Advertisement

ತಂಬಾಕು ಜಾಹೀರಾತಿಂದ ಬಿಗ್‌ ಬಿ ಹೊರಕ್ಕೆ

07:08 PM Oct 11, 2021 | Team Udayavani |

ಮುಂಬಯಿ: ಎಂಭತ್ತನೇ ಹುಟ್ಟಿದ ಹಬ್ಬ ಆಚರಿಸಿಕೊಂಡ ಬಾಲಿವುಡ್‌ ಮೆಗಾಸ್ಟಾರ್‌ ಪಾನ್‌ಮಸಾಲಾ ಕಂಪನಿಯ ಜಾಹೀರಾತಿನಿಂದ ಹೊರ ಬಂದಿದ್ದಾರೆ.

Advertisement

ಅದಕ್ಕಾಗಿ ಪಡೆದುಕೊಂಡಿದ್ದ ಮೊತ್ತವನ್ನೂ ಕಂಪನಿಗೆ ವಾಪಸ್‌ ಮಾಡಿರುವುದಾಗಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ತಂಬಾಕು ವಿರೋಧಿ ಚಳುವಳಿ ಬೆಂಬಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ, 80ನೇ ಹುಟ್ಟಿದ ಹಬ್ಬಕ್ಕೆ ಕಾಲಿಟ್ಟ ತಮಗೆ ಶುಭ ಹಾರೈಸಿದ ಅಭಿಮಾನಿಗಳಿಗೆ ಜಾಲತಾಣಗಳ ಮೂಲಕ ಅಮಿತಾಭ್‌ ಬಚ್ಚನ್‌ ಕೃತಜ್ಞತೆ ಸಲ್ಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next