Advertisement
ದೇಶದಲ್ಲಿ ಮೊದಲ ಬಾರಿಗೆ ವೈದ್ಯರು ಅಸುನೀಗಿದ್ದು ಮುಂಬಯಿನಲ್ಲಿ. ಮಾ.29ರಂದು 89 ವರ್ಷ ವೈದ್ಯರು ವೈರಸ್‌ನಿಂದ ಅಸುನೀಗಿದ್ದ ಅಂಶವನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಖಚಿತಪಡಿಸಿತ್ತು. ಈ ನಡುವೆ, ಮೊತ್ತೂಬ್ಬ ವೈದ್ಯ, ಅವರ ಪತ್ನಿ ಸೇರಿದಂತೆ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿದೆ. ಆತಂಕಕಾರಿ ಸಂಗತಿ ಎಂದರೆ ಭೋಪಾಲ್‌ನಲ್ಲಿ ಸೋಂಕು ಕಂಡು ಬಂದ 90 ಜನರ ಪೈಕಿ 40ಕ್ಕೂ ಹೆಚ್ಚು ಮಂದಿ ಆರೋಗ್ಯ ಸಿಬ್ಬಂದಿಯಾಗಿದ್ದಾರೆ. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಬ್ ಇನ್ಸ್ ಪೆಕ್ಟರ್‌ಗೂ ಕೋವಿಡ್ ಸೋಂಕು ತಗುಲಿದೆ.
ಖ್ಯಾತ ಬೆಂಗಾಲಿ ಮಾರುಕಟ್ಟೆ ಸೇರಿದಂತೆ ಹೊಸದಿಲ್ಲಿಯಲ್ಲಿನ 20 ಕೊರೊನಾ ಹಾಟ್‌ಸ್ಪಾಟ್‌ಗಳನ್ನು ಮುಚ್ಚಲಾಗಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟ ನಿಷೇಧಿಸಲಾಗಿದೆ. ಅಲ್ಲದೆ, ಬೆಂಗಾಲಿ ಸ್ವೀಟ್ ಮಾರ್ಟ್‌ನ ಮಹಡಿ ಮೇಲೆ 35 ಮಂದಿ ಕೆಲಸಗಾರರು ಒಟ್ಟಿಗೆ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಾಲಿ ಸ್ವೀಟ್‌ನ ಮಾಲಿಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.