ಮುಂಬಯಿ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಅಭಿಮಾನಿಗಳೊಂದಿಗೆ ಬಿಗ್ ಬಿ ಸದಾ ಆತ್ಮೀಯವಾಗಿ ಕ್ಷಣವನ್ನು ಕಳೆಯುತ್ತಾರೆ. ಆಗಾಗ ತಮ್ಮ ನಿವಾಸದ ಮುಂದೆ ಅಭಿಮಾನಿಗಳನ್ನು ಮೀಟ್ ಮಾಡುತ್ತಾರೆ.
ಅಮಿತಾಭ್ ಅವರ ಸರಳತೆಗೆ ಇತ್ತೀಚೆಗೆ ನಡೆದ ಘಟನೆಯೊಂದು ಉದಾಹರಣೆಯಾಗಿದೆ. ಅದನ್ನು ಸ್ವತಃ ಅಮಿತಾಭ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಅಭಿಮಾನಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಅಮಿತಾಭ್ ಅವರು ಶೂಟಿಂಗ್ ವೊಂದಕ್ಕೆ ತೆರಳುತ್ತಿದ್ದ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ. ಸರಿಯಾದ ಸಮಯಕ್ಕೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಬೇಕಿತ್ತು. ಇದೇ ಘಳಿಗೆಯಲ್ಲಿ ಫ್ಯಾನ್ ವೊಬ್ಬರು ಬೈಕ್ ನಲ್ಲಿ ಅಮಿತಾಭ್ ಅವರನ್ನು ಕೂರಿಸಿಕೊಂಡು ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ತಲುಪಿಸಿದ್ದಾರೆ.
ಅಭಿಮಾನಿಯ ಬೈಕ್ ಹಿಂಬದಿಯಲ್ಲಿ ಕೂತು ಅಮಿತಾಭ್ ಸವಾರಿ ಮಾಡಿದ್ದಾರೆ. ಅಭಿಮಾನಿಯ ಈ ಸೇವೆಯನ್ನು ಅಮಿತಾಭ್ ಮರೆಯದೇ ಅವರ ಸೇವಾ ಋಣಕ್ಕೆ ಪೋಸ್ಟ್ ವೊಂದನ್ನು ಹಾಕಿ ಬಿಗ್ ಬಿ ಥ್ಯಾಂಕ್ಯೂ ಹೇಳಿದ್ದಾರೆ.
Related Articles
“ಸವಾರಿಗಾಗಿ ಧನ್ಯವಾದಗಳು ಗೆಳಯ ನೀವು ನನಗೆ ಯಾರೆಂದು ಗೊತ್ತಿಲ್ಲ. ಆದರೆ ನೀವು ನನ್ನನ್ನು ಕೆಲಸದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಕರೆದೊಯ್ದಿದ್ದೀರಿ ಥ್ಯಾಂಕ್ಯೂ” ಬರೆದಿದ್ದಾರೆ.
ಸದ್ಯ ಅಭಿಮಾನಿಯೊಂದಿಗೆ ಬೈಕ್ ಸವಾರಿ ಮಾಡಿದ ಅಮಿತಾಭ್ ಅವರ ಫೋಟೋ ವೈರಲ್ ಆಗಿದ್ದು, ಬಿಗ್ ಬಿಯ ಸರಳತೆಯನ್ನು ಜನ ಮೆಚ್ಚಿಕೊಂಡಿದ್ದಾರೆ.
ಅಮಿತಾಭ್ ಬಿಗ್ ಬಜೆಟ್ ʼಪ್ರಾಜೆಕ್ಟ್ ಕೆʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.