Advertisement

ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಹೆಚ್ಚುವರಿ 970 ಹಾಸಿಗೆ ಸೌಲಭ್ಯ

01:14 PM Apr 27, 2021 | Team Udayavani |

ಚಾಮರಾಜನಗರ: ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಜಿಲ್ಲೆಯಲ್ಲಿ ಮತ್ತಷ್ಟುಕೋವಿಡ್‌ ಕೇಂದ್ರ ತೆರೆಯಲಿದ್ದು ಇದರಿಂದಹೆಚ್ಚುವರಿಯಾಗಿ 970 ಹಾಸಿಗೆಗಳ ಸೌಲಭ್ಯಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್‌. ರವಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು,ನಗರದ, ಸರ್ಕಾರಿ ವೈದ್ಯಕೀಯ ಕಾಲೇಜು ಬಳಿನಿರ್ಮಾಣವಾಗುತ್ತಿರುವ ವೈದ್ಯಕೀಯ ಕಾಲೇಜಿನಆಸ್ಪತ್ರೆಯಲ್ಲಿ 200 ಹಾಸಿಗೆಗಳ ಕೋವಿಡ್‌ ಕೇರ್‌ ಕೇಂದ್ರ ತೆರೆಯಲು ಪರಿಶೀಲಿಸಲಾಗಿದೆ. ಇನ್ನು 2ವಾರಗಳಲ್ಲಿ ಕೋವಿಡ್‌ ಕೇರ್‌ ಕೇಂದ್ರಕ್ಕಾಗಿ ಎರಡುಮಹಡಿಗಳನ್ನು ಪೂರ್ಣಗೊಳಿಸಿ ಬಿಟ್ಟುಕೊಡಲಾಗುತ್ತದೆ. ಅಲ್ಲಿಯವರೆಗೂ ಮೆಡಿಕಲ್‌ ಕಾಲೇಜಿನಲ್ಲಿರುವ ಆಡಿಟೋರಿಯಂ ಬಳಸಿಕೊಂಡು 150 ಹಾಸಿಗೆವುಳ್ಳ ಕೋವಿಡ್‌ ಕೇಂದ್ರ ಆರಂಭಿಸಲಿದ್ದೇವೆ ಎಂದರು.

ತಾಲೂಕುಗಳಲ್ಲಿರುವ ಹಾಸ್ಟೆಲ್‌, ವಸತಿ ಶಾಲೆಗಳನ್ನು ಕೋವಿಡ್‌ ಕೇಂದ್ರಗಳನ್ನಾಗಿ ಬಳಸಿ ಕೊಳ್ಳಲಾಗುತ್ತಿದೆ. ಹನೂರಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಹಾಸಿಗೆ, ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 120ಹಾಸಿಗೆ, ಗುಂಡ್ಲುಪೇಟೆಯ ವೀರನಪುರದಲ್ಲಿರುವಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ 100ಹಾಸಿಗೆ, ಚಾಮರಾಜನಗರ ತಾಲೂಕಿನ ಮಾದಾಪುರದ ಪ್ರಥಮ ದರ್ಜೆ ಕಾಲೇಜಿನ ಹಾಸ್ಟೆಲ್‌ನಲ್ಲಿ40 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಕೇರ್‌ ಕೇಂದ್ರ ಆರಂಭಿಸಲಾಗುವುದು ಎಂದರು.

ಈ ಎಲ್ಲಾ 970 ಹಾಸಿಗೆಗಳಿಗೆ ಶೇ. 50ರಷ್ಟುಹಾಸಿಗೆಗಳಿಗೆ ಅಂದರೆ ಸುಮಾರು 450 ಹಾಸಿಗೆಗಳಿಗೆಆಮ್ಲಜನಕ ಸೌಲಭ್ಯ ಅಳವಡಿಸಲು ತೀರ್ಮಾನಿಸಲಾಗಿದೆ. ವಾತಾವರಣದಲ್ಲಿನ ಆಮ್ಲಜನಕ ಬಳಸಿಕೊಂಡು ಸುಮಾರು 40 ರಿಂದ 50 ಜಂಬೊ ಸಿಲಿಂಡರ್‌ ಸಮನಾಗಿರುವ ಆಕ್ಸಿಜನ್‌ ಪೂರೈಸಬಹದು.ಎಂದರು.

