Advertisement

ನೃತ್ಯದಲ್ಲೇ ಮೋಡಿ ಮಾಡುವ ರಿತೇಂದ್ರ

08:23 PM Oct 07, 2020 | Karthik A |

ಭಾವ ಭಂಗಿಯಿಂದಲೇ ಸಾಹಿತ್ಯವನ್ನು ಸಂವಹನ ನಡೆಸುವ ಮಾಧ್ಯಮವೇ ನೃತ್ಯ ಕಲೆ. ತಾಳ, ಲಯಗಳಿಗನುಸಾರವಾಗಿ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ತಲುಪಲು ಅಪಾರ ಪರಿಶ್ರಮ ಬೇಕಾಗುತ್ತದೆ.

Advertisement

ಹೀಗೆ ಮುದ್ದು ಮುಖ, ಆಕರ್ಷಕ ನೃತ್ಯ ಶೈಲಿ, ಭಾವಪೂರ್ಣ ಮುಖಾಭಿನಯದ ಮೂಲಕ ಪುತ್ತೂರಿನಲ್ಲಿ ಹತ್ತು ಜನರಿಗೆ ತಿಳಿದಿರುವ ಬಹುಮುಖ ಪ್ರತಿಭೆಯೇ ರಿತೇಂದ್ರ ಸಿ.ಎಚ್‌.

ಪ್ರಸ್ತುತ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ರಿತೇಂದ್ರ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಇಲ್ಲೇ ಪಡೆದಿದ್ದಾರೆ. ನೃತ್ಯ ತರಗತಿಗೆ ಸೇರಲು ಪ್ರೇರಣೆ ಖ್ಯಾತ ಹಾಡುಗಾರ್ತಿ ಸೂರ್ಯ ಗಾಯತ್ರಿ, ನೃತ್ಯ ತರಬೇತುದಾರ ದೀಕ್ಷಿತ್‌ ರಾಜ್‌. ಅವರಿಬ್ಬರ ವ್ಯಕ್ತಿತ್ವ, ಸ್ಫೂರ್ತಿದಾಯಕ ಮಾತು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಆಸೆಗೆ ನೀರೆರೆಯುತ್ತಲೇ ಇರುತ್ತದೆ ಎನ್ನುತ್ತಾರೆ ರಿತೇಂದ್ರ.

ರಿತೇಂದ್ರ ಇದುವರೆಗೆ ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ಛಾಪು ಮೂಡಿಸಿದ್ದಾರೆ. 2019ರಲ್ಲಿ ಮುಂಬಯಿನಲ್ಲಿ ನಡೆದ ಭಾರತದ ಪ್ರಸಿದ್ಧ ಡಾನ್ಸ್‌ ರಿಯಾಲಿಟಿ ಶೋಗಳಲ್ಲಿ ಒಂದಾದ ಇಂಡಿಯನ್‌ ಹಿಪಾಪ್‌ ಡಾನ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ರಿತೇಂದ್ರ ಡಿಝೊàನ್‌ ತಂಡವು ದ್ವಿತೀಯ ಸ್ಥಾನ ಪಡೆದು ಅಮೆರಿಕದಲ್ಲಿ ನಡೆಯುವ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿತ್ತು.

2018ರಲ್ಲಿ ಮುಂಬಯಿನಲ್ಲಿ ನಡೆದ ಹಿಪಾಪ್‌ ಯೂನಿಟ್‌ ಇಂಡಿಯಾ ಎಂಬ ಡಾನ್ಸ್‌ ಶೋನಲ್ಲಿ ಚಿನ್ನದ ಪದಕ ಹಾಗೂ 2018ರಲ್ಲಿ ಮೈಸೂರಿನಲ್ಲಿ ನಡೆದ ಹಿಪಾಪ್‌ ಯೂನಿಟ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ರಿತೇಂದ್ರ ಅವರನ್ನೊಳಗೊಂಡ ತಂಡ ಚಿನ್ನದ ಪದಕವನ್ನು ಪಡೆದುಕೊಂಡಿತ್ತು. 2017ರಲ್ಲಿ ಗ್ರೂವ್‌ ಇನ್‌ ಕಾಂಪಿಟೇಷನ್‌ ಎಂಬ ಡಾನ್ಸ್‌ ಶೋನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 2019ರಲ್ಲಿ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಡಿಝೊàನ್‌ ತಂಡವು ವೈಬ್‌ ಇಂಡಿಯಾ ಡಾನ್ಸ್‌ ಕಾರ್ಯಕ್ರಮ ಏರ್ಪಡಿಸಿತ್ತು. ಇದರಲ್ಲಿ ರಿತೇಂದ್ರ ಮುಖ್ಯ ಪಾತ್ರ ವಹಿಸಿದ್ದರು.

Advertisement

ರಿತೇಂದ್ರ ಹಿಪಾಪ್‌, ಜಾನಪದ, ಬಾಲಿವುಡ್‌, ಪಂಜಾಬಿ ಮುಂತಾದ ಡಾನ್ಸ್‌ ಪ್ರಕಾರಗಳನ್ನು ಕಲಿತಿದ್ದಾರೆ. ನೃತ್ಯಲೋಕಕ್ಕೆ ಮಾತ್ರ ಸೀಮಿತವಾಗಿರದೆ ಚಿತ್ರಕಲೆ, ಕ್ರಿಕೆಟ್‌, ವಾಲಿಬಾಲ್‌, ತ್ರೋಬಾಲ್‌, ಸ್ಟ್ಯಾಂಪ್‌ ಸಂಗ್ರಹ ಮುಂತಾದ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ರಾಜೇಂದ್ರ ಸಿ.ಎಚ್‌., ರೀತಾ ದಂಪತಿ ಪುತ್ರ ರಿತೇಂದ್ರ ಮುಂದೆ ಐ.ಎ.ಎಸ್‌. ಅಧಿಕಾರಿಯಾಗುವ ಕನಸು ಹೊತ್ತುಕೊಂಡಿದ್ದು ಡಾನ್ಸ್‌ ಜತೆ ಜತೆಗೆ ವೃತ್ತಿ ಜೀವನ ಆರಂಭಿಸಬೇಕೆಂದು ಕೊಂಡಿದ್ದಾರೆ.

 ಲಾವಣ್ಯಾ ಎಸ್‌., ಸಂತ ಫಿಲೋಮಿನಾ ಕಾಲೇಜು ದರ್ಬೆ, ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next