Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಆರ್‌ಎನ್ ಫೌಂಡೇಶನ್ ಹಾಗೂ ಬೀಳಗಿ ಬಿಜೆಪಿ ಘಟಕದ ಆಶ್ರಯದಲ್ಲಿ ಆ. 18ರಂದು ಕೃಷ್ಣಾ ಜನ್ಮಷ್ಟಮಿ ಜನ್ಮದಿನದಂದು ಸಚಿವ ಮುರುಗೇಶ ನಿರಾಣಿ ಅವರಿಗೂ 57ನೇ ಜನ್ಮದಿನದ ಸಂಭ್ರಮ, ಜತೆಗೆ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿಸಲು ಸೇವಾ ಅಮೃತ ಹೆಸರಿನಲ್ಲಿ 75 ಸಮಾಜಮುಖೀ ಕಾರ್ಯಕ್ರಮಗಳು ಆ. 16ರಿಂದ 30ರವರೆಗೆ ನಡೆಯಲಿವೆ ಎಂದರು.
Related Articles
Advertisement
16ರಂದು ಹೂಲಗೇರಿಯಲ್ಲಿ, ಆ. 18ರಂದು ಕಡಪಟ್ಟಿ ಹಾಗೂ 24ರಂದು ಮುಧೋಳ ಪಟ್ಟಣದಲ್ಲಿ ಉಚಿತ ಕೌಶಲ್ಯ ಅಭಿವೃದ್ಧಿ ಶಿಬಿರ, ಆ. 17ರಂದು ಗಲಗಲಿ, 20ರಂದು ಬೀಳಗಿ, 23ರಂದು ಕಲಾದಗಿ, 24ರಂದು ಮಹಾಲಿಂಗಪೂರ, 25ರಂದು ಬನಹಟ್ಟಿ, 26ರಂದು ಅನವಾಲ, 29ರಂದು ಜಮಖಂಡಿ ಮತ್ತು 30ರಂದು ಸಾವಳಗಿಯಲ್ಲಿ ಒಟ್ಟು ಎಂಟು ಸ್ಥಳಗಳಲ್ಲಿ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಸಿಡಿಪಿ ಕಾರ್ಯಾಗಾರ, ಆ. 18ರಂದು ಜಮಖಂಡಿ, ಕಲಾದಗಿ, ಹಲಕುರ್ಕಿ, ಆ. 19ರಂದು ಬೀಳಗಿ ತಾಲೂಕಿನ ಢವಳೇಶ್ವರ, 20ರಂದು ಕೆರೂರ, 29ರಂದು ಬನಹಟ್ಟಿಯಲ್ಲಿ ಒಟ್ಟು 7 ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದರು.
ಆ.16ರಿಂದ 30 ರವರೆಗೆ ಒಟ್ಟು 11 ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲಾಗಿದ್ದು 16ರಂದು ತುಂಗಳ, 18ರಂದು ತೆಗ್ಗಿ, 19 ಕೋಲೂರ, 22ರಂದು ಆಲಗೂರ, 23ರಂದು ಕಂದಗಲ, 24ರಂದು ನಾವಳಗಿ, 26 ಸುನಗ, 29ರಂದು ಚಿಕ್ಕಾಲಗುಂಡಿ ಹಾಗೂ 30ರಂದು ಹಿಪ್ಪರಗಿಯಲ್ಲಿ ಆಯೋಜಿಸಲಾಗಿದೆ. ಗ್ರಾಮಸ್ಥರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
18ರಂದು ಕಾಡರಕೊಪ್ಪ, ಗಲಗಲಿ, ಲಿಂಗನೂರು, ಢವಳೇಶ್ವರ, ಅನವಾಲ, ಒಂಟಗೋಡಿ, ಮನ್ನೇರಿ, ಕಾಕನೂರು, ಸೂಳಿಕೇರಿ, ಆ. 19ರಂದು ಬಾಡಗಿ, ಸುರೇಬಾನ, ಚಿಕ್ಕಶೆಲ್ಲಿಕೇರಿ, ಹೆಬ್ಬಳ್ಳಿ, ಶಾರದಾಳ ಹಾಗೂ ಆ. 20ರಂದು ಸುನಗ, ಶಿರೋಳ, ಕಮತಗಿ, ಮುಧೋಳ, ಗಿರಿಸಾಗರದಲ್ಲಿ ಕೃಷಿ ವಿಚಾರ ಸಂಕಿರಣ ಹಾಗೂ ಕಬ್ಬು ಕಾರ್ಯಾಗಾರ ಆಯೋಜಿಸಲಾಗಿದೆ. 20ರಂದು ಮುಧೋಳದ ಹೇಮರೆಡ್ಡಿ ಕಲ್ಯಾಣ ಮಂಟಪದಲ್ಲಿ ಯೋಗ ಶಿಬಿರ ನಡೆಯಲಿದೆ ಎಂದರು.
