Advertisement

ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಇಂಜಿನಿಯರ್‌ ಮೃತದೇಹ ಪತ್ತೆ

06:22 PM Feb 11, 2023 | Team Udayavani |

ಟರ್ಕಿ: ಟರ್ಕಿಯ ಭೀಕರ ಭೂಕಂಪದ ಬಳಿಕ ನಾಪತೆಯಾಗಿದ್ದ ಬೆಂಗಳೂರಿನ ಎಂಜಿನಿಯರ್‌ ಒಬ್ಬರ ಶವ ತಾವು ನೆಲೆಸಿದ್ದ ಹೊಟೆಲಿನ ಅವಶೇಷಗಳ ಅಡಿಯಲ್ಲೇ ಪತ್ತೆಯಾಗಿದೆ. ಮೂಲತಃ ಉತ್ತರಾಖಾಂಡ್‌ ಮೂಲದವರಾದ ವಿಜಯ್‌ ಕುಮಾರ್‌ (35), ಬೆಂಗಳೂರಿನ ಓಕ್ಸಿಪ್ಲಾಂಟ್‌ ಇಂಡಿಯಾ ಕಂಪನಿಯಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅನುಸ್ಥಾಪನಾ ಇಂಜಿನಿಯರ್‌ ಆಗಿ ಉದ್ಯೋಗದಲ್ಲಿದ್ದರು.

Advertisement

ಪ್ರಾಜೆಕ್ಟ್‌ ವರ್ಕ್‌ ಸಂಬಂಧಿ ಕೆಲಸಕ್ಕೋಸ್ಕರ ಜ.23ರಂದು ಟರ್ಕಿಗೆ ತೆರಳಿದ್ದ ವಿಜಯ್‌ ಮಲಾತ್ಯಾ ನಗರದಲ್ಲಿರುವ ಅವ್ಸರ್‌ ಹೋಟೆಲ್‌ನಲ್ಲಿ ಎಂಬ ತಾರಾ ಹೋಟೆಲಿನಲ್ಲಿ ವಾಸ್ತವ್ಯ ಪಡೆದಿದ್ದರು.

ಕೆಲ ದಿನಗಳ ಹಿಂದೆ ನಡೆದಿದ್ದ ಟರ್ಕಿ ಭೂಕಂಪದ ಬಳಿಕ ವಿಜಯ್‌ ಕುಮಾರ್‌ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ತಾವು ನೆಲೆಸಿದ್ದ 24 ಅಂತಸ್ತಿನ ಅವ್ಸರ್‌ ಹೋಟೆಲ್‌ನ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದ್ದು ಅವರ ಕುಟುಂಬಸ್ಥರು ಅವರ ಎಡ ಕೈಯಲ್ಲಿದ್ದ ಟ್ಯಾಟೂ ಚಿತ್ರ ಆಧರಿಸಿ ಅವರನ್ನು ಗುರುತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next