ನಟಿ ಅಮೃತಾ ಅಯ್ಯಂಗಾರ್ ಎಕ್ಸೈಟ್ ಆಗಿದ್ದಾರೆ. ಅದಕ್ಕೆ ಕಾರಣ “ಬಡವ ರಾಸ್ಕಲ್’. “ಡಾಲಿ’ ಧನಂಜಯ್ ನಿರ್ಮಿಸಿ, ನಟಿಸಿರುವ “ಬಡವ ರಾಸ್ಕಲ್’ ಚಿತ್ರ ಈ ವಾರ (ಡಿ.24) ತೆರೆಕಾಣುತ್ತಿದೆ.
ಈಗಗಾಲೇ ಬಿಡುಗಡೆಯಾಗಿರುವ ಹಾಡು, ಟ್ರೇಲರ್ ಹಿಟ್ ಆಗುವ ಮೂಲಕ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಸಹಜವಾಗಿಯೇ ನಾಯಕಿ ಅಮೃತಾ ಕೂಡಾ ಈ ಸಿನಿಮಾ ಸ್ವಲ್ಪ ಹೆಚ್ಚೆ ಎಕ್ಸೆ„ಟ್ ಆಗಿದ್ದಾರೆ. ಅದಕ್ಕೆ ಹಲವು ಕಾರಣ.
“ಬಡವ ರಾಸ್ಕಲ್’ ಸಿನಿಮಾದ ಪಾತ್ರ, ಜರ್ನಿಯ ಬಗ್ಗೆ ಮಾತನಾಡುವ ಅಮೃತಾ, ” ಈ ಸಿನಿಮಾ ನನಗೆ ಭಾವನಾತ್ಮಕವಾಗಿ ಹೆಚ್ಚು ಹತ್ತಿರವಾಗಿದೆ. ಚಿತ್ರದಲ್ಲಿ ನಾಯಕ ಆಟೋ ಡ್ರೈವರ್. ನನ್ನ ಅಮ್ಮನ ತಮ್ಮಂದಿರು ಇಬ್ಬರು ಆಟೋ ಡ್ರೈವರ್. ಅವರಿವತ್ತು ಇಲ್ಲ. ಈ ಸಿನಿಮಾದ ಪ್ರತಿಯೊಂದು ಸೀನ್ ಮಾಡಬೇಕಾದ್ರೂ ನನಗೆ ನಮ್ಮ ಮಾವಂದಿರು ನೆನಪಾಗುತ್ತಿದ್ದರು. ಸಿಕ್ಕಾಪಟ್ಟೆ ಎಮೋಶನಲ್ ಸಿನಿಮಾ. ಚಿಕ್ಕವಳಿದ್ದಾಗ ನಾನು ನಿದ್ದೆ ಮಾಡಬೇಕಾದರೆ ನಮ್ಮ ಮಾವಂದಿರು ಆಟೋದಲ್ಲಿ ಒಂದು ರೌಂಡ್ ಕರ್ಕೊಂಡ್ ಹೋಗಿ ಬರ್ತಾ ಇದ್ದರು. ಆಗ ನಾನು ನಿದ್ದೆ ಮಾಡ್ತಾ ಇದ್ದೆ’ ಎನ್ನುವುದು ಅಮೃತಾ ಮಾತು.
ಇದನ್ನೂ ಓದಿ:Sandeepa Dhar ಬ್ಯೂಟಿಫುಲ್ ಫೋಟೋ ಗ್ಯಾಲರಿ
ಚಿತ್ರದ ಬಗ್ಗೆ ಮಾತನಾಡುವ ಅಮೃತಾ, “ಧನಂಜಯ್ ಹಾಗೂ ಶಂಕರ್ ಸೇರಿ ಒಂದೊಳ್ಳೆಯ ಚಿತ್ರ ಮಾಡಿದ್ದಾರೆ. ಸಿನಿಮಾದಲ್ಲಿ ತುಂಬಾ ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದೇನೆ. ಮೇಕಪ್ ಹಾಕದೇ ಆ್ಯಕ್ಟ್ ಮಾಡಿದ್ದೇನೆ. ಟ್ರೇಲರ್ ನೋಡಿದವರು ರಿಯಲಿಸ್ಟಿಕ್ ಆಗಿ ಕಾಣಿಸಿಕೊಂಡಿರುವ ಬಗ್ಗೆ ಹೇಳುತ್ತಿದ್ದಾರೆ. ತಾರಾ ಹಾಗೂ ರಂಗಾಯಣ ಅವರ ಜೊತೆ ಆ್ಯಕ್ಟ್ ಮಾಡಿರೋದು ಖುಷಿ ಕೊಟ್ಟಿದೆ. ಅವರ ಜೊತೆ ಆ್ಯಕ್ಟ್ ಮಾಡಬೇಕಾದರೆ ನನಗೆ ಮುಂದಿನ ಡೈಲಾಗ್ ಏನು ಅಂತ ಮರೆತು ಹೋಗ್ತಾ ಇತ್ತು. ಈ ಸಿನಿಮಾ ಧನಂಜಯ್ ಅವರಿಗೆ ದೊಡ್ಡ ಯಶಸ್ಸು ತಂದುಕೊಡುತ್ತದೆ. ಧನಂಜಯ್ ಯಾವತ್ತೂ ಹೇಳ್ತಾ ಇರ್ತಾರೆ. ಪ್ರಾಮಾಣಿಕವಾಗಿ ಶ್ರಮ ಪಟ್ಟಾಗ ಪ್ರಕೃತಿ ಕುಡಾ ನಮಗೆ ಸಫೋರ್ಟ್ ಮಾಡುತ್ತದೆ, ಎಲ್ಲವೂ ಕೂಡಿ ಬರುತ್ತದೆ ಎಂದು. ಎರಡು ಲಾಕ್‌ಡೌನ್ ನೋಡಿಯೂ ನಮ್ಮ ಸಿನಿಮಾ ಸ್ಟ್ರಾಂಗ್ ಆಗಿ ನಿಂತಿದೆ ಎಂದರೆ ಅದಕ್ಕೆ ಕಾರಣ ಎಲ್ಲರ ಶ್ರಮ’ ಎನ್ನು ವುದು ಅಮೃತಾ ವಿಶ್ವಾಸದ ನುಡಿ.