Advertisement

ಬಜೆಟ್‌ ಇತಿಹಾಸದ ಪುಟಗಳಿಂದ…

11:53 AM Jan 31, 2020 | sudhir |

ದೇಶದ ವಾರ್ಷಿಕ ಆದಾಯ ಮತ್ತು ವ್ಯಯದ ಲೆಕ್ಕಾಚಾರವೇ ಬಜೆಟ್‌. ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿ ಬಜೆಟ್‌ ಮಂಡಿಸುವುದು ಕ್ರಮ. ನೂತನ ಹಣಕಾಸು ವರ್ಷದಲ್ಲಿ ಅದನ್ನು ಕಾರ್ಯಗತಗೊಳಿಸಲಾಗುತ್ತದೆ. ಅದರಲ್ಲೂ ಭಾರತದಂತಹ ಬೃಹತ್‌ ರಾಷ್ಟ್ರದಲ್ಲಿ ವಾರ್ಷಿಕ ಆದಾಯ-ವ್ಯಯ ಸಿದ್ಧಪಡಿಸುವುದು ಸವಾಲಿನ ಕೆಲಸವೇ ಸರಿ. ಇಂತಹ ಸವಾಲುಗಳನ್ನು ಮೆಟ್ಟಿ ನಿಂತು ಹಲವು ಕಾರಣಕ್ಕೆ ಬಜೆಟ್‌ನಲ್ಲಿಯೂ ದಾಖಲೆ ಬರೆದ ಒಂದಷ್ಟು ಗಣ್ಯರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ದೇಶದಲ್ಲಿ ಈ ಹಿಂದೆ ಮಂಡನೆಯಾದ ಪ್ರಮುಖ ಮತ್ತು ಐತಿಹಾಸಿಕ ಬಜೆಟ್‌ಗಳನ್ನೂ ನೀವು ಇಲ್ಲಿ ಕಾಣಬಹುದು.

Advertisement

ಭಾರತದ ಮೊದಲ ಬಜೆಟ್‌
ಸ್ವತಂತ್ರ ಭಾರತದ ಮೊದಲ ಹಣಕಾಸು ಮಂತ್ರಿ ಯಾಗಿದ್ದವರು ಆರ್‌.ಕೆ. ಷಣ್ಮುಖಂ ಚೆಟ್ಟಿ. 1947ರಿಂದ 1949ರವರೆಗೆ ವಿತ್ತೀಯ ಖಾತೆ ನಿರ್ವಹಿಸಿದ ಇವರು 1947ರ ನವೆಂಬರ್‌ 26ರಂದು ಸ್ವತಂತ್ರ ಭಾರತದ ಚೊಚ್ಚಲ ಬಜೆಟ್‌ ಮಂಡಿಸಿದ್ದರು. ಇದು ಸ್ವಾತಂತ್ರ್ಯ ಲಭಿಸಿದ ವರ್ಷ ರಚನೆಯಾದ ಸರಕಾರ.

ಪ್ರಧಾನಿಗಳು ಮಂಡಿಸಿದ ಬಜೆಟ್‌
ಒಟ್ಟು 3 ಪ್ರಧಾನ ಮಂತ್ರಿಗಳು ಈವರೆಗೆ ಬಜೆಟ್‌ ಮಂಡಿಸಿದ್ದಾರೆ. ಜವಾಹರ್‌ಲಾಲ್‌ ನೆಹರೂ ಅಂದಿನ ಹಣಕಾಸು ಸಚಿವರಾಗಿದ್ದ ಕೃಷ್ಣಮಾಚಾರಿ ರಾಜೀನಾಮೆ ನೀಡಿದ ಕಾರಣ ತಮ್ಮ ಚೊಚ್ಚಲ ಬಜೆಟ್‌ ಅನ್ನು ಪ್ರಧಾನಿಯಾಗಿ ಮಂಡಿಸಿದರು. 1970-71ರಲ್ಲಿ ಮೋರಾರ್ಜಿ ದೇಸಾಯಿ ಅವರ ಪದತ್ಯಾಗದ ಕಾರಣ ಇಂದಿರಾ ಗಾಂಧಿ ಅವರು ಮುಂಗಡಪತ್ರವನ್ನು ಮಂಡಿಸಿದರು. 1987-88ರಲ್ಲಿ ರಾಜೀವ್‌ ಗಾಂಧಿ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ.ಸಿಂಗ್‌ಗೆ ರಕ್ಷಣಾ ಖಾತೆಯ ಜವಾಬ್ದಾರಿ ನೀಡಿದಾಗ ಆ ಅವಧಿಯಲ್ಲಿ ರಾಜೀವ್‌ ಗಾಂಧಿ ಅವರು ಬಜೆಟ್‌ ಮಂಡಿಸಿದ್ದರು.

