Advertisement

ವಿಮಾನ ಅವಶೇಷ ಪತ್ತೆಯಾದ ತಾಣದಲ್ಲಿ ಇಳಿಯಲು ಐಎಎಫ್ ಹರಸಾಹಸ

10:01 AM Jun 13, 2019 | Sathish malya |

ಹೊಸದಿಲ್ಲಿ : ಕಳೆದ ಜೂನ್‌ 3ರಂದು ಅಸ್ಸಾಂ ನ ಜೋರ್ಹಾಟ್‌ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್‌-32 ವಿಮಾನದ ಅವಶೇಷಗಳು ಪತ್ತೆಯಾದ ಅತ್ಯಂತ ಎತ್ತರದ, ದುರ್ಗಮ ಪರ್ವತ ಪ್ರದೇಶದಲ್ಲಿ ಇಳಿಯಲು ಹರಸಾಹ ಪಟ್ಟರೂ ನಿನ್ನೆ ಮಂಗಳವಾರ ಐಎಎಫ್ ಹೆಲಿಕಾಪ್ಟರ್‌ಗಳಿಗೆ ಸಾಧ್ಯವಾಗಿರಲಿಲ್ಲ; ಹಾಗಾಗಿ ಆ ಪ್ರಯತ್ನವನ್ನು ಇಂದು ಬುಧವಾರವೂ ಮುಂದುವರಿಸಲಾಗಿದೆ.

Advertisement

ನಾಪತ್ತೆಯಾದ ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಲಿಪೋ ಸಮೀಪದ ಅತ್ಯಂತ ಎತ್ತರದ ಮತ್ತು ದುರ್ಗಮ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿದ್ದವು. ಆ ತಾಣವನ್ನು ನಿರ್ದಿಷ್ಟವಾಗಿ ಗುರುತಿಸಲಾದ ಹೊರತಾಗಿಯೂ ಕಡಿದಾದ ಮತ್ತು ಎತ್ತರದ ಆ ಪ್ರದೇಶದಲ್ಲಿ ಇಳಿಯಲು ಹೆಲಿಕಾಪ್ಟರ್‌ಗಳಿಗೆ ಸಾಧ್ಯವಾಗಿರಲಿಲ್ಲ.

ಇಂದು ಬುಧವಾರ ಐಎಎಫ್ ಹೆಲಿಕಾಪ್ಟರ್‌ ಗಳು ತಮ್ಮ ಕಾರ್ಯಾಚರಣೆ ಮುಂದುವರಿಸಿವೆ. ಅವಶೇಷ ಪತ್ತೆಯಾದ ತಾಣದಲ್ಲಿ ಅವುಗಳಿಗೆ ಇಳಿಯಲು ಸಾಧ್ಯವಾದಾಗ ವಿಮಾನದೊಳಗೆ ಇದ್ದವರ ಸ್ಥಿತಿಗತಿ ಮತ್ತು ಬದುಕುಳಿದಿರಬಹುದಾದವರನ್ನು ಪತ್ತೆ ಹಚ್ಚುವುದು ಸುಲಭವಾದೀತು ಎಂದು ಐಎಎಫ್ ಹೇಳಿದೆ.

ಐಎಎಫ್ನ ಈ ಕಾರ್ಯಾಚರಣೆಯಲ್ಲಿ ಎಂಐ-17ವಿ5, ಚೀತಾ ಮತ್ತು ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳು ತೊಡಗಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next