Advertisement

ಇಡೀ ದಕ್ಷಿಣ ಭಾರತದಲ್ಲಿ ಶಾಂತಿ ಕಾಪಾಡಲು RAF ಘಟಕ ಸಹಾಯಕವಾಗಲಿದೆ :ಕೇಂದ್ರ ಸಚಿವ ಅಮಿತ್ ಶಾ

06:10 PM Jan 16, 2021 | sudhir |

ಶಿವಮೊಗ್ಗ : ಭದ್ರಾವತಿಯ ಬಳ್ಳಾಪುರದಲ್ಲಿ ಶಂಕುಸ್ಥಾಪನೆಗೊಂಡ ಆರ್ ಎಎಫ್ ಘಟಕದಿಂದ ಇಡೀ ದಕ್ಷಿಣ ಭಾರತದಲ್ಲಿ ಶಾಂತಿ ಕಾಪಾಡಲು ಸಹಾಯಕವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

Advertisement

ಶಿವಮೊಗ್ಗ ಜಿಲ್ಲೆ‌ ಭದ್ರಾವತಿಯ ಬುಳ್ಳಾಪುರದಲ್ಲಿ ಆರ್ ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅಮಿತ್ ಶಾ ಭದ್ರಾವತಿಯಲ್ಲಿ 97 ನೇ ಆರ್ ಎಎಫ್ ಘಟಕ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ.ಯಡಿಯೂರಪ್ಪ ಅವರು ಭದ್ರಾವತಿಯಲ್ಲಿ ಆರ್ ಎ ಎಫ್ ಘಟಕ ಸ್ಥಾಪಿಸುವಂತೆ ಪತ್ರ ಬರೆದಿದ್ದರು‌. ಆದುದರಿಂದ ಇಂದು ಇದರ ಭೂಮಿ ಪೂಜೆಯನ್ನು ನೆರವೇರಿಸಿದ್ದೇವೆ ಇದರಿಂದ ಇಡೀ ದಕ್ಷಿಣ ಭಾರತದಲ್ಲಿ ಶಾಂತಿ ಕಾಪಾಡಲು ಈ ಘಟಕ ಸಹಾಯಕವಾಗಲಿದೆ ಎಂದರು. ಅಲ್ಲದೆ ಶಿವಮೊಗ್ಗ ಜಿಲ್ಲೆಯಲ್ಲಿ ಇನ್ನೊಂದು‌ ಕೇಂದ್ರೀಯ ವಿದ್ಯಾಲಯ ಆರಂಭಿಸುವುದಾಗಿ ಜನತೆಗೆ ಶುಭ ಸುದ್ದಿಯನ್ನು ಕೇಂದ್ರ ಸಚಿವರು ನೀಡಿದರು.

ಇದನ್ನೂ ಓದಿ:ಕೋವ್ಯಾಕ್ಸಿನ್ ನಿಂದ ಅಡ್ಡಪರಿಣಾಮ ಸಂಭವಿಸಿದರೆ ಪರಿಹಾರ ಕೊಡುತ್ತೇವೆ; ಭಾರತ್ ಬಯೋಟೆಕ್

ದೇಶದಲ್ಲಿ ಶಾಂತಿ‌ಸ್ಥಾಪನೆ‌ ಮಾಡುವ ಉದ್ದೇಶದಿಂದಲೇ ಆರ್ ಎಎಫ್ ಘಟಕ ಆರಂಭಗೊಂಡಿದೆ. ಅಶ್ರುವಾಯು ಸಿಡಿಸದೆ, ಗುಂಡು ಹಾರಿಸದೆ ಗಲಭೆ ನಿಯಂತ್ರಿಸಿ ಶಾಂತಿ‌ಸ್ಥಾಪಿಸುವ ತಾಕತ್ತು ಆರ್ ಎಎಫ್ ಗೆ ಇದೆ. ಅಲ್ಲದೆ ಈ ಕೆಲಸದಲ್ಲಿ‌ ಆರ್ ಎಎಫ್ ಇದುವರೆಗೆ ಸಫಲವೂ ಆಗಿದೆ. ಸಿಆರ್ ಪಿಎಫ್ ದೇಶದ ಅತಿ‌ದೊಡ್ಡ ಶಕ್ತಿಯಾಗಿದೆ ಎಂದರು.

