Advertisement

ಗುಜರಾತ್‌ಗೆ ಅಸಾಮಾನ್ಯ ಗೆಲುವು

11:15 PM Jul 26, 2019 | Team Udayavani |

ಹೈದರಾಬಾದ್‌: ಶುಕ್ರವಾರ ನಡೆದ ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಗುಜರಾತ್‌ ಫಾರ್ಚೂನ್‌ ಜೈಂಟ್ಸ್‌ 44-19 ಅಂಕಗಳ ಅಂತರದಿಂದ ಯುಪಿ ಯೋಧಾಗೆ ಸೋಲುಣಿಸಿದೆ. ಗುಜರಾತ್‌ ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದರೆ, ಯುಪಿ ಯೋಧಾ ಎರಡೂ ಪಂದ್ಯವನ್ನು ಸೋತಂತಾಗಿದೆ.

Advertisement

ಗುಜರಾತ್‌ ಅದ್ಭುತವಾಗಿ ಆಡಿ ಎದುರಾಳಿಗೆ ಉಸಿರೆತ್ತಲು ಸಾಧ್ಯವಾಗದಂತೆ ಮಟ್ಟ ಹಾಕಿತು. ಯೋಧಾ ಬರೀ 19 ಅಂಕ ಕಲೆ ಹಾಕಿದ್ದೇ ಇದಕ್ಕೆ ಸಾಕ್ಷಿ. ಯೋಧಾ ಪರ ರೈಡರ್‌ ಶ್ರೀಕಾಂತ್‌ ಜಾಧವ್‌ ಮತ್ತು ಡಿಫೆಂಡರ್‌ ನಿತೇಶ್‌ ಕುಮಾರ್‌ ಸಾಮಾನ್ಯ ಪ್ರದರ್ಶನವಿತ್ತರು. ಶ್ರೀಕಾಂತ್‌ 12 ರೈಡ್‌ಗಳಲ್ಲಿ 5 ಅಂಕ, ನಿತೇಶ್‌ 6 ಟ್ಯಾಕಲ್‌ಗ‌ಳಲ್ಲಿ 2 ಅಂಕ ತಂದಿತ್ತರು.

ಗುಜರಾತ್‌ ಭರ್ಜರಿ ಪ್ರದರ್ಶನದೊಂದಿಗೆ ಸರ್ವಾಂಗೀಣ ಯಶಸ್ಸು ಸಾಧಿಸಿತು. ರೈಡರ್‌ ರೋಹಿತ್‌ ಗುಲಿಯ 18 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿ 10 ಅಂಕ ಗಳಿಸಿದರು. ಪರ್ವೇಶ್‌ ರಕ್ಷಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. 6 ಬಾರಿ ಎದುರಾಳಿಯನ್ನು ಕೆಡವಿಕೊಳ್ಳಲು ಯತ್ನಿಸಿ ಶೇ.100 ಯಶಸ್ಸು ಗಳಿಸಿದರು.

ಟೈಟಾನ್ಸ್‌ಗೆ ಸತತ 4ನೇ ಸೋಲು
ಶುಕ್ರವಾರ ನಡೆದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡ 22-34 ಅಂಕಗಳ ಅಂತರದಿಂದ ಪಾಟ್ನಾ ಪೈರೇಟ್ಸ್‌ ತಂಡದ ವಿರುದ್ಧ ಸೋಲನುಭವಿಸಿತು. ಇದು ತೆಲುಗು ತಂಡಕ್ಕೆ ಎದುರಾದ ಸತತ 4ನೇ ಸೋಲು. ತನ್ನದೇ ಊರಲ್ಲಿ ಟೈಟಾನ್ಸ್‌ ನೀಡಿರುವ ಹೀನಾಯ ಪ್ರದ ರ್ಶನ ಅಭಿಮಾನಿಗಳ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಇದು ಪಾಟ್ನಾ ಪೈರೇಟ್ಸ್‌ ಸಾಧಿಸಿದ ಮೊದಲ ಗೆಲುವು. ಎರಡೂ ತಂಡಗಳು ಉತ್ತಮ ಹೋರಾಟ ನಡೆಸಿದರೂ ಪಾಟ್ನಾ ಬಹಳ ಆಕ್ರಮಣಕಾರಿಯಾಗಿ ಗೋಚರಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next