Advertisement
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ನಡೆದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಲಕ್ಷಾಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸರಕಾರ ಉಳಿದ ರಾಜ್ಯಗಳಿಗೆ ಮಾದರಿ. ಕ್ರಾಂತಿಕಾರಕ ಕ್ರಮಗಳಿಂದ ದೇಶದ ಜನರಲ್ಲಿ ಮೋದಿ ಆಡಳಿತದ ಬಗ್ಗೆ ವಿಶ್ವಾಸ ಮೂಡಿದೆ. ಕರ್ನಾಟಕದಲ್ಲೂ ಯಡಿಯೂರಪ್ಪ ನೇತೃತ್ವದ ಸರಕಾರದಿಂದ ಪ್ರಗತಿ ಕಾಣುತ್ತಿದೆ. ಜನರಲ್ಲಿ ಹೊಸ ಭರವಸೆ ಮೂಡಿದೆ. ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಾವಿರಾರು ಸದಸ್ಯರು ಆಯ್ಕೆಯಾಗಿರುವುದೇ ಇದಕ್ಕೆ ಸಾಕ್ಷಿ. ಯಡಿಯೂರಪ್ಪ ಅವರಿಗೆ ಮನಃಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಅವರ ಅನುಭವದ ನೇತೃತ್ವದಲ್ಲಿ ಕರ್ನಾಟಕವು ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದರು.
Related Articles
Advertisement
ಮೋದಿ ಸರಕಾರ 370ನೇ ವಿಧಿಯನ್ನು ಕಿತ್ತೂಗೆಯಿತು. ಪರಿಣಾಮವಾಗಿ ಜಮ್ಮು-ಕಾಶ್ಮೀರ ದಲ್ಲಿ ಈಗ ಸಂಪೂರ್ಣ ಶಾಂತಿ ನೆಲೆಸಿದೆ. ಮೋದಿ ಎರಡನೇ ಬಾರಿಗೆ ಪ್ರಧಾನಿಯಾದಾಗ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಇದೆಲ್ಲ ಕಾಂಗ್ರೆಸ್‌ನಿಂದ ಏಕೆ ಸಾಧ್ಯವಾಗಲಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಹೆದರದೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ
ಮೋದಿ ಸರಕಾರ ಕೋವಿಡ್ ಮಹಾಮಾರಿಯನ್ನು ಸಮರ್ಥವಾಗಿ ನಿಯಂತ್ರಿಸಿದೆ. ಆದರೆ ಇದನ್ನೂ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ನಮ್ಮ ವಿಜ್ಞಾನಿಗಳು ಶ್ರಮಪಟ್ಟು ಲಸಿಕೆ ತಯಾರಿಸಿದರೆ ಅಲ್ಲೂ ಅನುಮಾನ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಸಂಸ್ಕೃತಿ. ಲಸಿಕೆಯ ವಿಚಾರದಲ್ಲಿ ಕಾಂಗ್ರೆಸ್ ಮಾತನ್ನು ನಂಬಬೇಡಿ. ಅಂಜಿಕೆಯಿಲ್ಲದೇ ಲಸಿಕೆ ಹಾಕಿಸಿಕೊಳ್ಳಿ. ಕರ್ನಾಟಕದಲ್ಲಿ ಆತ್ಮನಿರ್ಭರ ಯೋಜನೆಯಡಿ ಅನೇಕ ಘಟಕಗಳು ನಿರ್ಮಾಣವಾಗಿವೆ. ಲಕ್ಷಾಂತರ ಜನರಿಗೆ ಉದ್ಯೋಗ ಸಿಕ್ಕಿದೆ. ಕೊಪ್ಪಳದಲ್ಲಿ ನಿರ್ಮಾಣವಾಗಲಿರುವ ಆಟಿಕೆ ತಯಾರಿಕೆ ಘಟಕ ಚೀನದ ಮೇಲಿನ ಅವಲಂಬನೆಯನ್ನು ದೂರ ಮಾಡಲಿದೆ ಎಂದು ಶಾ ಹೇಳಿದರು.
ನಗು ಮುಖದ ಅಂಗಡಿ ಮರೆಯಲಾಗದು :
ಸುರೇಶ ಅಂಗಡಿ ಅವರನ್ನು ನೆನಪಿಸಿಕೊಂಡ ಅಮಿತ್ ಶಾ, ಸದಾ ನಗುಮುಖ ಹೊಂದಿದ್ದ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕ್ರಿಯಾಶೀಲರಾಗಿದ್ದ ಅವರು ಮುಂದೆ ದಿಗ್ಗಜ ನಾಯಕರಾಗುವ ಎಲ್ಲ ಅವಕಾಶ ಹೊಂದಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು ಎಂದು ಭಾವುಕರಾದರು.
ಕರ್ನಾಟಕದಲ್ಲಿ ಬಿಜೆಪಿ :
ಮತ್ತಷ್ಟು ಗಟ್ಟಿಯಾಗಿದೆ. ಮುಂಬರುವ ತಾ.ಪಂ., ಜಿ.ಪಂ.ಚುನಾವಣೆ ಯಲ್ಲೂ ಬಿಜೆಪಿ ಶೇ. 75ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ 150 ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ. – ಅಮಿತ್ ಶಾ, ಕೇಂದ್ರ ಗೃಹ ಸಚಿವ
ಹಣಬಲ, ತೋಳ್ಬಲದಿಂದ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್ ಕನಸು ಕಾಣುತ್ತಿತ್ತು. ಆದರೆ ಇದೆಲ್ಲವನ್ನೂ ಮೆಟ್ಟಿನಿಂತು ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತಿದೆ. -ಬಿ.ಎಸ್. ಯ ಡಿಯೂರಪ್ಪ, ಮುಖ್ಯಮಂತ್ರಿ