Advertisement

ಗುಜರಾತ್‌ ಮಾದರಿಯಲ್ಲಿ ಅಮೃತ್‌

12:39 PM Feb 17, 2021 | Team Udayavani |

ಬೆಂಗಳೂರು: ಕೇಂದ್ರದ ಮಹತ್ವಾಕಾಂಕ್ಷಿ “ಅಮೃತ್‌’ ಯೋಜನೆಯಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ನಗರ ಉತ್ತರ ತಾಲೂಕಿನ ಯಲಹಂಕ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಈ ಪ್ರದೇಶವನ್ನು ಗುಜರಾತ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

Advertisement

ಒಟ್ಟಾರೆ ನಾಲ್ಕು ಹಂತಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದು, 1,580 ಎಕರೆಯಲ್ಲಿ 784 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಯಲಹಂಕ ಮತ್ತು ಜಾಲ ಹೋಬಳಿಯ ಲಕ್ಷ್ಮೀ ಸಾಗರ, ಗಂಟಿಗಾನಹಳ್ಳಿ, ನಾಗದಾಸನಹಳ್ಳಿ ಗ್ರಾಮಗಳನ್ನು ಗುರುತಿಸಲಾಗಿದ್ದು, ಸುಮಾರು 137.88 ಹೆಕ್ಟೇರ್‌ ಪ್ರದೇಶದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಇದರಲ್ಲಿ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ಇರುವುದಿಲ್ಲ. ಬದಲಿಗೆ ಭೂಮಾಲಿಕರಿಗೆ ಶೇ. 50 ಜಮೀನು ಅಭಿವೃದ್ಧಿಪಡಿಸಿ ಹಿಂತಿರುಗಿಸಲಾಗುತ್ತದೆ. ಗುಜರಾತ್‌ನಲ್ಲಿ ಇದು ಯಶಸ್ವಿಯಾಗಿದ್ದರಿಂದಅದೇ ಮಾದರಿಯನ್ನು ಇಲ್ಲಿ ಅನುಸರಿಸಲಾಗುತ್ತಿದೆ.ಈಚೆಗೆ ನಡೆದ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಬಿಡಿಎನಿಂದ ಕೈಗೆತ್ತಿಕೊಳ್ಳೂವುದುಹಾಗೂ ಯೋಜನಾ ತಯಾರಿಕೆ ಉದ್ದೇಶ ಘೋಷಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಭೂಮಾಲಿಕತ್ವ ಬದಲಾವಣೆ ಸೇರಿದಂತೆ ಹಲವು ತಾಂತ್ರಿಕ ಅಂಶಗಳಿಗೆ ತೊಡಕು ಉಂಟಾಗದಿರಲು ಕೆಟಿಸಿಪಿ ಕಾಯ್ದೆಗೆ ಕೆಲವು ಅಗತ್ಯ ತಿದ್ದುಪಡಿಗಳನ್ನು ತರಲು ಸರ್ಕಾರಕ್ಕೆ ಬಿಡಿಎ ಪ್ರಸ್ತಾವನೆಯನ್ನೂ ಸಲ್ಲಿಸಿದೆ. ಅದು ಅನುಮೋದನೆಗೊಂಡ ನಂತರ ಶಿವರಾಮ ಕಾರಂತ ಬಡಾವಣೆ ಜತೆಗೆ ಈ ಯೋಜನೆಯನ್ನು ಜಾರಿಗೊಳಿಸುವ ಯೋಚನೆ ಇದೆ. ಆದರೆ, ಇನ್ನೂ ನಿರ್ದಿಷ್ಟ ಗಡುವು ನಿಗದಿ ಆಗಿಲ್ಲ ಎಂದು ಬಿಡಿಎ ಆಯುಕ್ತ ಡಾ.ಎಚ್‌.ಆರ್‌. ಮಹದೇವ್‌ ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಮತ್ತು ಅಭಿವೃದ್ಧಿ ಪಡಿಸಿದ ನಿವೇಶನಗಳ ಹಂಚಿಕೆ ಯೋಜನೆಯಲ್ಲಿ ಅನೇಕ ಭೂಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ವರ್ಷಗಟ್ಟಲೆ ಪ್ರಕರಣ ಕೋರ್ಟ್‌ ನಲ್ಲಿ ವಿಚಾರಣೆ ಹಂತ ದಲ್ಲಿದ್ದು, ಪ್ರಕರಣಗಳ ವಿಲೇವಾರಿ ವಿಳಂಬದಿಂದ ಯೋಜನೆಗಳಿಗೂ ಹಿನ್ನಡೆಉಂಟಾಗಿದೆ. ಜತೆಗೆ ವೆಚ್ಚವೂ ಹೆಚ್ಚಳವಾಗಿದೆ. ಈ ಮಧ್ಯೆ ಕೆಲವು ಪ್ರಕರಣಗಳಲ್ಲಿ ಭೂಮಾಲೀಕರುಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟಿರುವುದರಿಂದಪ್ರಾಧಿಕಾರಕ್ಕೆ ಆರ್ಥಿಕ ಹೊರೆ ಆಗುತ್ತಿದೆ. ಆದ್ದರಿಂದಭೂಮಾಲೀಕರ ಸಹಭಾಗಿತ್ವದಲ್ಲಿ ಅಮೃತ್‌ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ಉತ್ತರದಲ್ಲೇ ಯಾಕೆ?: ಯಲಹಂಕ ಮತ್ತು ಸುತ್ತಲಿನ ‌¤ ಪ್ರದೇಶದಲ್ಲಿ ಹೆಚ್ಚು ಜಾಗದ ಲಭ್ಯತೆ ಇದೆ. ಅದೂ ಕಡಿಮೆ ಜನರ ಮಾಲಿಕತ್ವದಲ್ಲಿ ಅಧಿಕ ಭೂಮಿ ಸಿಗುವುದರಿಂದ ಯೋಜಿತ ಅಭಿವೃದ್ಧಿ ತ್ವರಿತಗತಿಯಲ್ಲಿ ಆಗುತ್ತದೆ. ಅಲ್ಲದೆ, ಸ್ವತ: ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಪ್ರತಿನಿಧಿಸುವ ಕ್ಷೇತ್ರವೂ ಅಲ್ಲಿಯೇ ಬರುವುದರಿಂದ ಜನರ ಮನವೊಲಿಕೆಗೆ ಮತ್ತಷ್ಟು ಸುಲಭವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಈ ಮಾರ್ಗದಲ್ಲಿ ಬರುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಪೂರಕ ವಾತಾವರಣವಿದೆ ಎಂಬುದು ಪ್ರಾಧಿಕಾರದ ಲೆಕ್ಕಾಚಾರ.

