Advertisement
ಭ್ರಮೆ ಎಂದರೆ ಎಚ್ಚರವಾದ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿಯೇ ಹೊರಗಿನ ಪ್ರಚೋದನೆಯಿಲ್ಲದೆ ಆಗುವ ಒಂದು ಗೊತ್ತಿಲ್ಲದ ಅನುಭವ. ಈ ಅನುಭವವು ಸ್ಫುಟತೆ, ಸಾಕಾರತೆ, ಮತ್ತು ಹೊರಗಿನ ಚಿತ್ತಗೋಚರ ಸ್ಥಿತವಾಗಿರುವಿಕೆ ಮುಂತಾದ ನಿಜ ಅನುಭವದ ಲಕ್ಷಣಗಳನ್ನು ಹೊಂದಿರುತ್ತವೆ ಎಂದು ಹೇಳಬಹುದುದಾಗಿದೆ.
Advertisement
ಭ್ರಮೆಯ ಅಸ್ವಸ್ಥತೆಯು ವಿಲಕ್ಷಣವಲ್ಲದ ಭ್ರಮೆಗಳನ್ನು ಒಳಗೊಂಡಿರುತ್ತದೆ, ನಿಜ ಜೀವನದಲ್ಲಿ ಸಂಭವಿಸಬಹುದಾದ ಸನ್ನಿವೇಶಗಳೊಂದಿಗೆ ಸಂಬಂಧ ಹೊಂದಿದ್ದು, ಅನುಸರಿಸುವುದು, ಮೋಸ, ಪಿತೂರಿ, ಡಿಸ್ಟ್ಯಾನ್ಸ್ ಲವ್ವಿಂಗ್.. ಹೀಗೆ ಈ ಭ್ರಮೆಗಳು ಸಾಮಾನ್ಯವಾಗಿ ತಪ್ಪಾದ ಗ್ರಹಿಕೆಗಳು ಒಳಗೊಂಡಿರುತ್ತವೆ.
ಇದಕ್ಕೆ ವ್ಯತಿರಿಕ್ತವಾಗಿ, ವಿಲಕ್ಷಣ ಭ್ರಮೆ ನಿಜ ಜೀವನದಲ್ಲಿ ಎಂದಿಗೂ ಸಂಭವಿಸದ ಸಂಗತಿಯಾಗಿದೆ, ಇನ್ಯಾರೋ ಮಾಡಿರುವ ಕೆಲವನ್ನು ತಾನು ಮೊದಲೇ ಮಾಡಿದ್ದೇನೆ ಎನ್ನುವ ಹಾಗೆ ಅನ್ನಿಸುವುದು. ತನ್ನನ್ನು ನಾನು ಒಂದು ರೀತಿಯ ಭ್ರಮಾ ಲೋಕದಲ್ಲಿ ಇರಿಸಿಕೊಂಡು ಜಗತ್ತೇ ತನ್ನಿಂದ ನಡೆಯುತ್ತಿದೆ ಎನ್ನುವಂತೆ ಬದುಕುವವರು ಈ ಡೆಲ್ಯೂಶನಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರ್ಥ.
ಭ್ರಮೆಯ ಅಸ್ವಸ್ಥತೆ ಇತರ ಮಾನಸಿಕ ಅಸ್ವಸ್ಥತೆಗಳ ಜನರಿಗಿಂತ ಭಿನ್ನವಾಗಿದೆ, ಆದರೆ ಕೆಲವು ಸಂದರ್ಭಗಳಲ್ಲಿ, ಭ್ರಮೆಯ ಅಸ್ವಸ್ಥತೆಯುಳ್ಳ ಜನರು ತಮ್ಮ ಭ್ರಮೆಗಳಿಂದ ಮುಳುಗಬಹುದು ಮತ್ತು ಅವರ ಜೀವನವು ಭ್ರಮಾ ಲೋಕದಲ್ಲೇ ವ್ಯರ್ಥವಾಗಬಹುದು.