ಆಕ್ಸಿಜನ್‌ಗಾಗಲಿ ಹಾಸಿಗೆಗಳ ವ್ಯವಸ್ಥೆಗೆಯಾವುದೇ ಕೊರತೆ ಕಂಡು ಬಂದಿಲ್ಲ. ಸೋಂಕಿತರಪೈಕಿ ತೀವ್ರತರ ಲಕ್ಷಣವುಳ್ಳ ಶೇ.10ರಷ್ಟುಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಇವರಲ್ಲಿ ಶೇ. 6 ರಷ್ಟು ಜನರಿಗೆಮಾತ್ರ ಆಕ್ಸಿಜನ್‌ ಅವಶ್ಯಕತೆ ಇದೆ. ಇವರಿಗೆ ಅಗತ್ಯವಿರುವ ಆಮ್ಲಜನಕ ಲಭ್ಯವಿದೆ. ಹೀಗಾಗಿ ಜಿಲ್ಲೆಯಲ್ಲಿ ಆಕ್ಸಿಜನ್‌ಗಾಗಲಿ ಅಥವಾ ಹಾಸಿಗೆಗಳಿಗಾಗಲಿ ಕೊರತೆಯಿದೆ ಎಂಬ ವದಂತಿಗೆ ಜನರು ಕಿವಿಗೊಡಬಾರದು ಎಂದು ಹೇಳಿದರು.

Advertisement

ಮೃತ ವೃದ್ಧರಲ್ಲಿ ಯಾರೂ ಲಸಿಕೆಯನ್ನೇ ಪಡೆದಿರಲಿಲ್ಲ  :  ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಕೋವಿಡ್‌ ಸಂಬಂಧಿ 9 ಮರಣ ಪ್ರಕರಣದ ವರದಿಗಮನಿ ಸಿದಾಗ 60 ವರ್ಷ ಮೇಲ್ಪಟ್ಟ ಹೆಚ್ಚು ವಯಸ್ಸಿ ನವರು ಲಸಿಕೆ ಪಡೆಯದಿರುವುದುತಿಳಿದು ಬಂದಿದೆ. ಹೀಗಾಗಿ ಸಾರ್ವಜನಿಕರುಕೋವಿಡ್‌ ಲಸಿಕೆ ಪಡೆಯಲು ಉದಾಸೀನಮಾಡಬಾರದು. ಲಸಿಕೆ ನಮ್ಮ ಜೀವಕಾಪಾಡುತ್ತದೆ. ಆದ್ದರಿಂದ ಯಾರೂನಿರ್ಲಕ್ಷಿಸದೆ ಕಡ್ಡಾಯವಾಗಿ ಲಸಿಕಾಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕುಎಂದು ಜಿಲ್ಲಾಧಿಕಾರಿ ರವಿ ಮನವಿ ಮಾಡಿದರು.

ಗ್ರಾಮೀಣ ಭಾಗದಲ್ಲಿ ಪ್ರಕರಣ ಸಂಖ್ಯೆ ಹೆಚ್ಚಳ :

ಚಾಮರಾಜನಗರ: 25 ದಿನಗಳಿಂದ ಜಿಲ್ಲೆಯಲ್ಲಿಒಟ್ಟು 2,255 ಪ್ರಕರಣಗಳು ದಾಖಲಾಗಿದ್ದು,ಇದರಲ್ಲಿ 1697 ಪ್ರಕರಣಗಳು ಗ್ರಾಮೀಣಪ್ರದೇಶಗಳಿಂದ ವರದಿಯಾಗಿವೆ. ಕಳೆದವರ್ಷಕ್ಕಿಂತ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಕಳೆದ ಐದಾರು

ದಿನಗಳಿಂದ ಪ್ರತಿದಿನ ಪ್ರಕರಣಗಳ ಸಂಖ್ಯೆ 250ಕ್ಕಿಂತ ಕಡಿಮೆಯಾಗಿಲ್ಲ. ಹೀಗಾಗಿ ಗ್ರಾಮೀಣ ಭಾಗದ ಜನರು ಕೋವಿಡ್‌ ಸೋಂಕು ಹರಡುವಿಕೆ ತಡೆಯುವ ಮುನ್ನೆಚ್ಚರಿಕೆಕ್ರಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಕೋವಿಡ್‌ ಹರಡುವಿಕೆಯ ಪ್ರಮಾಣವನ್ನುನಿಯಂತ್ರಿಸಲು ಸಾರ್ವಜನಿಕರು ಕೈ ಜೋಡಿಸ ಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು. ಕೋವಿಡ್‌ ಸೋಂಕು ಪ್ರಕರಣಗಳನ್ನುಗಮನಿಸಿದಾಗ 21 ರಿಂದ 40 ವಯೋಮಿತಿಯೊಳಗಿನವರು ಹೆಚ್ಚು ಸೋಂಕಿಗೆ ಒಳಪಟ್ಟಿರುವುದು ಕಂಡು ಬಂದಿದೆ. ಇದರಿಂದ ಯುವ ಜನರು ಎಚ್ಚರವಹಿಸಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next