Advertisement

ಗ್ರಾ.ಪಂ.ಗಳಲ್ಲಿ ಅಮೃತ ಆರೋಗ್ಯ ಅಭಿಯಾನ : ದಕ್ಷಿಣ ಕನ್ನಡ, ಉಡುಪಿ ಗ್ರಾ.ಪಂ.ಗಳಲ್ಲೂ ಜಾರಿ

10:08 AM Aug 17, 2022 | Team Udayavani |

ಕುಂದಾಪುರ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಣಿಕೆಯಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ “ಗ್ರಾಮ ಪಂಚಾಯತ್‌ ಅಮೃತ ಆರೋಗ್ಯ ಅಭಿಯಾನ’ (ಜಿಪಿಎಎಎ) ಈ ವಾರದಲ್ಲಿ ದ.ಕ., ಉಡುಪಿಯಲ್ಲೂ ಆರಂಭಗೊಳ್ಳುತ್ತಿದೆ. ಆರೋಗ್ಯ ಇಲಾಖೆ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಜಂಟಿಯಾಗಿ ನಿರ್ವಹಿಸಲಿವೆ.

Advertisement

ಈ ಯೋಜನೆ ಕರ್ನಾಟಕ ಆರೋಗ್ಯ ಸಂವರ್ಧನ ಟ್ರಸ್ಟ್‌ ಸಹಯೋಗದೊಂದಿಗೆ 14 ಜಿಲ್ಲೆಗಳ 114 ತಾಲೂಕುಗಳ 2,816 ಗ್ರಾ.ಪಂ.ಗಳಲ್ಲಿ ಈಗಾಗಲೇ ಜಾರಿಯಲ್ಲಿದೆ. ಪ್ರಸ್ತುತ ದ.ಕ., ಉಡುಪಿ, ಉ.ಕ., ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಉಳಿದ ಜಿಲ್ಲೆಗಳ 3,146 ಗ್ರಾ.ಪಂ.ಗಳಿಗೂ ವಿಸ್ತರಣೆಯಾಗುತ್ತಿದೆ. ಯುನೈಟೆಡ್‌ ಸ್ಟೇಟ್ಸ್‌ ಏಜೆನ್ಸಿ ಫಾರ್‌ ಇಂಟರ್‌ನ್ಯಾಶನಲ್‌ ಡೆವಲಪ್‌ಮೆಂಟ್‌ ಹಾಗೂ ರಾಜ್ಯ ಪಂಚಾಯತ್‌ರಾಜ್‌ ಇಲಾಖೆಯ ಸಹಯೋಗ ಇದಕ್ಕಿದೆ.

ಉದ್ದೇಶ
ಪ್ರಾಥಮಿಕ ಹಂತದಲ್ಲೇ ರೋಗ ಪತ್ತೆ ಮೂಲಕ ಗ್ರಾಮೀಣ ಜನತೆಯನ್ನು ನಿರೋಗಿಗಳನ್ನಾಗಿಸುವುದು ಅಥವಾ ಕಾಯಿಲೆ ಯಿಂದಾ ಗುವ ಭಾರವನ್ನು ತಗ್ಗಿಸುವುದು, ಕೋವಿಡ್‌ ಲಸಿಕೆ ಪಡೆದುಕೊಳ್ಳಲು ಪ್ರೇರಣೆ, ಮಾನಸಿಕ ಆರೋಗ್ಯದ ಜಾಗೃತಿ, ಬಾಲ್ಯ ವಿವಾಹ ತಡೆ, ಅಪೌಷ್ಟಿಕತೆ ತಡೆ ಯೋಜನೆಯ ಮುಖ್ಯ ಉದ್ದೇಶ.

25 ಸಾವಿರ ರೂ.ಗಳ ಕಿಟ್‌
ಪ್ರತೀ ಗ್ರಾ.ಪಂ.ಗೆ 25 ಸಾವಿರ ರೂ. ಮೊತ್ತದ ಆರೋಗ್ಯ ಕಿಟ್‌ ವಿತರಿಸಲಾಗುತ್ತದೆ. ಅದರಲ್ಲಿ ಮಧು ಮೇಹ, ಅಧಿಕ ರಕ್ತದೊತ್ತಡ, ಜ್ವರ, ರಕ್ತ ಪರೀಕ್ಷೆ ಉಪಕರಣ ಗಳು ಇರುತ್ತವೆ. ಆಶಾ ಕಾರ್ಯ ಕರ್ತೆಯರ ಮೂಲಕ ಹೆಚ್ಚು ಜನ ಸೇರುವಲ್ಲಿ ತಪಾಸಣೆ ಮತ್ತು ಪರೀಕ್ಷೆ ನಡೆಸಿ, ವೈದ್ಯಕೀಯ ಸಲಹೆ ನೀಡಲಾಗುತ್ತದೆ.

