Advertisement

ಅಮೃತ್ ನೋನಿ ಸಂಸ್ಥೆಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿಯ ಪುರಸ್ಕಾರ

12:39 PM Nov 15, 2021 | keerthan |

ಶಿವಮೊಗ್ಗ: ಪ್ರಸಿದ್ದ ಅಮೃತ್ ನೋನಿ ಸಂಸ್ಥೆಯು ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿಯ ಪುರಸ್ಕಾರ ಪಡೆದಿದೆ.

Advertisement

ಅಮೃತ್ ನೋನಿ ಖ್ಯಾತಿಯ ಶಿವಮೊಗ್ಗ ಮೂಲದ ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ಲಾಂಟ್ ಜೀನೋಮ್ ಸೇವಿಯರ್ ಎಂಬ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

ವಿಶಿಷ್ಟ ಗಿಡಗಳನ್ನು ಬೆಳೆಸಿ, ಸಂರಕ್ಷಿಸಿದಕ್ಕೆ ಜೀನೋಮ್ ಸೇವಿಯರ್ ಪ್ರಶಸ್ತಿ ನೀಡಲಾಗುತ್ತದೆ. ದೇಶದಲ್ಲಿ 25 ಜನರಿಗೆ ಮಾತ್ರ ಪ್ಲಾಂಟ್ ಜೀನೋಮ್ ಸೇವಿಯರ್ ಅವಾರ್ಡ್ ನೀಡಲಾಗುತ್ತದೆ.

ನೋನಿ ಹಣ್ಣನ್ನು ಪರಿಚಯಿಸಿ, ಜನಪ್ರಿಯಗೊಳಿಸಿದ್ದಕ್ಕೆ ಅಮೃತ್ ನೋನಿ ಸಂಸ್ಥೆಗೆ ಪುರಸ್ಕಾರ ನೀಡಲಾಗುತ್ತಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಂದ ಸಂಸ್ಥೆಯ ಎಂಡಿ ಶ್ರೀನಿವಾಸ್ ಮೂರ್ತಿ ಪ್ರಶಸ್ತಿ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next