Advertisement

ಮಧ್ಯರಾತ್ರಿ ನಡುರಸ್ತೆಯಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ

09:38 AM May 13, 2020 | keerthan |

ಬೆಳಗಾವಿ: ಇಲ್ಲಿಯ ಉದ್ಯಮಬಾಗ್ ರಸ್ತೆಯಲ್ಲಿ ನಡು ರಾತ್ರಿಯಲ್ಲಿ ಸಿಕ್ಕ ಅನುಮಾನಸ್ಪದ ಬ್ಯಾಗ್ ಆತಂಕ ಸೃಷ್ಟಿಸಿದ್ದು, ಬಾಂಬ್ ನಿಷ್ಕ್ರಿಯ ದಳದಿಂದ ಬ್ಯಾಗ್ ಪರಿಶೀಲಿಸಲಾಯಿತು.

Advertisement

ಉದ್ಯಮ ಬಾಗ್ ನ ಉತ್ಸವ ಹೊಟೇಲ್ ಬಳಿಯ ಪುರೋಹಿತ್ ಸ್ವೀಟ್ ಮಾರ್ಟ್ ಎದುರು ಯಾರೋ ಬ್ಯಾಗ್ ಬಿಟ್ಟು ಹೋಗಿದ್ದರು. ನೀಲಿ ಬಣ್ಣದ ಈ ಬ್ಯಾಗ್ ಆತಂಕ ಸೃಷ್ಟಿ ಆಗಿತ್ತು. ಮಧ್ಯಾಹ್ನದಿಂದ ಅಲ್ಲಿಯೇ ಈ ಬ್ಯಾಗ್ ಬಿದ್ದಿತ್ತು.

ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಪೊಲೀಸರಿಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.‌ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಬಂದು ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿ ಬಟ್ಟೆ-ಬರೆ, ಔಷಧ, ಇತರೆ ವಸ್ತುಗಳು ಇರುವುದು ಪತ್ತೆಯಾಗಿದೆ.‌ ಅದರಲ್ಲಿ ಯಾವುದೇ ಸ್ಫೋಟಕ ಕಂಡು ಬರಲಿಲ್ಲ. ಹೀಗಾಗಿ ಜನರು ನಿಟ್ಟುಸಿರು ಬಿಡುವಂತಾಗಿದೆ.

ಉದ್ಯಮಬಾಗ್ ಸಿಪಿಐ ದಯಾನಂದ ನೇತೃತ್ವದಲ್ಲಿ ಮಧ್ಯರಾತ್ರಿ ಬ್ಯಾಗ್ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಬ್ಯಾಗ್ ಯಾರದ್ದು ಎಂಬುದನ್ನು ಶೋಧ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next