ಭ್ರಮೆಗಳು ಸ್ಕಿಜೋಫ್ರೇನಿಯಾದಂತಹ ಹೆಚ್ಚು ಸಾಮಾನ್ಯ ಅಸ್ವಸ್ಥತೆಗಳ ಲಕ್ಷಣವಾಗಿದ್ದರೂ, ಭ್ರಮೆಯ ಅಸ್ವಸ್ಥತೆಯು ಅಪರೂಪ. ಭ್ರಮೆಯ ಅಸ್ವಸ್ಥತೆಯು ಹೆಚ್ಚಾಗಿ ಮಧ್ಯ ವಯಸ್ಸಿನಿಂದ ಜೀವನದ ಕೊನೆಯ ತನಕ ಇರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಸ್ವಲ್ಪ ಹೆಚ್ಚಾಗಿ ಈ ಸಮಸ್ಯೆ ಕಂಡುಬರುತ್ತದೆ ಎನ್ನುತ್ತದೆ ಮನಃಶಾಸ್ತ್ರ.
ಭ್ರಾಂತಿಗಳು ಅಥವಾ ಡೆಲ್ಯೂಶನಲ್ ಹೆಚ್ಚಾಗಿ ಸ್ಕಿಜೋಫ್ರೇನಿಯಾ ಎಂಬ ಸ್ಥಿತಿಯೊಂದಿಗೆ ಸಂಬಂಧ ಹೊಂದಿವೆ, ಇದು ಮಾನಸಿಕ ಅಸ್ವಸ್ಥತೆಯಾಗಿದ್ದು, ಅವ್ಯವಸ್ಥೆಯ ಆಲೋಚನೆಗಳು ಮತ್ತು ನಡವಳಿಕೆಗಳಿಂದ ನಿರೂಪಿಸಲ್ಪಟ್ಟಿದೆ.
ಒಂದಿಷ್ಟು ಭ್ರಮೆಯ ವಿಧಗಳನ್ನು ಗಮನಿಸುವುದಾರೇ,
ಎರೋಟೊಮ್ಯಾನಿಕ್ : ಈ ಭ್ರಮೆಯ ವಿಧ ಹೇಗೆಂದೆರೆ, ಯಾರಾದರೂ ತಮ್ಮನ್ನು ಪ್ರೀತಿಸುತ್ತಿದ್ದಾರೆಂದು ನಂಬುವುದು ಮತ್ತ ಅದೇ ಪ್ರೀತಿಯ ಅಮಲಿನಲ್ಲಿ ಇರುವುದು ಹಾಗೂ ಆ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸುವುದು ಹೀಗೆಲ್ಲಾ ಇರುತ್ತದೆ. ಒಮ್ಮೊಮ್ಮೆ ಆ ಭ್ರಮೆಯ ಹುಡುಗಿ ಅಥವಾ ಹುಡುಗನ ಬಗ್ಗೆ ಅಸ್ಪಷ್ಟತೆಯೂ ಕೂಡ ಇರಬಹುದು. ಅಂದರೇ, ಈ ವಿಧದ ಭ್ರಮೆಯ ಸಮಸ್ಯೆ ಇರುವವರಿಗೆ ಒಂದು ವಿಷಯ ಅಥವಾ ವಸ್ತುವನ್ನು ಸುಖಾಸುಮ್ಮನೆ ಹಿಂಬಾಲಿಸುವ ಗುಣ ಇರುತ್ತದೆ. ಮತ್ತು ಆ ಹಿಂಬಾಲಿಸುವುದನ್ನು ಯಾರಿಗೂ ಕಾಣಿಸಿಕೊಳ್ಳದಂತೆ ಇರಲು ಸದಾ ಪ್ರಯತ್ನಶೀಲರಾಗಿರುತ್ತಾರೆ.
ಗ್ರ್ಯಾಂಡಿಯೋಸ್ ಡಿಸ್ ಆರ್ಡರ್ : ಈ ಸಮಸ್ಯೆ ಇರುವವರು ಜಗತ್ತಿನಲ್ಲಿ ಯಾರೂ ಮಾಡದೇ ಇರುವ ಹೊಸ ಆವಿಷ್ಕಾರವನ್ನು ಮಾಡಿದ್ದೇನೆ ಎನ್ನುವ ಹಾಗೆ ಭ್ರಮಾ ಲೋಕದಲ್ಲಿ ತಾನೊಬ್ಬ ಸರ್ವ ಗುಣ ಸಂಪನ್ನ ಎನ್ನುವ ಹಾಗೆ ಬದುಕುತ್ತಾರೆ. ಹೆಚ್ಚು ತಾನು, ನಾನು, ನನ್ನದು, ನನ್ನಿಂದಲೇ ಆಗಿದ್ದು ಎನ್ನುವ ಭ್ರಮಾ ಲೋಕದಲ್ಲಿ ಇರುತ್ತಾರೆ ಎಂದರೇ ತಪ್ಪಿಲ್ಲ.