ಗಣರಾಜ್ಯಗೊಂಡ ಬಳಿಕ ಮೊದಲ ಬಜೆಟ್‌
ದೇಶದ ಮೂರನೇ ಹಣಕಾಸು ಸಚಿವರಾಗಿದ್ದ ಜಾನ್‌ ಮಥಾç ಅವರು 1950ರಲ್ಲಿ ಬಜೆಟ್‌ ಮಂಡಿಸಿದ್ದರು. ಇದು ದೇಶ ಸಂವಿಧಾನವನ್ನು ಅಳವ ಡಿಸಿಕೊಂಡ ಬಳಿಕ ಮಂಡಿಸಲಾದ ಪ್ರಥಮ ಬಜೆಟ್‌.

ಬಜೆಟ್‌ ಮರ್ಜ್‌
2017-18ರಲ್ಲಿ ಅರುಣ್‌ ಜೇಟಿÉ ಫೆ. 1ರಂದು ಬಜೆಟ್‌ ಮಂಡಿಸುವ ಪರಂಪರೆ ಪ್ರಾರಂಭಿಸಿದರು. ಮಾತ್ರವಲ್ಲದೇ ರೈಲ್ವೇ ಬಜೆಟ್‌ ಮತ್ತು ಹಣಕಾಸು ಬಜೆಟ್‌ ಅನ್ನು ವಿಲೀನ ಮಾಡಿದ್ದು ಅದೇ ವರ್ಷ.

Advertisement

ಅತೀ ದೀರ್ಘ‌ ಭಾಷಣ
ಬಜೆಟ್‌ ವೇಳೆ ಅತೀ ದೀರ್ಘ‌ ಭಾಷಣ ಮಾಡಿದವರಲ್ಲಿ ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮೊದಲಿಗರಾಗಿದ್ದಾರೆ. ಒಟ್ಟು 2.15 ನಿಮಿಷ ಅವರು ಮಾತನಾಡಿದ್ದಾರೆ. ಯಶ್ವಂತ್‌ ಸಿನ್ಹಾ ಅವರು 2.12 ಗಂಟೆ ಬಜೆಟ್‌ ಭಾಷಣ ಮಾಡಿದ್ದಾರೆ. 1977ರಲ್ಲಿ ಸಚಿವರಾಗಿದ್ದ ಹೀರುಬಾಯಿ ಪಟೇಲ್‌ ಅವರು ಅತ್ಯಂತ ಕಡಿಮೆ ಅವಧಿಯ ಭಾಷಣ ಮಾಡಿದ ಮೊದಲ ಹಣಕಾಸು ಸಚಿವರಾಗಿದ್ದಾರೆ.

ಆರ್‌ಬಿಐ ಗವರ್ನರ್‌ ಮಂಡಿಸಿದ ಬಜೆಟ್‌
ಗವರ್ನರ್‌ ಕೂಡ ಈ ಹಿಂದೆ ಬಜೆಟ್‌ ಮಂಡಿಸಿದ್ದಾರೆ. 1951-52ನೇ ಸಾಲಿನ ಬಜೆಟ್‌ ಅನ್ನು ಅಂದಿನ ಗವರ್ನರ್‌ ಸಿ.ಡಿ.ದೇಶ್‌ ಮುಖ್‌ ಮಂಡಿಸಿದ್ದರು.

ಬಜೆಟ್‌ ಅವಧಿ ಬದಲಾವಣೆ
2000ದ ತನಕ ಬಜೆಟ್‌ ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಇದು ಬ್ರಿಟಿಷ್‌ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ. ಬಜೆಟ್‌ ಭಾಷಣ ಸಂಜೆ 5ಕ್ಕೆ ಆರಂಭವಾಗುವ ಸಂಪ್ರದಾಯವನ್ನು ಜಾರಿಗೆ ತಂದವರು ಸರ್‌ ಬೇಸಿಲ್‌ ಬ್ಲಾಕೆಟ್‌. 1924ರಲ್ಲಿ ರಾತ್ರಿಯಿಡೀ ದುಡಿದ ಅಧಿಕಾರಿಗಳಿಗೆ ವಿಶ್ರಾಂತಿ ನೀಡಲು ಹಾಗೂ ದಿನದ ವ್ಯವಹಾರ ಮುಗಿಸಿದ ವ್ಯಾಪಾರಿಗಳಿಗೆ ಬಜೆಟ್‌ ಅಧ್ಯಯನ ನಡೆಸಲು ಈ ಸಮಯ ನಿಗದಿ ಮಾಡಿದ್ದರು. ಯಶ್ವಂತ್‌ ಸಿನ್ಹಾ ಬೆಳಗ್ಗೆ 11 ಗಂಟೆಗೆ ಮಂಡಿಸುವ ಮೂ ಲಕ ಹೊಸ ಕ್ರಮಕ್ಕೆ ನಾಂದಿ ಹಾಡಿದರು.