ಗೊಂದಲ
10 ಕೋ.ರೂ. ಅನುದಾನ ಮೀಸಲಿಡಲಾಗಿದೆ. ನೋಡೆಲ್‌ ಏಜೆನ್ಸಿಯಾದ ಕೆಎಚ್‌ಪಿಟಿ ತಾಲೂಕಿ ಗೊಬ್ಬ ನೋಡೆಲ್‌ ಅಧಿಕಾರಿಯನ್ನು ಮೇಲ್ವಿ ಚಾರಣೆಗಾಗಿ ನೇಮಿಸಿದೆ. ಅವರು ಪ್ರತೀ ಗ್ರಾ.ಪಂ.ನಲ್ಲೂ ಈ ವ್ಯವಸ್ಥೆ ಸರಿಯಾಗಿ ನಡೆಯು ವಂತೆ ನೋಡಿಕೊಳ್ಳಬೇಕಿದೆ. ಏಜೆನ್ಸಿಯು ಅವರಿಗೆ ಕೆಲಸ ನಿರ್ವಹಿಸುವಂತೆ ಸೂಚಿಸಿದೆ. ಅದಕ್ಕಾಗಿ ಅವರಿಗೆ ತಾ.ಪಂ.ನಲ್ಲಿ ಕೊಠಡಿ ನೀಡಬೇಕಿದ್ದು, ಪಂಚಾಯತ್‌ಗಳಿಗೆ ಸರಕಾರದ ಆದೇಶ ಬರದೇ ಸಮಸ್ಯೆಯಾಗಿದೆ. ಅಭಿಯಾನದಲ್ಲಿ ಉದ್ದೇಶಿಸಿದ ಎಲ್ಲ ಕೆಲಸಗಳನ್ನೂ ಆಶಾ ಕಾರ್ಯಕರ್ತೆಯರು ಈಗಾಗಲೇ ಮಾಡುತ್ತಿದ್ದರೂ ಕೋಟ್ಯಂತರ ರೂ. ವ್ಯಯಿಸಿ ಹೊಸ ಯೋಜನೆ ಯಾಕೆಂಬ ಪ್ರಶ್ನೆ ಕೇಳಿಬರುತ್ತಿದೆ.

Advertisement

ಪ್ರಮುಖ ಅಂಶಗಳು
ಪಂಚಾಯತ್‌ಗಳಿಗೆ ಕೋವಿಡ್‌ ನಿರ್ವಹಣೆ ಕಿಟ್‌ ವಿತರಣೆ, ಟಿಬಿ ಮುಕ್ತ ಪಂಚಾಯತ್‌, “ಸಹಿತ’ ಎನ್ನುವ ಟೆಲಿ ಕೌನ್ಸೆಲಿಂಗ್‌ ಕೇರ್‌ಲೈನ್‌ (1800 532 4600) ಮೂಲಕ ರೋಗಗಳ ಮಾಹಿತಿ, ಗ್ರಾಮೀಣ ಜನತೆಯ ಜೀವನಶೈಲಿ ಆಧಾರಿತ ರೋಗಗಳ ಪತ್ತೆಹಚ್ಚುವಿಕೆ ಮಾಡಲಾಗುತ್ತದೆ. ರೋಗ ಲಕ್ಷಣ ಇರುವವರನ್ನು ಆಶಾ ಕಾರ್ಯಕರ್ತೆಯರ ಮೂಲಕ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬಹುದು.

ಜಿಪಿಎಎಎ ಈ ವಾರದಿಂದ ಕಾರ್ಯಾರಂಭಿಸುವ ಕುರಿತು ಸರಕಾರದಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಬಂದ ಕೂಡಲೇ ಕಾರ್ಯಾರಂಭಿಸಲಾಗುವುದು.
-ಪ್ರಸನ್ನ, ಜಿ.ಪಂ. ಸಿಇಒ/ ಡಾ| ನಾಗಭೂಷಣ ಉಡುಪ, ಡಿಎಚ್‌ಒ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next