Advertisement

ದೇಶದ 13 ನಿಲ್ದಾಣಗಳಿಗೆ “ಅಮೃತ” ಘಳಿಗೆ

09:29 PM Aug 05, 2023 | Team Udayavani |

ದೇಶದ ಸಂಚಾರ ವ್ಯವಸ್ಥೆಯ ಜಿವನಾಡಿಯಾಗಿರುವ ರೈಲ್ವೇ ಸಂಪರ್ಕ ಜಾಲದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಪೂರ್ತಿಗೊಂಡ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಹಲವು ಯೋಜನೆಗಳ ಪೈಕಿ “ಅಮೃತ ಭಾರತ ನಿಲ್ದಾಣ ಯೋಜನೆ” (ಎಬಿಎಸ್‌ಎಸ್‌) ಕೂಡ ಒಂದು. ಅದರ ಅನ್ವಯ ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಕರ್ನಾಟಕದ 13 ಸೇರಿದಂತೆ 508 ರೈಲು ನಿಲ್ದಾಣಗಳನ್ನು ಪುನರ್‌ ಅಭಿವೃದ್ಧಿಗೊಳಿಸುವ ಯೋಜನೆಗೆ ನವದೆಹಲಿಯಿಂದಲೇ ವರ್ಚುವಲ್‌ ಮೂಲಕ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ

Advertisement

27 ರಾಜ್ಯಗಳು ಮತ್ತು ನಿಲ್ದಾಣಗಳು
ರಾಜಸ್ಥಾನ ಮತ್ತು ಉತ್ತರ ಪ್ರದೇಶ-55, ಬಿಹಾರ-49, ಮಹಾರಾಷ್ಟ್ರ-44, ಪಶ್ಚಿಮ ಬಂಗಾಳ-37, ಮಧ್ಯಪ್ರದೇಶ-34, ಅಸ್ಸಾಂ-32, ಒಡಿಶಾ-25, ಪಂಜಾಬ್‌-22, ಗುಜರಾತ್‌ ಮತ್ತು ತೆಲಂಗಾಣ-21, ಜಾರ್ಖಂಡ್‌-20, ಆಂಧ್ರಪ್ರದೇಶ ಮತ್ತು ತಮಿಳುನಾಡು-18, ಹರ್ಯಾಣ-15

ರಾಜ್ಯದಲ್ಲಿ ಯಾವ ನಿಲ್ದಾಣಕ್ಕೆ ಎಷ್ಟು ಮೊತ್ತ ಮಂಜೂರು?
ಅಳ್ನಾವರ-17 ಕೋಟಿ ರೂ., ಘಟಪ್ರಭಾ-18.2 ಕೋಟಿ ರೂ., ಮಂಗಳೂರು ಜಂಕ್ಷನ್‌- 19.32 ಕೋಟಿ ರೂ, ಗೋಕಾಕ್‌ ರೋಡ್‌ -17 ಕೋಟಿ ರೂ., ಗದಗ-23.2 ಕೋಟಿ ರೂ., ಕೊಪ್ಪಳ-21.1 ಕೋಟಿ ರೂ., ಬಳ್ಳಾರಿ-16.7 ಕೋಟಿ ರೂ., ಅರಸೀಕೆರೆ-34.1 ಕೋಟಿ ರೂ., ಹರಿಹರ-25.2 ಕೋಟಿ ರೂ.

ಯೋಜನೆಯಲ್ಲಿ ಏನು ಇರಲಿದೆ?
– ಮುಂದಿನ ಹಲವು ವರ್ಷಗಳನ್ನು ಗಮನಿಸಿಕೊಂಡು ನಿಲ್ದಾಣಗಳ ನಿರಂತರ ಅಭಿವೃದ್ಧಿ.
– ಉಚಿತ ವೈ-ಫೈ, 5ಜಿ ಮೊಬೈಲ್‌ ಟವರ್‌ ಸ್ಥಾಪನೆ.
– ಪಾದಚಾರಿಗಳಿಗೆ ನಡೆಯಲು ಪ್ರತ್ಯೇಕ ವ್ಯವಸ್ಥೆ, ಸದ್ಯ ಇರುವ ಅನಗತ್ಯ ನಿರ್ಮಾಣಗಳ ತೆರವು, ಅಗಲವಾಗಿರುವ ರಸ್ತೆಗಳು.
– ವಾಹನಗಳನ್ನು ನಿಲ್ಲಿಸಲು ಬೇಕಾದ ವ್ಯವಸ್ಥೆ, ದಿವ್ಯಾಂಗರಿಗೆ ಅನುಕೂಲವಾಗುವಂತೆ ಆಸನ ಮತ್ತು ಇತರ ಸೌಲಭ್ಯಗಳು.
– ಪ್ರಯಾಣಿಕರಿಗಾಗಿ ಪ್ಲಾಟ್‌ಫಾರಂ, ವೆಯಿಂಟಿಂಗ್‌ ರೂಂ, ವಿಶ್ರಾಂತಿ ಗೃಹಗಳಲ್ಲಿ ಉತ್ತಮ ಆಸನ ವ್ಯವಸ್ಥೆ.
– ನಿಲ್ದಾಣಕ್ಕೆ ಚಾವಣಿ ನಿರ್ಮಾಣಕ್ಕೆ ಆದ್ಯತೆ.
– ಅತ್ಯಾಧುನಿಕ ಲಿಫ್ಟ್, ಎಸ್ಕಲೇಟರ್‌ಗಳು, ಹೆಚ್ಚಿನ ರೀತಿಯ ಶುಚಿತ್ವಕ್ಕೆ ಕ್ರಮ.
– ಅತ್ಯಾಧುನಿಕ ರೀತಿಯ ಶೌಚಾಲಯ.
– ಸ್ಥಳೀಯ ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪದಿಂದ ಕೂಡಿದ ಕಟ್ಟಡಗಳು

1,309– ಗುರುತಿಸಲಾಗಿರುವ ನಿಲ್ದಾಣಗಳು
2022 ಡಿಸೆಂಬರ್‌- ಯೋಜನೆ ಆರಂಭವಾದದ್ದು

Advertisement
Advertisement

Udayavani is now on Telegram. Click here to join our channel and stay updated with the latest news.

Next