Advertisement

ಬಿಜೆಪಿಯಿಂದ ಜನರ ದಿಕ್ಕು ತಪ್ಪಿಸುವ ಯತ್ನ

02:39 PM Jan 05, 2021 | Team Udayavani |

ಚಿಕ್ಕಮಗಳೂರು: ಗ್ರಾಪಂಗಳಲ್ಲಿ ಬಿಜೆಪಿ ನೇರವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗದೆ ವಾಮಮಾರ್ಗ ಅನುಸರಿಸುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸಮಾಡುತ್ತಿದೆ. ಬೇರೆ ಪಕ್ಷಗಳ ಬೆಂಬಲದಿಂದ ಗೆದ್ದಅಭ್ಯರ್ಥಿಗಳಿಗೆ ಆಸೆ ಆಮಿಷ ಒಡ್ಡುವ ಮೂಲಕಆಪರೇಷನ್‌ ಕಮಲಕ್ಕೆ ಕೈ ಹಾಕಿದ್ದಾರೆಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ| ಕೆ.ಪಿ. ಅಂಶುಮಂತ್‌ ಆರೋಪಿಸಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಬಿಜೆಪಿಯವರುನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆಂದು ಹೇಳುತ್ತಾಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.ಶೃಂಗೇರಿ ತಾಲೂಕಿನಲ್ಲಿ 172, ಮೂಡಿಗೆರೆ

ತಾಲೂಕಿನಲ್ಲಿ 188, ಚಿಕ್ಕಮಗಳೂರು ತಾಲೂಕಿನಲ್ಲಿ 85, ಕಡೂರು ತಾಲೂಕಿನಲ್ಲಿ 270, ತರೀಕೆರೆ ತಾಲೂಕಿನಲ್ಲಿ260 ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆಂದು ತಿಳಿಸಿದರು.

ಬಿಜೆಪಿಯವರು ಗ್ರಾಪಂ ಚುನಾವಣೆಯಲ್ಲಿ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ರಾಜ್ಯ ಸರ್ಕಾರ ಜನಪರ ಕೆಲಸಗಳನ್ನು ಮಾಡಿದ್ದೇಆಗಿದಲ್ಲಿ ಚುನಾವಣೆಯಲ್ಲಿ ಆಡಳಿತ ಯಂತ್ರವನ್ನುದುರ್ಬಳಕೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತಿರಲಿಲ್ಲ,ಜನರ ಆಕ್ರೋಶಕ್ಕೂ ಗುರಿಯಾಗುತ್ತಿರಲಿಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಜ.6ರಂದು ಮೈಸೂರು ವಿಭಾಗೀಯಮಟ್ಟದ ಮುಖಂಡರ ಸಭೆ ಆಯೋಜಿಸಲಾಗಿದೆ.ಈ ಸಭೆಯಲ್ಲಿ ಜಿಲ್ಲೆಯ 75 ಆಯ್ದ ಮುಖಂಡರನ್ನುಆಯ್ಕೆ ಮಾಡಲಾಗಿದ್ದು, ಸಭೆಯಲ್ಲಿ ಪಕ್ಷಸಂಘಟನೆ ಮತ್ತು ಬಿಜೆಪಿ ಸರ್ಕಾರದ ವೈಫಲ್ಯಗಳವಿರುದ್ಧದ ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

Advertisement

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಶಿವಾನಂದಸ್ವಾಮಿ, ಮಂಜೇಗೌಡ, ಹಿರೇಮಗಳೂರು ಪುಟ್ಟಸ್ವಾಮಿ, ರೂಬೆನ್‌ ಮೊಸೆಸ್‌, ಕಾರ್ತಿಕ್‌ ಜಿ. ಚೆಟ್ಟಿಯಾರ್‌, ಮಹಮದ್‌ ಮುದಾಫೀರ್ ‌ ಇದ್ದರು.

ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲೂ ಕಾಂಗ್ರೆಸ್‌ ಹೆಚ್ಚಿನಸ್ಥಾನ ಗೆಲ್ಲಲಿದೆ. –ಡಾ| ಕೆ.ಪಿ.ಅಂಶುಮಂತ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next