Advertisement

ನೋಯಲ್‌ಗೆ ಏರ್‌ಫೋರ್ಸ್‌ ಎಂಜಿನಿಯರ್‌ ಆಗುವಾಸೆ

10:37 AM May 13, 2017 | |

ಬಜಪೆ ಸೈಂಟ್‌ ಜೋಸೆಫ್‌ ಶಾಲೆಯ ನೋಯಲ್‌ಗೆ 623 ಅಂಕ
ಬಜಪೆ:
ಬಜಪೆ ಸೈಂಟ್‌ ಜೋಸೆಫ್‌ ಪ್ರೌಢಶಾಲೆಯ ವಿದ್ಯಾರ್ಥಿ ನೋಯಲ್‌ ಡಿ’ಕೋಸ್ತಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದಿದ್ದಾರೆ. 

Advertisement

ಪಡುಪೆರಾರದ ಸುಂಕದಕಟ್ಟೆಯಲ್ಲಿನ ಪ್ರಕಾಶ್‌ ಡಿ’ಕೋಸ್ತಾ ಮತ್ತು ಅನಿತಾ ದಂಪತಿಯ ಅವಳಿ-ಜವಳಿ ಮಕ್ಕಳಲ್ಲಿ ನೋಯಲ್‌ಗೆ 623, ಜಾಯಲ್‌ಗೆ 605 ಅಂಕ. ನೋಯಲ್‌ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿತರೂ ಕನ್ನಡ, ಹಿಂದಿ ಭಾಷಾ ವಿಷಯಗಳು ಅತನಿಗೆ ಸುಲಭ. ದಿನದ ಪಾಠ ಮನೆಗೆ ಬಂದು ಆ ದಿನವೇ ಕಲಿಯುವ ಪರಿಪಾಠ ಬೆಳೆಸಿದ್ದ. ದಿನಾ ಬೆಳಗ್ಗೆ 4.30ಕ್ಕೆ ಏಳುತ್ತಿದ್ದು, ದಿನಕ್ಕೆ ಒಟ್ಟು 5ರಿಂದ 6 ಗಂಟೆ ಓದಿನ ಕಡೆದ ಗಮನ ನೀಡುತ್ತಿದ್ದ. ಉಳಿದ ಸಮಯ ಸುಂಕದಕಟ್ಟೆಯಲ್ಲಿನ ತಾಯಿ ನಡೆಸುತ್ತಿದ್ದ ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದ. 

ತಂದೆ ಪ್ರಕಾಶ್‌, ತಾಯಿ ಅನಿತಾ ಹಾಗೂ ಸೈಂಟ್‌ ಜೋಸೆಫ್‌ ಪ್ರೌಢಶಾಲಾ ಶಿಕ್ಷಕರ ಪ್ರೋತ್ಸಾಹದಿಂದ ಇದು ಸಾಧ್ಯವಾಗಿದೆ. ಅದರಲ್ಲೂ ಗಣಿತದಲ್ಲಿ ಹೆಚ್ಚು ಪ್ರೋತ್ಸಾಹ ನೀಡಿದ್ದಾರೆ. ಮುಂದೆ ಪಿಸಿಎಂಇ ಕಲಿತು ಇಂಡಿಯನ್‌ ಏರ್‌ಫೋರ್ಸ್‌ಗೆ ಸೇರುವ ಮೂಲಕ ಎಂಜಿನಿಯರ್‌ ಅಗುವ ಆಸೆ ನೋಯಲ್‌ನದು.

Advertisement

Udayavani is now on Telegram. Click here to join our channel and stay updated with the latest news.

Next