Advertisement

ಐಎಫ್ಎಸ್‌ ಅಧಿಕಾರಿ ಆತ್ಮಹತ್ಯೆ

11:14 PM Sep 08, 2019 | Lakshmi GovindaRaju |

ಬೆಂಗಳೂರು: ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್), (ಐಎಫ್ಎಸ್‌ ಅಧಿಕಾರಿ) ಅವತಾರ್‌ ಸಿಂಗ್‌(52) ಅವರು ಭಾನುವಾರ ಬೆಳಗ್ಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮೇಲ್ನೋಟಕ್ಕೆ ಅವತಾರ್‌ ಸಿಂಗ್‌ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಯಲಹಂಕ ನ್ಯೂಟೌನ್‌ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್‌ ಅಥವಾ ಇತರೆ ಯಾವುದೇ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದರು.

Advertisement

ಹರಿಯಾಣ ಮೂಲದ ಅವತಾರ್‌ ಸಿಂಗ್‌ 1990ರ ಬ್ಯಾಚ್‌ನ ಐಎಫ್ಎಸ್‌ ಅಧಿಕಾರಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸಿರುವ ಅವರನ್ನು ಒಂದೂವರೆ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಮಲ್ಲೇಶ್ವರದ ಅರಣ್ಯ ಭವನದಲ್ಲಿರುವ ಅರಣ್ಯ ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಎಪಿಸಿಸಿಎಫ್)ಅಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ ಮಂದೀಪ್‌ಕೌರ್‌ ಮತ್ತು ಪುತ್ರ ಹಾಗೂ ಪುತ್ರಿ ಜತೆ ದೊಡ್ಡಬಳ್ಳಾಪುರ ರಸ್ತೆಯಲ್ಲಿರುವ ಪ್ರಸ್ಟೀಜ್‌ ಮೌಂಟ್‌ಕಾರ್ಲೋ ಅಪಾರ್ಟ್‌ ಮೆಂಟ್‌ನಲ್ಲಿದ್ದರು.

ಶನಿವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಭಾನುವಾರ ಮುಂಜಾನೆ ಮನೆಯಿಂದ ವಾಯುವಿಹಾರಕ್ಕೆ ತೆರಳಿ, ಒಂಭತ್ತು ಗಂಟೆಗೆ ವಾಪಸ್ಸಾಗಿದ್ದರು. ನಂತರ 9.30ರ ಸುಮಾರಿಗೆ ತಿಂಡಿ ತಿಂದು ತಮ್ಮ ಕೊಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. 10.30ಕ್ಕೆ ಪತ್ನಿ ಬಾಗಿಲು ಬಡಿದರೂ ತೆರೆದಿಲ್ಲ. ಆತಂಕಗೊಂಡು ಸ್ಥಳೀಯರನ್ನು ಕರೆದು ತೆರೆಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ.

ಘಟನೆ ತಿಳಿಯುತಿದ್ದಂತೆ ಸ್ಥಳಕ್ಕೆ ಧಾವಿಸಿ ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್‌ ವೈದ್ಯಕೀಯ ಆಸ್ಪತ್ರೆಗೆ ಮೃತರ ಶರೀರವನ್ನು ರವಾನಿಸಲಾಗಿದೆ ಎಂದು ಪೊಲೀಸರು ಹೇಳಿದರು. ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್‌ ಎಸ್‌ ಗುಳೇದ್‌, ಬೆನ್ನು ನೋವಿನಿಂದ ಬಳಲುತ್ತಿದ್ದದ್ದನ್ನು ಸ್ಪಷ್ಟಪಸಿಡಿದ್ದಾರೆ. ಈ ಸಂಬಂಧ ಅವರ ಪತ್ನಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next