Advertisement

ಅಂಗನಾಮಣಿ ಕಂಗನಾ

02:49 PM Nov 29, 2019 | Team Udayavani |

ಸಾಮಾನ್ಯವಾಗಿ ಯಾವುದೇ ಚಿತ್ರರಂಗವಿರಲಿ, ಅಲ್ಲಿನ ಸೂಪರ್‌ ಸ್ಟಾರ್‌ ನಟರು ಅಲ್ಲಿನ ಕಿರಿಯ ಕಲಾವಿದರ ಬಗ್ಗೆ ಏನು ಅಂತಾರೆ ಅನ್ನೋ ಕುತೂಹಲವಿದ್ದೇ ಇರುತ್ತದೆ. ಅದರಲ್ಲೂ ಚಿತ್ರರಂಗದ ದಿಗ್ಗಜರಿಂದ ಹೊಗಳಿಸಿಕೊಳ್ಳಲು ತಾರೆಯರು ಕಾದುಕುಳಿತಿರುತ್ತಾರೆ. ಅದರಲ್ಲೂ ಬಾಲಿವುಡ್‌ನ‌ಲ್ಲಂತೂ, ಅಲ್ಲಿನ ದಿಗ್ಗಜರಿಂದ ಹೊಗಳಿಸಿಕೊಳ್ಳುವುದು ಅಂದ್ರೆ, ಯಾವ ಪ್ರಶಸ್ತಿ-ಸನ್ಮಾನಗಳಿಗೂ ಕಡಿಮೆಯಿಲ್ಲ ಅಂತಲೇ ಇತರೆ ತಾರೆಯರು ಭಾವಿಸುತ್ತಾರೆ. ಈಗ ಬಾಲಿವುಡ್‌ ಬಿಗ್‌ಬಿ ಅವಿತಾಭ್‌ ಬಚ್ಚನ್‌ ಅವರೇ ನಟಿಯೊಬ್ಬರಿಗೆ ನಂಬರ್‌ ವನ್‌ ಪಟ್ಟವನ್ನು ಕೊಟ್ಟಿದ್ದಾರೆ! ಅಂದ ಹಾಗೆ, ಆ ನಟಿ ಬೇರ್ಯಾರೂ ಅಲ್ಲ, ಕಂಗನಾ ರಾಣಾವತ್‌.

Advertisement

ಬಾಲಿವುಡ್‌ ಮೇರು ನಟ ಬಿಗ್‌ಬಿ ಅಮಿತಾಭ್‌ ಬಚ್ಚನ್‌ ಸದ್ಯ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಳಿವಯಸ್ಸಿನಲ್ಲಿಯೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಅಮಿತಾಭ್‌, ಯುವ ಪ್ರತಿಭೆಗಳ ಶ್ರಮಕ್ಕೆ ಸದಾ ಬೆನ್ನುತಟ್ಟುತ್ತಿರುತ್ತಾರೆ. ಯುವ ಕಲಾವಿದರಿಗೆ ಸಾಥ್‌ ನೀಡುವ ಅಮಿತಾಭ್‌ ಇತ್ತೀಚಿಗೆ ಬಾಲಿವುಡ್‌ನ‌ ಟಾಪ್‌ ನಟಿ ಯಾರು ಎನ್ನುವುದನ್ನು ರಿವೀಲ್‌ ಮಾಡಿದ್ದಾರೆ. ಅಮಿತಾಭ್‌ ಪ್ರಕಾರ ಕಂಗನಾ ರಣಾವತ್‌ ಬಾಲಿವುಡ್‌ನ‌ ಟಾಪ್‌ ಅಂಡ್‌ ಬ್ಯೂಟಿಫ‌ುಲ್‌ ನಟಿಯಂತೆ. ಇತ್ತೀಚಿಗೆ ಕೌನ್‌ ಬನೇಗ ಕರೋಡ್‌ ಪತಿ ಕಾರ್ಯಕ್ರಮದಲ್ಲಿ ಬಿಗ್‌ಬಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಹಾಟ್‌ ಸೀಟಿನಲ್ಲಿ ಕೂಳಿತಿದ್ದ ಸ್ಪರ್ಧಿಗೆ ಬಾಲಿವುಟ್‌ ನಟಿಯ ಧ್ವನಿಯನ್ನು ಕೇಳಿಸಲಾಗಿತ್ತು. ಈ ಧ್ವನಿ ಯಾವ ನಟಿಯದ್ದು ಎಂದು ಹೇಳಬೇಕಿತ್ತು. ನಾಲ್ಕು ಆಯ್ಕೆಗಳಲ್ಲಿ ಅಮಿಷಾ ಪಟೇಲ್, ಕಂಗನಾ ರಣಾವತ್‌, ಪ್ರೀತಿ ಜಿಂಟಾ ಮತ್ತು ಕೃತಿ ಸನೂನ್‌ ಹೆಸರುಗಳು ಇತ್ತು.

ಈ ಸಮಯದಲ್ಲಿ ಅಮಿತಾಭ್‌ ಕಂಗನಾ ಅಭಿನಯವನ್ನು ಹಾಡಿಹೊಗಳಿದ್ದಾರೆ. ಕಂಗನಾ ತುಂಬ ಸುಂದರವಾದ ಮತ್ತು ನಂಬರ್‌ ವನ್‌ ನಟಿ. ರಾಷ್ಟ್ರ ಪ್ರಶಸ್ತಿಗಳು ಮತ್ತು ಅನೇಕ ಫಿಲಂ ಫೇರ್‌ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಪ್ರತಿಯೊಬ್ಬ ನಟಿಯರು ವಿಶಿಷ್ಟ ರೀತಿಯ ವಿಶೇಷತೆ ಹೊಂದಿದ್ದಾರೆ ಎಂದು ಬಾಲಿವುಡ್‌ ನಟಿಮಣಿಯರನ್ನು ಕೊಂಡಾಡಿದ್ದಾರೆ.

ಇನ್ನು ಅಮಿತಾಭ್‌ ಹೇಳಿರುವ ಮಾತು ಕೇಳಿ ಕಂಗನಾ ಫ‌ುಲ್‌ ಖುಷಿಯಾಗಿದ್ದಾರೆ. ಬಾಲಿವುಡ್‌ ಅನೇಕರು ತಮ್ಮ ಕಾಲೆಳೆಯುತ್ತಿದ್ದರೂ, ಅಮಿತಾಭ್‌ ತಮ್ಮನ್ನು ನಂಬರ್‌ ವನ್‌ ನಟಿ ಎಂದು ಕರೆದಿರುವುದು ಅವರ ಹೃದಯವಂತಿಕೆಗೆ ಸಾಕ್ಷಿ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next