Advertisement
ಸೂರ್ಯೋದಯ, ಸೂರ್ಯಾಸ್ತ, ನಶಿಸುತ್ತಿರುವ ವನರಾಶಿ, ಬರಗಾಲ, ಪ್ರಕೃತಿಯ ರಮಣೀಯತೆ ಹತ್ತು ಹಲವು ವರ್ಣಗಳಲ್ಲಿ ಕ್ಯಾನ್ವಾಸಿನ ಮೇಲೆ ಜೀವಂತವಾಗಿ ಮೈತಳೆದವು. ಕಾಲ ಬದಲಾದಂತೆ ನಮ್ಮ ಜೀವನ ಶೆ„ಲಿ ಬದಲಾಗುತ್ತದೆ. ಹಾಗೆಯೇ ಅದರ ಪರಿಣಾಮ ಪ್ರಕೃತಿಯ ಮೇಲೆ ಉಂಟುಮಾಡುವ ಅಸಮತೋಲನೆಯನ್ನು ಸೂಕ್ಷ್ಮವಾಗಿ ಗಮನಿಸಿದ ವಿದ್ಯಾರ್ಥಿನಿ ಬರೆದ ಗೆರೆಗಳಲ್ಲಿ, ಚೆಲ್ಲಿದ ಬಣ್ಣಗಳಲ್ಲಿ ಒಳಗಿನ ನೋವು ವ್ಯಕ್ತವಾಗಿ ಬಿಂಬಿತವಾಗಿತ್ತು. ಚಿತ್ರದ ಒಂದು ಭಾಗ ಸುಂದರ ಪ್ರಕೃತಿಯ ಸೊಬಗಿಗೆ ಮರುಳಾಗಿತ್ತಾದರೂ ಇನ್ನರ್ಧ ಭಾಗ ಆಧುನಿಕ ಪ್ರಪಂಚದ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಬೆಳೆದುನಿಂತ ಕಟ್ಟಡಗಳ ನಡುವೆ ಸತ್ತು ಹೋದ ರೆಂಬೆ ಕೊಂಬೆಗಳು ಮರೆಯಾಗುತ್ತಿರುವ ಮಾನವೀಯ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಮೌನದಲ್ಲೇ ಕಂಬನಿ ಮಿಡಿಯುವ ಬಾನಾಡಿಯಂತೂ ನಾವು ಜಾಗ್ರತರಾಗಬೇಕಾದ ಅಗತ್ಯವನ್ನು ಸಾರಿ ಹೇಳುತ್ತಿತ್ತು. 9ನೇ ತರಗತಿ ವಿದ್ಯಾರ್ಥಿನಿ ಶಮೈಳಾಳ ಈ ಪ್ರಯತ್ನ ಶ್ಲಾಘನೀಯ.
Advertisement
ಕ್ರಿಯಾಶೀಲತೆಗೆ ವೇದಿಕೆಯಾದ ಚಿತ್ರ ಪ್ರದರ್ಶನ
12:30 AM Mar 08, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.