Advertisement

ಸಾಮೂಹಿಕ ವರ್ಗಾವಣೆಗೆ ಮನವಿ: ನೌಕರರ ಸಭೆ

12:25 PM Apr 10, 2021 | Team Udayavani |

ಕೊಳ್ಳೇಗಾಲ: ನಗರಸಭೆ ನೌಕರರ ಸಾಮೂಹಿಕ ವರ್ಗಾವಣೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಅಧಿಕಾರಿ ಸುರೇಶ್‌ ನೇತೃತ್ವದಲ್ಲಿ ಶುಕ್ರವಾರ ನೌಕರರ ಸಭೆ ನಡೆಯಿತು.

Advertisement

ಜಿಲ್ಲಾಧಿಕಾರಿ ಡಾ| ಎಂ.ಆರ್‌.ರವಿಅವರು ನೌಕರರ ಸಮಸ್ಯೆಯನ್ನು ಪರಿಹರಿಸಲು ಸಭೆ ಕರೆದು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಕಾರಣ ಜಿಲ್ಲಾ ಕೇಂದ್ರದಿಂದಬಂದಿದ್ದ ಅಧಿಕಾರಿಗಳು, ನಗರಸಭೆ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿದರು. ಸಭೆಯಲ್ಲಿ ನೌಕರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅಳಲು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸಭೆ ಬಳಿಕ ಜಿಲ್ಲಾ ನಗರಾಭಿವೃದ್ಧಿಅಧಿಕಾರಿ ಸುರೇಶ್‌ ಕುಮಾರ್‌ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ನೌಕರರಲ್ಲಿ ಯಾವುದೇ ತರಹದ ಭಿನ್ನಾಭಿಪ್ರಾಯಗಳು ಇಲ್ಲ. ಎಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಸಿಬ್ಬಂದಿ ಹಾಗೂ ನಗರಸಭಾ ಸದಸ್ಯರನಡುವೆ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.

ನಗರಸಭೆಯ 10 ಸಿಬ್ಬಂದಿ ವರ್ಗಾವಣೆಗೆ ಮನವಿ ಮಾಡಿದ್ದು, ಅದಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳಿಂದ ಮಾಹಿತಿಪಡೆಯಲಾಗಿದೆ. ಮೂರ್‍ನಾಲ್ಕು ಸಿಬ್ಬಂದಿ ಅತಿ ಹೆಚ್ಚು ವರ್ಷಗಳ ಕಾಲ ವರ್ಗಾವಣೆ ಇಲ್ಲದೆ ಕೆಲಸ ನಿರ್ವಹಿಸುತ್ತಿದ್ದು, ಅಂತಹವರನ್ನು ಬದಲಾವಣೆ ಮಾಡಿದರೆ ಸಮಸ್ಯೆ ಪರಿಹಾರವಾಗಲಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿನಗರಸಭೆ ಪೌರಾಯುಕ್ತ ವಿಜಯ್‌, ಜಿಲ್ಲಾ ನಗರಾಭಿವೃದ್ಧಿ ವ್ಯವಸ್ಥಾಪಕ ಗಿರಿ ರಾಜ್‌ ಹಾಗೂ ಸಿಬ್ಬಂದಿ ಇದ್ದರು.

Advertisement

ಲೈಬ್ರರಿಗೆ 6500 ರೂ. ಮೌಲ್ಯದ ಪುಸ್ತಕ ಕೊಡುಗೆ :

ಗುಂಡ್ಲುಪೇಟೆ: ತಾಲೂಕಿನ ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿರುವ ಸಮುದಾಯ ಭವನವನ್ನು ಅಂಬೇಡ್ಕರ್‌ ಯುವಕರ ಬಳಗದ ವತಿಯಿಂದ ಸಣ್ಣಗ್ರಂಥಾಲಯವಾಗಿ ಬದಲಾಯಿಸಿರುವ ಹಿನ್ನೆಲೆಯಲ್ಲಿ ಮೂಖಹಳ್ಳಿ ಪಂಚಾಯಿತಿಯಿಂದ ವಿದ್ಯಾರ್ಥಿಗಳಿಗೆಪುಸ್ತಕ ವಿತರಿಸಲಾಯಿತು.

ಹೊನ್ನಶೆಟ್ಟರಹುಂಡಿ ಗ್ರಾಮದಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈಬದಲಾವಣೆ ಮಾಡಲಾಗಿದ್ದು, ಎಸ್ಸಿ, ಎಸ್ಟಿ ಮೀಸಲಾತಿ ಅನುದಾನದಡಿ ಸುಮಾರು 6500 ರೂ. ಮೌಲ್ಯದ ಪುಸ್ತಕಗಳನ್ನು ಕೊಡುಗೆಯಾಗಿನೀಡಿದ್ದಾರೆ. ಈ ಕಾರ್ಯ ಸ್ಥಳೀಯರಿಂದಮೆಚ್ಚುಗೆ ವ್ಯಕ್ತವಾಗಿದೆ. ಈ ವೇಳೆಗ್ರಾಪಂ ಅಧ್ಯಕ್ಷ ಬಸವಶೆಟ್ಟಿ, ಪಿಡಿಒ ಪಾಲಾಕ್ಷ,ಸದಸ್ಯರಾದ ಮಹದೇವಚಾರಿ,ಶಿವಮೂರ್ತಿ, ರಾಚಯ್ಯ, ಸುನಂದ,ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕರ ಬಳಗದ ಸದಸ್ಯರಾದ ಶಿವಸ್ವಾಮಿ,ಶ್ರೀನಿವಾಸ, ಶಶಿಕುಮಾರ್‌, ಸ್ವಾಮಿ, ಚಂದ್ರಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next