Advertisement
ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆ ಯಿಂದ ಬಡವಾದಂತೆ ಕಂಡರೂ ಊರವರ, ಗ್ರಾಮಸ್ಥರ, ದಾನಿಗಳ ನೆರವಿನೊಂದಿಗೆ ಸತತ ಪ್ರಯತ್ನದಿಂದ ಕೊರೊನಾ ಅವಧಿಯಲ್ಲಿ ಮತ್ತೆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕ ಕಾಲನಿ ಸುತ್ತಮುತ್ತ ಇರುವುದರಿಂದ ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಇದು ಸಕಾಲವಾಗಿದೆ. ಇದೀಗ 1 ಮತ್ತು 2ನೇ ತರಗತಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆಗೆ ಅನುಮತಿ ಲಭಿಸಿದೆ. ಪ್ರಾಥಮಿಕ ಪೂರ್ವ ತರಗತಿಯನ್ನು ಸ್ಮಾರ್ಟ್ ಕ್ಲಾಸ್‌ನ ಕೊಠಡಿ ನಿರ್ಮಿಸಲಾಗಿದೆ. ಆಟದ ಮೈದಾನವಿದ್ದು, ಕ್ರೀಡೆಗಳಲ್ಲಿಯೂ ಪರಿಣಿತಿ ಪಡೆಯಲು ಎಲ್ಲ ಅವಕಾಶವಿದೆ.
Related Articles
Advertisement
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಸಂದರ್ಭ ಶಿಕ್ಷಕರನ್ನು ಸರಕಾರ ವರ್ಗಾಯಿಸಿತ್ತು. ಇದೀಗ ಮತ್ತೆ ಏರಿಕೆ ಆಗಿರುವುದರಿಂದ ಶಿಕ್ಷಕರ ನೇಮಕವಾಗ ಬೇಕಿದೆ. 7 ಸರಕಾರಿ ಶಿಕ್ಷಕರು ಇದ್ದಾರೆ. 4 ಮಂದಿ ಶಿಕ್ಷಕರನ್ನು ನೇಮಿಸಿ ಸರಕಾರ ಆಡಳಿತ ಮಂಡಳಿಗೆ ನೆರವು ನೀಡಬೇಕಿದೆ. ಕೊಠಡಿಗಳು ಈಗಿನ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ 4 ಹೆಚ್ಚುವರಿ ಕೊಠಡಿಗಳು ಬೇಕಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಗತ್ಯವಾಗಿದೆ.
ಪೀಠೊಪಕರಣ, ಶೌಚಾಲಯ ಸಮಸ್ಯೆ:
ಶಾಲೆಯಲ್ಲಿ ಈಗಿರುವ ಮಕ್ಕಳ ಸಂಖ್ಯೆಗನು ಗುಣವಾಗಿ ಹೆಚ್ಚಿನ ಪೀಠೊಪಕರಣಗಳನ್ನು ಒದಗಿಸಬೇಕಾಗಿದೆ. ಸೋರುತ್ತಿರುವ ಕಟ್ಟಡಗಳ ದುರಸ್ತಿ, ಆವರಣ ಗೋಡೆಯ ದುರಸ್ತಿ ಆಗಬೇಕಿದೆ.
ಪಂಜಿಮೊಗರು ಸರಕಾರಿ ಹಿರಿಯ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸಿರುವುದರಿಂದ ಮಕ್ಕಳ ದಾಖಲಾತಿಯಲ್ಲಿ ಹೆಚ್ಚಳವಾಗಿದೆ. ಆದ್ದರಿಂದ ಶಿಕ್ಷಕರ ನೇಮಕ, ಸೋರುತ್ತಿರುವ ಕಟ್ಟಡದ ದುರಸ್ತಿ, ಕೊಠಡಿ ನಿರ್ಮಾಣ, ಮೂಲಸೌಕರ್ಯ ಒದಗಿಸಬೇಕಿದೆ. ಸ್ಥಳೀಯ ಶಾಸಕರು ಶಾಲೆಯನ್ನು ದತ್ತು ತೆಗೆದುಕೊಂಡು ಸಿಎಸ್‌ಆರ್ ನಿಧಿಯಿಂದ ಅಭಿವೃದ್ಧಿ ಪಡಿಸಲು ಮುಂದಾಗಿದ್ದಾರೆ. ಮನಪಾ ಸದಸ್ಯರು, ಶಾಲಾ ಮೇಲುಸ್ತುವಾರಿ ಸಮಿತಿ, ಪಿಟಿಎ ಸಹ ಶಾಲೆಯ ಸರ್ವಾಂಗೀಣ ಪ್ರಗತಿಗೆ ಕೈ ಜೋಡಿಸಿದೆ. -ಚಂದ್ರಾವತಿ, ಮುಖ್ಯೋಪಾಧ್ಯಾಯಿನಿ
-ಲಕ್ಷ್ಮೀನಾರಾಯಣ ರಾವ್