Advertisement

ಅನುಭಾವಿ ಪಯಣಿಗ

02:40 PM Apr 24, 2021 | Team Udayavani |

ಬಾಳ ಸಂಧ್ಯಾಕಾಲಕೆ ಅನುಭಾವಿ ಪಯಣಿಗ|

Advertisement

ಸಿದ್ಧಹಸ್ತನು ತಾನು ಹರೆಯದ ಒಡನಾಟಕೆ || 1 ||

ಸಾಗುತ್ತ ಹೊರಟಿಹ ಎಲ್ಲ ಗೊತ್ತು ಜಗದ ಗಮ್ಮತ್ತು|

ಊರುಗೋಲಿದೆ ಅಂದಿನದೇಸ್ವಾಭಿಮಾನ ಗತ್ತು || 2 ||

ವೃದ್ಧಾಪ್ಯ ದೇಹದ ನೈಜ ಸೊತ್ತು ಮನ ಹಾಡಿತ್ತು|

Advertisement

ಸಚ್ಚಿಟತನಾ ಲಹರಿಯಲಿಸುಶ್ರಾವ್ಯದ ಮುತ್ತು || 3 ||

ನೋಟ ಮಸುಕಾಗಿ ಕೈ ಕೊಂಚ ನಡುಗಿತ್ತು|

ಎಳೆಯರ ಒಂದಿಷ್ಟು ಸಹವಾಸದಿನಡೆ ಸಾಗಿತ್ತು || 4 ||

ನೆರಿಗೆಯ ತೊಗಲಿನ ಸ್ಪರ್ಶದಿ ಆತ್ಮೀಯಧಾರೆ|

ಸ್ಪಂದಿಸಿದ ಎಳೆಯರಿಗೆ ಪುಕ್ಕಟೆ ಸುಜ್ಞಾನಧಾರೆ || 5 ||

ಬಿಚ್ಚಿಟ್ಟು ನಾನಾ ಲೆಕ್ಕಾಚಾರ ಕಲೆಗಳ ತಂತ್ರಗಾರಿಕೆ|

ತೋರ್ಗೊಡದೆ ನೋವ ಹಾಸ್ಯದಿಮಾತುಗಾರಿಕೆ || 6 ||

ದಣಿವರಿಯದೇ ನಡೆಸಿದ್ದ ಶ್ರಮದಿ ಉದ್ದನೆ ಸಾಧನೆ|

ಅಹಂ ಸುಳಿಗೊಡಲಿಲ್ಲ ಮಹಾಶೀಲಸಂವೇದನೆ || 7 ||

ವೃದ್ಧರು ಇರಲಿ ವಿಶಾಲವಾಗಲಿ ಮನದ ಕೊಠಡಿ|

ಪೀಳಿಗೆ ಅಂತರ ಹೆಚ್ಚಾಗಿಸದೆ ಕೆಚ್ಚಾಗಲಿಸ್ಪಂದನೆ || 8 ||

ಆಧ್ಯಾತ್ಮ ಹೆಚ್ಚಾಯ್ತು ತಾತನದು ಕೊನೆಕೊನೆಗೆ|

ರಾಮನಾಮ ತರಂಗಗಳಲಿ ಮಿಂದದ್ದು ಮನೆಮಂದಿಯೆಲ್ಲ || 9 ||

ವೃದ್ಧಾಶ್ರಮದಲ್ಲಾದರೂ ಸೇವೆಗೈದರೆ ಕೊಂಚ ಸಮಯ|

ಅಜ್ಜಿ ತಾತಾ ಇಲ್ಲೆಂಬ ಗೊಣಗಾಟ ಹುಸಿ ಆಗುವುದಲ್ಲ || 10 ||

ಹತ್ತಿಬೆಳಗಲ್‌ ನಾಗರಾಜ ರಾವ್‌, ಜರ್ಮನಿ

Advertisement

Udayavani is now on Telegram. Click here to join our channel and stay updated with the latest news.

Next