ಅತೀ ಹೆಚ್ಚು ಬಜೆಟ್‌
ಮೊರಾರ್ಜಿ ದೇಸಾಯಿ 8 ವಾರ್ಷಿಕ ಮತ್ತು 2 ಮಧ್ಯಾವಧಿ ಬಜೆಟ್‌ ಸೇರಿ ಒಟ್ಟು 10 ಬಜೆಟ್‌ ಮಂಡಿಸಿದ್ದಾರೆ. ಜನ್ಮದಿನದಂದೇ ಬಜೆಟ್‌ ಮಂಡಿಸಿದ ಹೆಗ್ಗಳಿಕೆಯೂ ದೇಸಾಯಿ ಅವರದ್ದು. ಫೆ. 29 ಮೊರಾರ್ಜಿ ಹುಟ್ಟಿದ ದಿನ. ಅವರು 1964 ಹಾಗೂ 1968ರಲ್ಲಿ ಫೆ.29ರಂದು ಬಜೆಟ್‌ ಮಂಡಿಸಿದ್ದರು. ಇನ್ನು ಅತೀ ಹೆಚ್ಚು ಬಜೆಟ್‌ ಮಂಡಿಸಿದ ಹಣಕಾಸು ಸಚಿವರ ಬಳಿಕದ ಸ್ಥಾನದಲ್ಲಿ ಪಿ. ಚಿದಂಬರಂ (9), ಪ್ರಣವ್‌ ಮುಖರ್ಜಿ (8), ಯಶ್ವಂತ್‌ ಸಿನ್ಹಾ, ಯಶ್ವಂತ್‌ ರಾವ್‌ ಚವಾಣ್‌ ತಲಾ 8, ಡಾ| ಮನ್‌ಮೋಹನ್‌ ಸಿಂಗ್‌, ಟಿ.ಟಿ. ಕೃಷ್ಣಮಾಚಾರಿ ತಲಾ 6 ಬಜೆಟ್‌ ಮಂಡಿಸಿದ್ದಾರೆ.

1991ರ ಆ ಬಜೆಟ್‌
ನರಸಿಂಹ ರಾವ್‌ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ಡಾ| ಮನ್‌ಮೋಹನ್‌ ಸಿಂಗ್‌ ಅವರ ಬಜೆಟ್‌ ಸ್ವತಂತ್ರ ಭಾರತದ ಮಹತ್ವದ ಬಜೆಟ್‌ಗಳಲ್ಲಿ ಒಂದು. ಅಂದು ದೇಶದ ಆರ್ಥಿಕತೆಗೆ ಹಿನ್ನಡೆಗಳು ಸಂಭವಿಸಿದಾಗ ಆರ್ಥಿಕ ಸುಧಾರಣೆಗಾಗಿ ಎಲ್‌.ಪಿ.ಜಿ. ಜಾರಿಗೆ ತರಲಾಗಿತ್ತು. ಡಾ| ಸಿಂಗ್‌ ಅವರ 1991ರ ಆ ಸುಧಾರಣೆ ಭಾರತವನ್ನು ಹೊಸ ದಿಕ್ಕಿನತ್ತ ಮುಖ ಮಾಡುವಂತೆ ಮಾಡಿತ್ತು.

ಮೂರು ಬಜೆಟ್‌
1990ರ ದಶಕದಲ್ಲಿ ಮೂರು ಬಾರಿ ಮಧ್ಯಂತರ ಬಜೆಟ್‌ ಮಂಡನೆಯಾದವು. 1991-91 ಮತ್ತು 1998-99ರಲ್ಲಿ ಯಶವಂತ ಸಿನ್ಹಾ ಅವರು, 1996-97ರಲ್ಲಿ ಮನಮೋಹನ ಸಿಂಗ್‌ ಮಧ್ಯಂತರ ಬಜೆಟ್‌ ಮಂಡಿಸಿದ್ದರು.