18 ರಂದು ನೀರಲಕೇರಿ, ಅನವಾಲ, ಕಾತರಕಿ, ಬೆಳಗಕಿಯಲ್ಲಿ, 19ರಂದು ಯಾದವಾಡ, ಉಗಲವಾಟ, ಮುತ್ತಲಗೇರಿ, ಚಿಮ್ಮಡ, ಕವಟಗಿ, ಅಮ್ಮಲಝರಿ, ಉದಗಟ್ಟಿ, 20ರಂದು ಕುಂದರಗಿ, ಪಟ್ಟದಕಲ್ಲು, ನೀಲಗುಂದ ಹಾಗೂ ಕಾತರಕಿ ಗ್ರಾಮಗಳಲ್ಲಿ ಒಟ್ಟು 15 ಉಚಿತ ಪಶು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಸೇವಾ ಅಮೃತ ಹೆಸರಿನಲ್ಲಿ 75 ಸಮಾಜಿಮುಖೀ ಕಾರ್ಯಕ್ರಮಗಳ ಮೂಲಕ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಸಚಿವ ಮುರುಗೇಶ ನಿರಾಣಿ ಅವರ 57ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಜಿಲ್ಲೆಯ ಜನರು ಸೇವೆಗಳ ಪ್ರಯೋಜನ ಪಡೆಯಬೇಕು ಎಂದು ಕೋರಿದರು.
ಬೀಳಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಎಪಿಎಂಸಿ ಮಾಜಿ ನಿರ್ದೇಶಕ ಶ್ರೀಶೈಲ ಗೌರಿ, ಪ್ರಮುಖರಾದ ರಮೇಶ ಮೊರಟಗಿ, ಜಗತ್‌ನಾಯಕ ಕಣವಿ, ಮಹೇಶ ಮೇಟಿ, ಡಾ| ನಾಗೇಶ ಬೇವರಗಿ ಉಪಸ್ಥಿತರಿದ್ದರು.
ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಹೆಜ್ಜೆ ಇಟ್ಟಿರುವ ಸಚಿವ ಮುರುಗೇಶ ನಿರಾಣಿ, ಬೀಳಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರ ವ್ಯಾಪ್ತಿಯ 411.10 ಕೋಟಿ ರೂ. ಗಳ ವೆಚ್ಚದ ಅನವಾಲ ಏತ ನೀರಾವರಿ ಯೋಜನೆಗೆ ಸಂಪುಟ ಸಭೆ ಅನುಮೋದನೆ ನೀಡುವ ಮೂಲಕ ಕ್ಷೇತ್ರಕ್ಕೆ 65 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಲಿದೆ. ಇದು ಸಚಿವ ಮುರುಗೇಶ ನಿರಾಣಿ ಅವರ ನಿರಂತರ ಪ್ರತಿಫಲದ ಶ್ರಮವಾಗಿದೆ. ಈ ಅನುಮತಿ ನೀಡಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. -ಹಣಮಂತ ನಿರಾಣಿ, ವಿಧಾನಪರಿಷತ್ ಸದಸ್ಯ