಯಸ್ಥರು ಕ್ರೀಡಾ ಕೂಟದ ಪಟ್ಟಿಯಲ್ಲಿ ಇತನ ಹೆಸರಿಲ್ಲದನ್ನು ಗಮನಿಸಿ ಕ್ರೀಡಾಂಗಣದಿಂದ ಹೊರಕ್ಕೆ ಕಳುಹಿಸಿದ್ದಾರೆ.

ಈ ಕುರಿತು ಆಯೋಜಕರಾದ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ವಿರಳಗ ಶೆಟ್ಟಿ ರವರನ್ನು ವಿಚಾರಿಸಿದರೆ, ಕ್ರೀಡಾ ಶಿಕ್ಷಕರ ಕಣ್ತಪ್ಪಿನಿಂದ ತಾಲೂಕು ಕ್ರೀಡಾಕೂಟದ ನಾಲ್ಕು ನೂರು ಮೀಟರ್‌ ಓಟದಲ್ಲಿ ಮೂರನೇ
ಸ್ಥಾನ ಪಡೆದ ವಿದ್ಯಾರ್ಥಿ ಹೆಸರನ್ನು ಜಿಲ್ಲಾ ಕ್ರೀಡಾ ಕೂಟಕ್ಕೆ ಶಿಪಾರಸು ಮಾಡಲಾಗಿದೆ ಈಗ ಏನು ಮಾಡಲಾಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.
 
ಕ್ರೀಡೆಯಿಂದ ತಮ್ಮ ಪ್ರಗತಿ ಸಾಧಿಸಲು ಅರ್ಹ ಅಭ್ಯರ್ಥಿ ನವಾಜ್‌ ಖಾನ್‌ಗೆ ಅನ್ಯಾಯವಾಗಿದೆ. ಈಗಾಗಲೇ ಕಾಲೇಜಿನ
ಪ್ರಾಂಶುಪಾಲರ ಮೇಲೆ ಹಲವು ದೂರುಗಳಿದ್ದು ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂಬು¨

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದೆ. ಇದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬದುಕಿಗೆ ಪೆಟ್ಟು ಬೀಳುತ್ತಿದೆ. ಕಾಲೇಜಿನಲ್ಲಿ ಈ ರೀತಿಯ ಘಟನೆಗಳಿಗೆ ಕಾರಣರಾಗುತ್ತಿರುವ ಪ್ರಾಂಶುಪಾಲರನ್ನು ಕೂಡಲೇ ವರ್ಗಾವಣೆ ಮಾಡಬೇಕು.
 ಜಮೀಲ್‌ ಅಹಮ್ಮದ್‌, ನವಾಜ್‌ ಖಾನ್‌ ಚಿಕ್ಕಪ್ಪ

Advertisement

Udayavani is now on Telegram. Click here to join our channel and stay updated with the latest news.

Next