ಜೆಲಸ್ ಅಥವಾ ಅಸೂಯೆ : ಸಾಮಾನ್ಯವಾಗಿ ಅಸೂಯೇ ಮನುಷ್ಯನಲ್ಲಿ ಇದ್ದೇ ಇರುತ್ತದೆ. ಆದರೇ, ತನಗೆ ದ್ರೋಹ ಬಗೆಯುತ್ತಿದ್ದಾನೆ, ಮೋಸ ಮಾಡುತ್ತಿದ್ದಾನೆ, ತನ್ನ ವಿರುದ್ಧವಾಗಿಯೇ ಎಲ್ಲಾ ಪಿತೂರಿ ಮಾಡುತ್ತಿದ್ದಾನೆ ಎಂಬ ಭ್ರಮೆಯಲ್ಲಿ ಅಥವಾ ಅತಿರೇಖದ ಅಸೂಯೇ ಅಲ್ಲಿಯೇ ಬದುಕುವ ಸಮಸ್ಯೆ ಎನನಬಹುದು. ಮತ್ತು ಈ ರೀತಿಯ ವ್ಯಕ್ತಿಯು ತಮ್ಮ ಸಂಗಾತಿ ಅಥವಾ ಲೈಂಗಿಕ ಸಂಗಾತಿ ವಿಶ್ವಾಸದ್ರೋಹಿ ಎಂದೇ ಇರುತ್ತಾರೆ.
ಪರ್ ಸೆಕ್ಯೂಟರಿ ಅಥವಾ ಕಿರುಕುಳ : ಈ ಸಮಸ್ಯೆಯನ್ನು ಹೊಂದಿರುವ ಯಾರಾದರೂ ಅವರು (ಅಥವಾ ಅವರಿಗೆ ಹತ್ತಿರವಿರುವ ಯಾರಾದರೂ) ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಅಥವಾ ಯಾರಾದರೂ ಅವರ ಮೇಲೆ ಬೇಹುಗಾರಿಕೆ ಮಾಡುತ್ತಿದ್ದಾರೆ ಅಥವಾ ಅವರಿಗೆ ಹಾನಿ ಮಾಡಲು ಯೋಜಿಸುತ್ತಿದ್ದಾರೆಂದು ಎನ್ನುವ ಭ್ರಮೆಯ ಭಯದಲ್ಲಿ ಇರುತ್ತಾರೆ.
ಸೊಮ್ಯಾಟಿಕ್ : ತಮಗೆ ದೈಹಿಕ ದೋಷ ಅಥವಾ ವೈದ್ಯಕೀಯ ಸಮಸ್ಯೆ ಇದೆ ಎಂದುಕೊಂಡೆ ಬದುಕುತ್ತಾರೆ. ಇದು ಒಂದು ರೀತಿಯ ಸಂಕುಚಿತ ಭಾವನೆ. ತಾನು ಸರಿಯಿಲ್ಲ, ತನ್ನಿಂದ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದೇ ಬದುಕುತ್ತಾರೆ ಹಾಗೂ ದಿನ ಪೂರ್ತಿ ಋಣಾತ್ಮಕವಾಗಿಯೇ ಯೋಚನೆ ಮಾಡುವುದರಲ್ಲಿ ಕಾಲ ಕಳೆಯುತ್ತಾರೆ.
ಮಿಕ್ಸಡ್ ಅಥವಾ ಮಿಶ್ರ : ಈ ಜನರು ಮೇಲೆ ಹೇಳಲಾದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭ್ರಮೆಗಳನ್ನು ಹೊಂದಿರುತ್ತಾರೆ.
ಒಟ್ಟಿನಲ್ಲಿ, ಮನುಷ್ಯ ಅವನಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಭ್ರಮೆಯಲ್ಲಿಯೇ ಬದುಕುತ್ತಾನೆ. ಆದರೇ ಅದು ಅತಿರೇಕಕ್ಕೆ ಹೋದರೇ ಅದು ಸಮಸ್ಯೆ ಎಂದು ಎನ್ನಿಸಿಕೊಳ್ಳುತ್ತದೆ.
ಭ್ರಮೆಯನ್ನು ಮೀರಿ ಬದುಕುತ್ತೇನೆ ಎನ್ನುವುದು ದೊಡ್ಡ ಭ್ರಮೆ.
-ಶ್ರೀರಾಜ್ ವಕ್ವಾಡಿ