ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಈ ಹಿಂದೆ ಕಲಾವಿದರಿಗಾಗಿಯೇ ರೂಪಿಸಲು ಹೊರಟ್ಟಿದ್ದ “ಸಂಕಷ್ಟ ಪರಿಹಾರ ನಿಧಿ’ ಯೋಜನೆಯನ್ನು ಕೈಬಿಡಲು ಮುಂದಾಗಿದೆ. ಯಾವುದೇ ಯೋಜನೆ ಆರಂಭಿಸುವ ಮೊದಲು ಸರ್ಕಾರ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುಮತಿ ಬೇಕಾಗುತ್ತದೆ. ಆದರೆ, ಸಂಕಷ್ಟ ಪರಿಹಾರನಿಧಿ ಯೋಜನೆ ಸ್ಥಾಪನೆಗೆ ಅನುಮತಿ ಸಿಕ್ಕಿಲ್ಲ.
ಹೀಗಾಗಿ ಯೋಜನೆಯಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಕೋವಿಡ್ 19 ವೈರಸ್ ಹಾವಳಿ ಹಿನ್ನೆಲೆ ಯಲ್ಲಿ ಅಕಾಡೆಮಿ ಕಲಾವಿದರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಸಂಕಷ್ಟ ಪರಿಹಾರ ನಿಧಿ ಯೋಜನೆ ಸ್ಥಾಪನೆಗೆ ಅಕಾಡೆಮಿ ಮುಂದಾಗಿತ್ತು. ಈಗಾಗಲೇ ಕೆಲವು ದಾನಿಗಳು ಕೂಡ ಕಷ್ಟದಲ್ಲಿರುವ ದರಿಗೆ ಆರ್ಥಿಕ ಸಹಾಯ ನೀಡಲು ಮುಂದಾಗಿದ್ದರು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಮಗಳಿಂದ ಅಕಾಡೆಮಿ ಯೋಜನೆಗಳ ಸ್ಥಾಪನೆಗೆ ಅವಕಾಶವಿಲ್ಲದಂತಾಗಿದೆ.
ಈಗಾಗಲೇ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ಸಂಕಷ್ಟದಲ್ಲಿರುವ ದರಿಗೆ ತಲಾ 2 ಸಾವಿರ ರೂ.ಗಳ ನೆರವನ್ನು ಮೊದಲ ಹಂತದಲ್ಲಿ 691 ಕಲಾವಿದರಿಗೆ àಡಿದೆ. ಕಲಾವಿದರ ಇನ್ನೊಂದು ತಯಾರು ಮಾಡುವ ಕೆಲಸ ನಡೆದಿದೆ ಎಂದು ಕರ್ನಾಟಕ ಯಕ್ಷಗಾನ ಅಧ್ಯಕ್ಷ ಪ್ರೊ.ಎಂ.ಎ. ಹೆಗಡೆ ಮಾಹಿತಿ ನೀಡಿದ್ದಾರೆ. ನಿಜವಾಗಿಯೂ ಸಂಕಷ್ಟದಲ್ಲಿರುವ ಕಲಾವಿದರ ಹುಡುಕಾಟ ನಡೆದಿದೆ. ಅವರು ಅರ್ಜಿ ಸಲ್ಲಿಸಿದರೆ ಅಕಾಡೆಮಿ ವತಿಯಿಂದ ನೆರವು ನೀಡಲಾಗುವುದು ಎಂದು ಯಕ್ಷಗಾನ ಅಕಾಡೆಮಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ 19 ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲಿ ಎಂಬ ಉದ್ದೇಶದಿಂದ ಸಂಕಷ್ಟ ಪರಿಹಾರ ನಿಧಿ ಯೋಜನೆಗೆ ಅಕಾಡೆಮಿ ಮುಂದಾಗಿತ್ತು. ಆದರೆ ನಿಯಮಾವಳಿಗಳು ಅಡ್ಡಿಯಾಗುವ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಗಿದೆ.
-ಪ್ರೊ.ಎಂ.ಎ.ಹೆಗಡೆ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ
* ದೇವೇಶ ಸೂರಗುಪ್ಪ