Advertisement

ಏನೇನು ಬರಲಿದೆ? :

137.88 ಹೆಕ್ಟೇರ್‌ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮನೆಗಳು, ಉದ್ಯಾನಗಳು ಮತ್ತು ಮುಕ್ತ ಪ್ರದೇಶ, ನಾಗರಿಕ ಸೌಲಭ್ಯಗಳು, ರಸ್ತೆ ಅಭಿವೃದ್ಧಿ, ಭೂಬ್ಯಾಂಕ್‌ ಸೇರಿದಂತೆ ಮತ್ತಿತರ ಸೌಕರ್ಯಗಳು ಬರಲಿವೆ. ಮೊದಲಹಂತದ ಮೊದಲ ಕಂತಿನಲ್ಲಿ ಸುಮಾರು 40 ಲಕ್ಷರೂ. ಬಿಡುಗಡೆ ಆಗಿದೆ.ಕೇಂದ್ರ ಸರ್ಕಾರ 25 ನಗರಗಳನ್ನು ಈ ಅಮೃತ್‌ ಯೋಜನೆ ಅಡಿ ಆಯ್ಕೆ ಮಾಡಿದೆ. ಅದರಲ್ಲಿ ಬೆಂಗಳೂರು ಕೂಡ ಒಂದು

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next