Advertisement
ಜಗತ್ತಿನ ಶ್ರೇಷ್ಠ ವ್ಯೋಮ ವಿಜ್ಞಾನಿ ಡಾ| ಯು. ಆರ್. ರಾವ್ ಖಾಸಗಿ ಬದುಕು ಹೇಗಿತ್ತು? ಮನೆಯಲ್ಲಿ ಶುಚಿ ರುಚಿಯಾದ ಅಡುಗೆ ಮಾಡು ತ್ತಿದ್ದರು. ದೇವಸ್ಥಾನಗಳಿಗೆ ಹೋದರೆ ಭರ್ಜರಿ ಸ್ವಾಗತ ನಿರೀಕ್ಷಿಸದೆ ಸರತಿ ಸಾಲಿನಲ್ಲಿ ತಮ್ಮ ಪಾಡಿಗೆ ತಾವು ದೇವರ ದರ್ಶನ ಮಾಡುತ್ತಿದ್ದರು.
Related Articles
Advertisement
ಯಶೋದಾ ಕಾಟನ್ ಸೀರೆಗಳನ್ನು ಮಾತ್ರ ಉಡುತ್ತಿದ್ದರು. ಸೀರೆಗಳನ್ನೂ ಆಯ್ದು ತರುತ್ತಿದ್ದುದು ರಾಯರೇ. ಅವರು ಬದುಕಿದ್ದೂ ಮಧ್ಯಮವರ್ಗದ ಜೀವನ ಶೈಲಿಯಲ್ಲಿ. ಯಶೋದಾರ ಸ್ನೇಹವೆಲ್ಲ ಮಧ್ಯಮ ವರ್ಗದ ಗೆಳತಿಯರೊಂದಿಗೆ. ಅತೀ ಸಿರಿವಂತರ ಸ್ನೇಹ ಬೆಳೆಸುವುದು, ಪಾರ್ಟಿಗಳಿಗೆ ಹಾಜರಾಗುವುದು ಇಷ್ಟವಿರಲಿಲ್ಲ.
ವೃತ್ತಿ ಸಂಬಂಧಿತ ಟೆನ್ಶನ್ ಹೇಗಿದ್ದಿರಬಹುದು? ಸೆಟಲೈಟ್ ಉಡಾಯಿಸುವ ಮುನ್ನಾ ದಿನಗಳ ಲ್ಲಿಯೂ ನಿರಾಳವಾಗಿರುತ್ತಿದ್ದರು. ಆಗಲೂ ಮನೆಯ ದಿನಚರಿ, ಮಧ್ಯರಾತ್ರಿವರೆಗೆ ಓದು ನಡೆಯು ತ್ತಿತ್ತು. ಒಮ್ಮೆ ಇವರ ಅಪಹರಣ ವಿಷಯ ಭಾರೀ ಸುದ್ದಿ ಯಾದಾಗ ಕೇಳಿ ಸುಮ್ಮನೆ ನಕ್ಕರಂತೆ. ಭಾರತೀಯ ವಿಜ್ಞಾನ ಮಂದಿರದ ಸಭೆಯೊಂದರಲ್ಲಿ ಬಾಂಬು ಸಿಡಿಯಬಹುದು ಎಂದು ಗುಲ್ಲೆದ್ದು ಬೇರೆ ಸಭಾಂಗಣಕ್ಕೆ ಕರೆದೊಯ್ದಾಗಲೂ ಅಷ್ಟೇ ನಿರ್ಲಿಪ್ತತೆ ಇತ್ತು.
ಒಮ್ಮೆ ಅದಮಾರು ಮಠದ “ವಿಜ್ಞಾನಪ್ರಿಯ’ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಯು.ಆರ್. ರಾವ್ ಅವರಿಗೆ ಸಮ್ಮಾನ ಏರ್ಪಡಿಸಿದ್ದರು. ಅವರ ತಮ್ಮ ಕೃಷ್ಣಮೂರ್ತಿ ರಾವ್ (2006ರ ವರೆಗೆ ಉಡುಪಿಯಲ್ಲಿ ಮೂರ್ತಿ ಸ್ಕೂಲ್ ಆಫ್ ಕಾಮರ್ಸ್ ನಡೆಸುತ್ತಿದ್ದರು) ಅವರ ಪತ್ನಿ ಸೀತಾರಿಗೆ ಭೇಟಿಯಾಗಬೇಕೆಂದಿತ್ತು. ಭದ್ರತೆ ಕಾರಣ ರಾವ್ ಮಣಿಪಾಲದ ಹೊಟೇಲ್ ವ್ಯಾಲಿವ್ಯೂನಲ್ಲಿ ಉಳಿಯುತ್ತಿದ್ದರು. ರಾಯರು ಮರುದಿನ ಬೆಳಗ್ಗೆ ಹೋಗುವವರಿದ್ದರು. ರಾತ್ರಿ ವಾಹನದಲ್ಲಿ ಸೀತಾ ಹೊಟೇಲ್‌ಗೆ ಹೋಗಿ ಸ್ವಾಗತಕಾರರಿಗೆ ಹೇಳಿದರು. ಮಹಡಿಯಲ್ಲಿ ಮಾಹೆ ವಿ.ವಿ.