Advertisement

ಮಂಡಿ ನೋವು ನಿವಾರಣೆಗೆ ಸುಲಭ ಮಾರ್ಗ

10:58 PM Dec 16, 2019 | Sriram |

ಮಂಡಿ ನೋವು ಸಾಮಾನ್ಯವಾಗಿ ಎಲ್ಲ ವಯಸ್ಸಿನವರಿಗೂ ಕಾಡುವ ಆರೋಗ್ಯ ಸಮಸ್ಯೆ. ಮಂಡಿ ನೋವಿಗೆ ಸಾವಿರಾರು ಕಾರಣಗಳಿರುತ್ತವೆ. ಕೆಲವರಿಗೆ ಚಳಿಗಾಲದಲ್ಲಿ ಮಾತ್ರ ಕಂಡು ಬಂದರೆ ಇನ್ನು ಕೆಲವರಿಗೆ ಪೋಷಕಾಂಶಗಳ ಕೊರತೆಯಿಂದ ಕಂಡು ಬರುತ್ತದೆ. ಕೆಲವು ಸರಳ ವ್ಯಾಯಾಮ ಮಾಡುವುದರಿಂದ ಇದನ್ನು ನಿವಾರಿಸಿಕೊಳ್ಳಬಹುದು.
ಮಂಡಿನೋವು ಚಳಿಗಾಲದಲ್ಲಿ ಸಾಮಾನ್ಯವಾಗಿ ಜಾಸ್ತಿಯಾಗಿ ಕಂಡು ಬರುತ್ತವೆ. ಜೀವನ ಶೈಲಿ ಇಂದು ಬದಲಾಗಿದೆ. ಆಹಾರ ಪದ್ಧತಿ, ಒತ್ತಡದ ಬದುಕು ಇವೆಲ್ಲವೂ ಇದರ ಮೇಲೆ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ಮಂಡಿಯ ಸ್ನಾಯುಗಳು ಬಲಿಷ್ಠವಾಗಿರಬೇಕು ಹಾಗಾಗಿ ಪೋಷಕಾಂಶಯುಕ್ತ ಆಹಾರಗಳನ್ನು ತಿನ್ನುವುದು ಅಗತ್ಯ.

Advertisement

ಮಂಡಿರಜ್ಜು ಸುರುಳಿ
ಇದು ಸುಲಭವಾಗಿ ಮಾಡಬಹುದಾಗಿದ್ದು, ನೇರವಾಗಿ ನಿಂತು ಕಾಲುಗಳನ್ನು ಸುಮಾರು 1-2 ಇಂಚು ಅಗಲದಲ್ಲಿ ಇಟ್ಟುಕೊಳ್ಳಿ. ಅನಂತರ ಬಲದ ಕಾಲಿನ ಮಂಡಿಯನ್ನು ದೇಹದ ಹಿಂಭಾಗಕ್ಕೆ ಬಗ್ಗಿಸಿ ಇದು 90 ಡಿಗ್ರಿ ಕೋನದಲ್ಲಿರಲಿ. ಈ ರೀತಿ ತುಂಬಾ ಹೊತ್ತು ಇರಲು ಪ್ರಯತ್ನಿಸಿ. ಇನ್ನೊಂದು ಕಾಲಿಗೂ ಇದೇ ರೀತಿ ವ್ಯಾಯಾಮ ಮಾಡಿ. 10ರಿಂದ 20 ನಿಮಿಷ ಮಾಡಿ. ಇದರಿಂದ ಮಂಡಿಯ ಸ್ನಾಯು ಬಲಗೊಳ್ಳುತ್ತದೆ.

ಇನ್ನೊಂದು ಸರಳ ವ್ಯಾಯಾಮ ಎಂದರೆ ನೀವು ನಿಂತುಕೊಂಡಲ್ಲಿ ನಿಮ್ಮ ಕಾಲುಗಳನ್ನು ಎದೆಯ ಭಾಗದವರೆಗೆ ಎತ್ತಬೇಕು ಅನಂತರ ಇನ್ನೊಂದು ಕಾಲನ್ನು ಹಾಗೇ ಮಾಡಬೇಕು. ಇದು ಕೂಡ ಮಂಡಿ ನೋವನ್ನು ಕಡಿಮೆ ಮಾಡುತ್ತದೆ.

ಬೆನ್ನು ಬಾಗಿಸಿ
ನೇರವಾಗಿ ನಿಂತು ನಿಧಾನವಾಗಿ ಬಗ್ಗಿ, ಅನಂತರ ಕಾಲುಗಳನ್ನು ಹತ್ತಿರವಿಟ್ಟು ಕಾಲುಗಳನ್ನ ನೇರವಾಗಿರಿಸಿ ಅನಂತರ ಕೈಗಳನ್ನು ನೆಲಕ್ಕೆ ಸ್ಪರ್ಶಿಸಿ. 50 ಸೆಕೆಂಡ್‌ ಹಾಗೆ ಇರಲು ಪ್ರಯತ್ನಿಸಿ. ಇದರಿಂದ ಕಾಲುಗಳು ಬಲಗೊಳ್ಳುವುದಲ್ಲದೆ ಮಂಡಿ ನೋವನ್ನು ಕಡಿಮೆ ಮಾಡುತ್ತದೆ.

ಹೀಗೆ ದಿನವೂ ಮಾಡುವುದರಿಂದ ಮಂಡಿ ನೋವು ಕಡಿಮೆ ಆಗುವುದಲ್ಲದೆ ಆರೋಗ್ಯಪೂರ್ಣ ಜೀವನ ನಿಮ್ಮದಾಗುತ್ತದೆ.

Advertisement

ಸರಳ ವ್ಯಾಯಾಮ
ನೆಲದ ಮೇಲೆ ಮಲಗಿಕೊಂಡು ಒಂದು ಕಾಲನ್ನು ನಿಧಾನವಾಗಿ ಮೇಲಕ್ಕೇರಿಸಿ. ಕೈಗಳು ನೆಲದ ಮೇಲೆ ನೇರವಾಗಿ ಇರಲಿ. ನಿಧಾನವಾಗಿ ಎರಡು ಕಾಲುಗಳನ್ನು ಮೇಲಕ್ಕೆರಿಸಿ ತುಂಬಾ ಹೊತ್ತು ಹಾಗೆಯೇ ಇರಲು ಪ್ರಯತ್ನಿಸಿ. ಇದು ಕಾಲುಗಳನ್ನು ಬಲಗೊಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next