Advertisement

ಭಾರತೀಯರ ಮೇಲೂ ದ್ವೇಷ ಕಾರಿದ ಹಂತಕ

12:30 AM Mar 17, 2019 | Team Udayavani |

ಕ್ರೈಸ್ಟ್‌ ಚರ್ಚ್‌: “ಐರೋಪ್ಯ ನೆಲದಲ್ಲಿರುವ ಭಾರತೀಯರು, ರೊಮೇನಿಯನ್ನರು, ಆಫ್ರಿಕನ್ನರು, ತುರ್ಕಿಸ್ತಾನಿಗಳು ಹಾಗೂ ಇನ್ನಿತರ ರಾಷ್ಟ್ರಗಳ ಮೂಲದವರನ್ನು ಅಲ್ಲಿಂದ ಹೊಡೆದೋಡಿಸಬೇಕು. ಆ ಕೆಲಸಕ್ಕೆ ನಾನು ಈಗ ಶ್ರೀಕಾರ ಹಾಕಿದ್ದೇನೆ’. ಇದು ನ್ಯೂಜಿಲೆಂಡ್‌ನ‌ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ ಗುಂಡಿನ ದಾಳಿ ನಡೆಸಿದ ಹಂತಕ ಬ್ರೆಂಟನ್‌ ಟರ್ರಾಂಟ್‌ (28) ಆಕ್ರೋಶಭರಿತ ಮಾತು. ದಾಳಿ ನಡೆಸುವ ತನ್ನ ದುಷ್ಕೃತ್ಯದ ಸಮರ್ಥನೆಗಾಗಿ 71 ಪುಟಗಳ “ಕಾರಣಗಳನ್ನು’ ಅಂತರ್ಜಾಲದಲ್ಲಿ ಅಪ್ಲೋಡ್‌ ಮಾಡಿರುವ ಬ್ರೆಂಟನ್‌, “ನಮ್ಮವರಲ್ಲ’ದವರು ನಮ್ಮ ನೆಲದಲ್ಲೇಕೆ ಬಂದು ನೆಲೆಸಬೇಕು ಎಂದು ಪ್ರಶ್ನಿಸಿದ್ದಾನಲ್ಲದೆ, ಪೂರ್ವಭಾಗದಿಂದ ಯೂರೋಪ್‌ ನೆಲಕ್ಕೆ ವಲಸೆ ಬಂದಿರುವವರನ್ನು ಯಾವಾಗ ಬಂದರು, ಹೇಗೆ ಬಂದರು ಎಂಬ ತರ್ಕ ಮಾಡದೆ ಹೊಡೆದೋಡಿಸಬೇಕು. ವಿಶೇಷವಾಗಿ, ಭಾರತ, ಚೀನಾ, ಟರ್ಕಿ ದೇಶದವರು ಯೂರೋಪಿಯನ್ನರ ಪ್ರಬಲ ಶತ್ರುಗಳು ಎಂದು ಕಿಡಿಕಾರಿದ್ದಾನೆ. 

Advertisement

ತನ್ನನ್ನು ತಾನು “ಜನಾಂಗೀಯ ದ್ವೇಷಿ ಹಾಗೂ ರಾಷ್ಟ್ರೀಯವಾದಿ’ ಎಂದೂ, ತಾನು ನಡೆಸಿದ ಹತ್ಯಾಕಾಂಡವನ್ನು “ಶ್ವೇತ ಹತ್ಯಾಕಾಂಡ’ (ವೈಟ್‌ ಜೆನೋಸೈಡ್‌) ಎಂದೂ ಬಣ್ಣಿಸಿಕೊಂಡಿದ್ದಾನೆ. ಜನಾಂಗೀಯ ದ್ವೇಷಿಗಳಲ್ಲೊಬ್ಬನಾದ ಆ್ಯಂಡ್ರಿಸ್‌ ಬೆಹರಿಂಗ್‌ ಬ್ರಿವಿಕ್‌ನಿಂದ (2011ರಲ್ಲಿ ನಾರ್ವೆಯಲ್ಲಿ 77 ಮಂದಿಯನ್ನು ಹತ್ಯೆಗೈದಿದ್ದವ) ಸ್ಫೂರ್ತಿ ಪಡೆದಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ, 1930ರಲ್ಲಿ ಯೂರೋಪ್‌ ರಾಷ್ಟ್ರಗಳಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತಿದ್ದ ಓಸ್ವಾಲ್ಡ್‌ ಮೋಸ್ಲೆಯ ಚಿಂತನೆಗೆ ತನ್ನ ಆಲೋಚನೆಗಳು ಹೋಲುತ್ತವೆ ಎಂದಿದ್ದಾನೆ. 

9 ಮಂದಿ ನಾಪತ್ತೆ: ಶೂಟೌಟ್‌ನಲ್ಲಿ ಇಬ್ಬರು ಭಾರತೀಯರು ಅಸುನೀಗಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಎರಡೂ ಶೂಟೌಟ್‌ ಪ್ರಕರಣಗಳಿಗೆ ಸಂಬಂಧಿಸಿ 9 ಭಾರತೀಯರು ಕಾಣೆಯಾಗಿದ್ದು ಅವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯೂಜಿಲೆಂಡ್‌ನ‌ಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next