Advertisement

3.50 ಲಕ್ಷ‌ ಸಿಆರ್ ಪಿಎಫ್‌ಯೋದರು ದೇಶದ ಆಂತರಿಕ‌ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಕ್ಸಲರು ಹಾಗೂ ಮಾವೋವಾದಿಗಳಿಂದ‌ ದೇಶವನ್ನು ಸಿಆರ್ ಪಿಎಫ್ ಯೋದರು ರಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ನಂತರ ಮಾತನಾಡಿದ ಅವರು ಪ್ರಧಾನಿ ನರೇಂದ್ರ‌ಮೋದಿ ಅವರ ನೇತೃತ್ವದಲ್ಲಿ ಭಾರತದಲ್ಲೇ‌ ಕರೋನಾಗೆ ವ್ಯಾಕ್ಸಿನ್ ಕಂಡುಹಿಡಿಯಲಾಗಿದೆ. ಕರೋನಾ ಬಂದ ವೇಳೆಯಲ್ಲಿ‌ ದೇಶದಲ್ಲಿ ಟೆಸ್ಟ್ ಗೆ ಒಂದೇ ಲ್ಯಾಬ್ ಇತ್ತು ಇಂಥ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ‌ನಾವು ಕ್ರಾಂತಿಯನ್ನೇ ಮಾಡಿದ್ದೇವೆ, ಪ್ರಧಾನಿಯವರ ದೂರದೃಷ್ಟಿಯಿಂದಾಗಿ ಇದೀಗ ಕರೋನಾಗೆ ಲಸಿಕೆ ಬಂದಿದೆ. ಇಂದು ಕರೋನಾ ವ್ಯಾಕ್ಸಿನೇಷನ್ ಗೆ ಚಾಲನೆ ನೀಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ ಎಂದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಆರ್ ಎಎಫ್‌ ಘಟಕ ಆರಂಭಗೊಳ್ಳುತ್ತಿರುವುದು ಕರ್ನಾಟಕದ ಜನರಿಗೆ ಸಂತಸದ ಸಂಗತಿ. ಕರ್ನಾಟಕಕ್ಕೆ ಇಂದು ಅವಿಸ್ಮರಣೀಯ ದಿನ. ಗೃಹ ಸಚಿವ ಅಮಿತ್ ಶಾ ಅವರು ಆರ್ ಎಎಫ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರು.

ಇದುವರೆಗೆ ಕರ್ನಾಟಕದಲ್ಲಿ‌ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಬೇರೆ ರಾಜ್ಯಗಳಿಂದ ಆರ್ ಎಎಫ್ ಸಿಬ್ಬಂದಿ ಕರೆಸಬೇಕಾಗಿತ್ತು. ಇದೀಗ ಕರ್ನಾಟಕ ಭದ್ರಾವತಿಯಲ್ಲಿ ಈ ಘಟಕ ಆರಂಭಗೊಳ್ಳುತ್ತಿರುವುದು ಸ್ವಾಗತಾರ್ಹ. ಭದ್ರಾವತಿ ಹೊರವಲಯದ ಬುಳ್ಳಾಪುರದ 50 ಎಕರೆ ಜಮೀನಿನಲ್ಲಿ ಈ ಘಟಕ ಆರಂಭಗೊಳ್ಳುತ್ತಿದ್ದು ಕರ್ನಾಟಕ, ಗೋವಾ, ಪುದುಚೆರಿ, ಕೇರಳ ರಾಜ್ಯಗಳ ಕಾರ್ಯವ್ಯಾಪ್ತಿಯನ್ನು ಈ ಘಟಕ ಹೊಂದಿದೆ ಎಂದರು.

ಸರ್ದಾರ್ ವಲ್ಲಭಾಯ್ ಪಟೇಲ್ ಬಳಿಕ ಅಮಿತ್ ಶಾ ಅಂತವರು ನಮಗೆ ಗೃಹ ಸಚಿವರಾಗಿ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next