ಯ ದಿಗ್ಗಜರ ಜತೆ ಇದ್ದ ಡಾ| ರಾವ್, ಸ್ವಾಗತಕಾರ ಹೇಳಿದ್ದೇ ತಡ, ಕೆಳಗೆ ಬಂದು “ಈ ರಾತ್ರಿಯಲ್ಲಿ ಒಬ್ಬಳೇ ಏಕೆ ಬಂದೆ?’ ಎಂದು ಕೇಳಿ ಮಹಡಿಗೆ ಕರೆದೊಯ್ದು ಅಲ್ಲಿದ್ದ ಗಣ್ಯಾತಿಗಣ್ಯರಿಗೆ ಪರಿಚಯ ಮಾಡಿಸಿಕೊಟ್ಟರು. “ಹಿಂದೆಲ್ಲ ಬೆಂಗಳೂರಿನ ಮನೆಗೆ ಹೋದಾಗ ಯಶೋದಕ್ಕನನ್ನು ನನ್ನೊಂದಿಗೆ ಮಾತನಾಡಲು ಬಿಟ್ಟು ಅಡುಗೆ ತಯಾರಿಸುತ್ತಿದ್ದರು. ಅಷ್ಟೂ ಫ್ರೆಂಡ್ಲಿ, ವೆರಿ ಹೋಮ್ಲಿ. ತುಂಬಾನೆ ಗ್ರೇಟ್. ಆಫ್ಟರ್ ಆಲ್ ನಾನೇನೂ ಅಲ್ಲ, ಆದರೂ ನನ್ನನ್ನು ಪರಿಚಯಿಸುವಾಗ ತಮ್ಮನ ಹೆಂಡತಿ ಮಾತ್ರವಲ್ಲ, ನನ್ನ ಸೋದರ ಮಾವನ ಮಗಳು ಎಂದು ಅಭಿಮಾನದಿಂದ ಹೇಳುತ್ತಿದ್ದರು’ ಎಂಬ ಮಾತನ್ನು ಸೀತಾ ಅಷ್ಟೇ ಅಭಿಮಾನದಿಂದ ಬಿಚ್ಚಿಡುತ್ತಾರೆ.
ಎಷ್ಟೇ ಎತ್ತರಕ್ಕೆ ಬೆಳೆಯಲಿ, ಬೆಳೆ(ಸಿ)ದ ಪರಿಸರ, ಸಮಾಜ, ಸ್ನೇಹಿತರು, ಬಂಧುಗಳನ್ನು ಹೇಗೆ ನೋಡಿಕೊಳ್ಳಬೇಕು, ಹೇಗೆ ಬದುಕಬೇಕೆಂಬುದಕ್ಕೆ ಆದರ್ಶರಾಗಿದ್ದ ಡಾ| ರಾವ್ “ವಿದ್ಯಾ ದದಾತಿ ವಿನಯಂ’ ಮಾತಿಗೆ ಅನ್ವರ್ಥವಾಗಿದ್ದರು ಎಂಬುದನ್ನು ಜು. 24ರಂದು ಅವರ ಪುಣ್ಯತಿಥಿ ಸಂದರ್ಭ ಸ್ಮರಿಸಲಾ ಗುತ್ತಿದೆ. 1932ರ ಮಾ. 10ರಂದು ಉಡುಪಿಯಲ್ಲಿ ಜನಿಸಿದ ರಾವ್ 2017ರ ಜು. 24ರಂದು 85ನೆಯ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನ ಹೊಂದಿದರೆ ಹತ್ತೇ ತಿಂಗಳಲ್ಲಿ ಅದೇ ತಾರೀಕಿನಂದು (2018ರ ಮೇ 24) ಯಶೋದಾ ನಿಧನ ಹೊಂದಿದರು.
ನಿರ್ಲಿಪ್ತ ಭಾವವೃತ್ತಿ ಸಂಬಂಧಿತ ಟೆನ್ಶನ್ ಹೇಗಿದ್ದಿರಬಹುದು? ಸೆಟಲೈಟ್ ಉಡಾಯಿಸುವ ಮುನ್ನಾ ದಿನಗಳಲ್ಲಿಯೂ ನಿರಾಳವಾಗಿರುತ್ತಿದ್ದರು. ಆಗಲೂ ಮನೆಯ ದಿನಚರಿ, ಮಧ್ಯರಾತ್ರಿವರೆಗೆ ಓದು ನಡೆಯುತ್ತಿತ್ತು. ಒಮ್ಮೆ ಇವರ ಅಪಹರಣ ವಿಷಯ ಭಾರೀ ಸುದ್ದಿಯಾದಾಗ ಕೇಳಿ ಸುಮ್ಮನೆ ನಕ್ಕರಂತೆ. ಭಾರತೀಯ ವಿಜ್ಞಾನ ಮಂದಿರದ ಸಭೆಯೊಂದರಲ್ಲಿ ಬಾಂಬು ಸಿಡಿಯಬಹುದು ಎಂದು ಗುಲ್ಲೆದ್ದು ಬೇರೆ ಸಭಾಂಗಣಕ್ಕೆ ಕರೆದೊಯ್ದಾಗಲೂ ಅಷ್ಟೇ ನಿರ್ಲಿಪ್ತತೆ ಇತ್ತು. – ಮಟಪಾಡಿ ಕುಮಾರಸ್ವಾಮಿ