ಬಜೆಟ್‌ ಮಂಡಿಸಿದ ಮಹಿಳೆ
1970-71ರಲ್ಲಿ ಪ್ರಧಾನಿಯಾಗಿದ್ದು, ಹಣಕಾಸು ಸಚಿವಾಲಯ ನಿರ್ವಹಿಸಿದ್ದ ಇಂದಿರಾ ಗಾಂಧಿ ಅವರು ಬಜೆಟ್‌ ಮಂಡಿಸಿದ ಮೊದಲ ಮಹಿಳೆ. ಬಳಿಕ ಪೂರ್ಣ ಸಮಯದ ಬಜೆಟ್‌ ಮಂಡಿಸಿದ ಮೊದಲ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲ್ಲುತ್ತದೆ.

ಬಜೆಟ್‌ ಪ್ರತಿ ಮುದ್ರಣವಾಗುವುದೆಲ್ಲಿ? ಆರಂಭದಲ್ಲಿ ಬಜೆಟಿನ ಪ್ರತಿಗಳನ್ನು ರಾಷ್ಟ್ರಪತಿ ಭವನದಲ್ಲಿ ಮುದ್ರಿಸಲಾಗುತ್ತಿತ್ತು. 1950ರಲ್ಲಿ ಬಜೆಟ್‌ ಪ್ರತಿಗಳು ಸೋರಿಕೆಯಾದವು. ಬಳಿಕ ಮುದ್ರಣ ಸ್ಥಳವನ್ನು ಮಿಂಟೋ ರಸ್ತೆಯಲ್ಲಿರುವ ಸೆಕ್ಯುರಿಟಿ ಪ್ರಸ್‌ಗೆ ವರ್ಗಾಯಿಸಲಾಯಿತು. ಸದ್ಯ ನಾರ್ತ್‌ ಬ್ಲಾಕಿನ ಮುದ್ರಣಾಲಯದಲ್ಲಿ ಮುದ್ರಣ ನಡೆಯುತ್ತದೆ. 1980ರಲ್ಲಿ ನಾರ್ತ್‌ ಬ್ಲಾಕಿನಲ್ಲೂ ಪ್ರತಿಗಳು ಸೋರಿಕೆಯಾದ್ದವು. ಬಜೆಟ್‌ ದಾಖಲೆಗಳೆಲ್ಲ ಸಿದ್ಧವಾದ ಬಳಿಕ ಬಜೆಟ್‌ ಭಾಷಣ ರಚಿಸುವ ಕಾರ್ಯ ಶುರುವಾಗುತ್ತದೆ. ಬಜೆಟ್‌ ಮಂಡನೆಗೆ ಇನ್ನು 10 ರಿಂದ 12 ದಿನ ಬಾಕಿ ಇರುವಾಗಲೇ ಬಜೆಟ್‌ ಪ್ರತಿಗಳ ಮುದ್ರಣ ಕಾರ್ಯ ಸಚಿವಾಲಯ ಇರುವ ನಾರ್ತ್‌ ಬ್ಲಾಕಿನಲ್ಲೇ ನಡೆಯುತ್ತದೆ. ಆಗ ಅಲ್ಲಿಗೆ ಯಾರಿಗೂ ಪ್ರವೇಶವಿರುವುದಿಲ್ಲ.

ಮನೆಗೂ ಹೋಗುವಂತಿಲ್ಲ: ಬಜೆಟ್‌ ಮಂಡನೆಯಾಗುವ ದಿನದ ಹಿಂದಿನ ವಾರದಿಂದ ಹಿಡಿದು ಮಂಡನೆಯಾಗುವವರೆಗೂ ಮುದ್ರಣ ವಿಭಾಗದ ಸಿಬ್ಬಂದಿ ಮನೆಗೂ ಹೋಗುವಂತಿಲ್ಲ. ಬಾಹ್ಯ ಜಗತ್ತಿನ ಜತೆ ಸಂಪರ್ಕವನ್ನೂ ಇಟ್ಟುಕೊಳ್ಳುವಂತಿಲ್ಲ. ಅವರೆಲ್ಲ ಹಣಕಾಸು ಸಚಿವಾಲಯದಲ್ಲೇ ಇರಬೇಕು.

