Advertisement
ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆರಂಭಿಸಿರುವ “ಪರಿಬೊರ್ತನ್ ಯಾತ್ರಾ’ ರ್ಯಾಲಿಯ 4ನೇ ಹಂತಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಶಾ, ಅಂಫಾನ್ ಚಂಡಮಾರುತದ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರವಾಗಿರುವ ಆರೋಪ ಕೇಳಿಬಂದಿದ್ದು ಅವೆಲ್ಲವನ್ನೂ ತನಿಖೆಗೊಳಪಡಿಸಲಾಗುತ್ತದೆ. ಅದಕ್ಕಾಗಿ ವಿಶೇಷ ತನಿಖಾ ತಂಡವನ್ನು ನಿಯೋಜಿಸಲಾಗುತ್ತದೆ ಎಂದರು.
ಅಲ್ಲದೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದ ಎಲ್ಲಾ ಕ್ಷೇತ್ರಗಳಲ್ಲಿ ಅಲ್ಲಿನ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗುತ್ತದೆ ಎಂದು ಭರವಸೆ ನೀಡಿದರು.
Related Articles
ಅಮಿತ್ ಶಾ ಅವರ ಟೀಕೆಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ.
“”ನನ್ನ ಸೋದರಳಿಯ ಅಭಿಷೇಕ್ ಬ್ಯಾನರ್ಜಿಯವರ ವಿರುದ್ಧ ಖುದ್ದು ನೀವೇ ನಿಂತು ಗೆದ್ದು ತೋರಿಸಿ. ಆಮೇಲೆ ನನ್ನನ್ನು ಎದುರಿಸುವಿರಂತೆ” ಎಂದು ಅವರು ಸವಾಲು ಹಾಕಿದ್ದಾರೆ. 24 ಪರಗಣ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, “”ನನ್ನ ಸೋದರಳಿಯ ನೇರವಾಗಿ ರಾಜ್ಯಸಭಾ ಸದಸ್ಯರಾಗಿ ಸಂಸದರಾಗಬಹುದಿತ್ತು. ಆದರೆ, ಅವರು ಜನಾದೇಶ ಪಡೆಯಲು ಮುಂದಾದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ನೀವು ಅದೇ ರೀತಿ ಅವರ ವಿರುದ್ಧವೇ ಗೆದ್ದು ತೋರಿಸಿ” ಎಂದು ಮಮತಾ ಹೇಳಿದ್ದಾರೆ.
Advertisement