ವಾಷಿಂಗ್ಟನ್: ಜಗತ್ತು ಹುಚ್ಚರ ಸಂತೆಯಾದರೆ, ಈ ಸಂತೆಯಲ್ಲಿನ ಕೆಲ ಹುಚ್ಚರಿಗೆ ಏನೇನೋ ಬೆಳೆಸುವ ಖಯಾಲಿ. ಒಬ್ಬರು ತಲೆ ಕೂದಲನ್ನು ಹತ್ತಾರು ಮೀಟರ್ ಉದ್ದ ಬೆಳೆಸಿದರೆ, ಮತ್ತೂಬ್ಬ ಅತಿ ಉದ್ದದ ಮೀಸೆ ಬೆಳೆಸುತ್ತಾನೆ. ಕೆಲವರು ಉಗುರು, ಗಡ್ಡ ಬೆಳೆಸಿ ವಿಶ್ವದಾಖಲೆ ಮಾಡುತ್ತಾರೆ. ಆದರೆ ಅಮೆರಿಕದಲ್ಲೊಬ್ಬ ಮಹಿಳೆ ಅತಿ ದೊಡ್ಡ ಪೃಷ್ಠ (ಹಿಪ್) ಬೆಳೆಸಿ ಜಗತ್ತಿನ ಗಮನಸೆಳೆಯಲು ಮುಂದಾಗಿದ್ದಾಳೆ!
ಪೆನ್ಸಿಲ್ವೇನಿಯಾದ ನಿವಾಸಿ ಬಾಬ್ಬಿ ಜೋ ವೆಸ್ಟ್ ಲೆಯ್‌ಗೆ ಈಗ 43 ವರ್ಷ. 5 ಅಡಿ 2 ಇಂಚು ಎತ್ತರವಿರುವ ಬಾಬ್ಬಿ ಬರೋಬ್ಬರಿ 246 ಕೆ.ಜಿ ತೂಗುತ್ತಾರೆ. ಯಾಕಮ್ಮಾ ಇಷ್ಟೊಂದು ಭಾರ ಅಂತ ಕೇಳಿದರೆ; “ಅತಿ ದೊಡ್ಡ ಪೃಷ್ಠ
ಬೆಳೆಸಿ ವಿಶ್ವದಾಖಲೆ ಮಾಡೋಕೆ ಅಂತಾರೆ ಬಾಬ್ಬಿ!’
ಬಾಬ್ಬಿ ಹೀಗೆ ಹಿಪ್ ಬೆಳೆಸಲು ಸ್ಪೂರ್ತಿಯಾಗಿರುವುದು ಲಾಸ್ ಏಂಜೆಲೀಸ್‌ನ ಮೈಕೆಲ್ ರುಫಿ#ನೆಲ್ಲಿ. ಈತ ಬರೋಬ್ಬರಿ 99 ಇಂಚು ಸುತ್ತಳತೆಯ ಪೃಷ್ಠ ಹೊಂದಿದ್ದು, ಈತನನ್ನು ಹಿಂದಿಕ್ಕುವುದೇ ಬಾಬ್ಬಿಯ ಗುರಿ. ಈಗಾಗಲೇ ಪೃಷ್ಠವನ್ನು 95 ಇಂಚು ಬೆಳೆಸಿರುವ ಈಕೆ, ಅವು 99 ಇಂಚು ಮೀರುವವರೆಗೂ ತಿನ್ನುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಅಂತಾಳೆ.
ಎಲ್ಲ ಹೆಣ್ಮಕ್ಕಳು “ಸೈಸ್ ಜೀರೋ’ ಮೊರೆ ಹೋಗಿರುವಾಗ, ಅಂಡೆ ಗಾತ್ರದ ಪೃಷ್ಠ ಬೆಳೆಸುತ್ತಿರುವ ಬಾಬ್ಬಿಗೆ “ಬದುಕಬೇಕು ಅಂದ್ರೆ ಕಮ್ಮಿ ತಿನ್ನಮ್ಮ’ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಆದರೆ “ಸತ್ತರೂ ಚಿಂತೆಯಿಲ್ಲ ದಾಖಲೆ ಮಾಡೋವರೆಗೂ ತಿಂತಾನೇ ಇರುವೆ’ ಎಂದು ಬಾಬ್ಬಿ ವೈದ್ಯರಿಗೆ ಸವಾಲು ಹಾಕಿದ್ದಾಳೆ.
ಗಂಟೆಗೆ ಲಕ್ಷ ದುಡಿಮೆ!
ಹೀಗೆ ಯದ್ವಾತದ್ವ ಮೈ ಬೆಳೆಸಿಕೊಂಡಿರುವ ಬಾಬ್ಬಿ ಜೋಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರಿಗಾಗಿ ಪ್ರತಿ ದಿನ ವಿಭಿನ್ನವಾಗಿ ಪೋಸು ನೀಡಿ, ವಿಡಿಯೋ ಮಾಡುವ ಬಾಬ್ಬಿ, ಅದನ್ನು ಆನ್‌ಲೈನ್‌ಗೆ ಹಾಕಿ ಗಂಟೆಗೆ 1.30 ಲಕ್ಷ ರೂ. ದುಡಿಯುತ್ತಾಳೆ! ವಿಚಿತ್ರವೆಂದರೆ ಬಾಬ್ಬಿಯ ಈ “ಶೇಪ್’ ಕಂಡು ಸಹಸ್ರಾರು ಗಂಡಸರು ಈಕೆಯ ಫ್ಯಾನ್‌ಗಳಾಗಿದ್ದಾರೆ. ಇವರ ಬೇಡಿಕೆಯಂತೆ ಕೆಲವೊಮ್ಮೆ ಬಾಬ್ಬಿ ಬೆತ್ತಲಾಗಿ ಪೋಸ್ ನೀಡುತ್ತಾಳೆ. ಈ ಸಂದರ್ಭಗಳಲ್ಲಿ ಆಕೆಯ ಗಳಿಕೆ ಗಂಟೆಗೆ 2.50 ಲಕ್ಷ ಮೀರುತ್ತದೆ!