2013ರ ಬಜೆಟ್‌: 2013-14ರ ಬಜೆಟ್‌ನಲ್ಲಿ “ಮಹಿಳೆ’ (24 ಸಲ) ಹೆಚ್ಚು ಬಳಕೆಯಾದ ಪದಗಳಲ್ಲೊಂದು. 2012ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಅಂದಿನ ಸರಕಾರ ಮಹಿಳೆಯರಿಗಾಗಿ ಅಗತ್ಯ ಸುರಕ್ಷಾ ಕ್ರಮಗಳು, ಮಹಿಳಾ ಬ್ಯಾಂಕ್‌ ಸೇರಿ ಹಲವು ಕಾರ್ಯಕ್ರಮಗಳನ್ನು ಪ್ರಕಟಿಸಿತ್ತು.

ಮೊದಲ ಬಜೆಟ್‌, ಮಧ್ಯಂತರ ಬಜೆಟ್‌: ಸ್ವಾತಂತ್ರಾ ನಂತರ ಮೊದಲ ಬಜೆಟ್‌ ನ. 26, 1947ರಂದು ಮಂಡಿಸಲಾಯಿತು. ಅದು ಮಧ್ಯಂತರ ಬಜೆಟ್‌ ಆಗಿತ್ತು. ಮೊದಲ ಹಣಕಾಸು ಸಚಿವ ಆರ್‌. ಕೆ. ಷಣ್ಮುಖಂ ಚೆಟ್ಟಿ ಅವರು ಮಂಡಿಸಿದ್ದರು. ಆರ್ಥಿಕತೆ ಪರಿಶೀಲಿಸಲಾಯಿತೇ ಹೊರತು ಯಾವುದೇ ಹೊಸ ತೆರಿಗೆ ಪರಿಚಯಿಸಿರಲಿಲ್ಲ. ಏಕೆಂದರೆ ಮುಂದಿನ ಬಜೆಟ್‌ ಅವಧಿ ನೂರು ದಿನಕ್ಕಿಂತ ಕಡಿಮೆ ಇತ್ತು.

ಕನಸಿನ ಬಜೆಟ್‌ : 1997-98ನೇ ಸಾಲಿನ ಬಜೆಟ್‌ ಅನ್ನು ಕನಸಿನ ಬಜೆಟ್‌ ಎಂದು ಕರೆಯಲಾಗುತ್ತದೆ. ಏಕೆಂದರೆ ಆದಾಯ ತೆರಿಗೆ, ಕಾರ್ಪೊರೇಟ್‌ ತೆರಿಗೆ ಇಳಿಕೆಯಂಥ ಮಹತ್ತರವಾದ ಸುಧಾ ರಣೆ ತಂದ ವರ್ಷ ಅದು. ಆ ಬಜೆಟ್‌ ಪಿ. ಚಿದಂಬರಂ ಮಂಡಿಸಿದರು.

ಸಾಂವಿಧಾನಿಕ ಬಿಕ್ಕಟ್ಟು : 1998-99ನೇ ಸಾಲಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಬಜೆಟ್‌ಗೆ ಸಮ್ಮತಿ ಲಭಿಸಿತ್ತು. ಆ ಸಮ ಯದಲ್ಲಿ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆಗಿನ ಐ.ಕೆ. ಗುಜ್ರಾಲ್‌ ಸರಕಾರ ವಿಸರ್ಜನೆಯ ಹಂತದಲ್ಲಿತ್ತು. ಬಜೆಟ್‌ ಅಂಗೀಕಾರಕ್ಕಾಗಿಯೇ ವಿಶೇಷ ಅಧಿವೇಶನ ಕರೆಯಲಾಗಿತ್ತು.

ಸೂಟ್‌ಕೇಸ್‌ ಇಲ್ಲದ ಬಜೆಟ್‌: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರಕಾರದ ಮೊದಲ ಬಜೆಟ್‌ ಗಮನ ಸೆಳೆದಿತ್ತು. ನಿರ್ಮಲಾ ಸೀತಾರಾಮನ್‌ ಅವರು ಎಂದಿನಂತೆ ಚರ್ಮದ “ಬ್ರಿಫ್ಕೇಸ್‌’ ತರುವ ಬದಲು ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುತ್ತಿ ತಂದಿದ್ದು ಗಮನ ಸೆಳೆದಿತ್ತು. ವಸಾಹ ತುಶಾಹಿ ಸಂಸ್ಕೃತಿಗೆ ವಿದಾಯ ಹಾಡಿ, ಭಾರತೀಯ ಅಸ್ಮಿತೆಯನ್ನು ಅಭಿವ್ಯಕ್ತಿಸುವ ಸಂಕೇತವಾಗಿ ಈ ಕ್ರಮ ಎಂದು ಪಕ್ಷ ಸಮರ್ಥಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next