Advertisement

ವಲಸಿಗರಿಗೆ ನೆರವಾದ ಅಮಿತಾಬ್ ಬಚ್ಚನ್:ಮುಂಬೈನಿಂದ ಉತ್ತರಪ್ರದೇಶಕ್ಕೆ 4ವಿಶೇಷ ವಿಮಾನ ವ್ಯವಸ್ಥೆ

12:29 PM Jun 11, 2020 | Team Udayavani |

ಮುಂಬೈ: ಮುಂಬೈಯಿಂದ ಸುಮಾರು 700 ವಲಸಿಗರನ್ನು ಉತ್ತರ ಪ್ರದೇಶದ ಅವರ  ಮನೆಗಳಿಗೆ ಕಳುಹಿಸಲು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬುಧವಾರ ನಾಲ್ಕು ವಿಶೇಷ ವಿಮಾನಗಳ  ವ್ಯವಸ್ಥೆ ಮಾಡಿದ್ದಾರೆ.

Advertisement

ಈ 4 ವಿಮಾನಗಳ ಜೊತೆ ಮತ್ತೆ 2 ವಿಮಾನಗಳು ಗುರುವಾರ ಹೊರಡಲಿವೆ  ಎಂದು ಬಚ್ಚನ್ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಮೊದಲು  ವಲಸೆ ಕಾರ್ಮಿಕರನ್ನು  ರೈಲು ಮೂಲಕ ಅವರವರ ಊರಿಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಅದರೇ ಅನಿವಾರ್ಯ ಕಾರಣಕ್ಕೆ ಕಾರ್ಯರೂಪಕ್ಕೆ ಬಂದಿರಲಿಲ್ಲ.

ಅಮಿತಾಬ್  ಬಚ್ಚನ್ ಅವರ ನಿರ್ದೇಶನದ ಮೇರೆಗೆ ಅವರ ನಿಕಟ ಸಹಾಯಕ ರಾಜೇಶ್ ಯಾದವ್ ಅವರು ಈ ವಿಮಾನಗಳನ್ನು ಆಯೋಜಿಸಿದ್ದಾರೆ. ಮುಂಬೈಯಿಂದ ಬುಧವಾರ ಬೆಳಿಗ್ಗೆ ಯುಪಿ ಯ ಅಲಹಾಬಾದ್, ಗೋರಖ್‌ಪುರ ಮತ್ತು ವಾರಣಾಸಿಗೆ ವಿಮಾನಗಳು ತಲಾ 180 ಪ್ರಯಾಣಿಕರೊಂದಿಗೆ ಹೊರಟವು ಎಂದು ಮಾಧ್ಯಮಗಳು ವರದಿ ಮಾಡಿದೆ.

ಯಾದವ್ ಅವರು ಇತ್ತೀಚಿಗಷ್ಟೆ ಅಮಿತಾಬ್ ಅವರ ಸಲಹೆ ಮೇರೆಗೆ, 300 ವಲಸಿಗರಿಗೆ ಲಕ್ನೋ, ಅಲಹಾಬಾದ್, ಭಾದೋಹಿ ಮತ್ತು ಉತ್ತರ ಪ್ರದೇಶದ ಇತರ ಸ್ಥಳಗಳಲ್ಲಿ ತಮ್ಮ ಗ್ರಾಮಗಳನ್ನು ತಲುಪಲು 10 ಬಸ್ಸುಗಳ ವ್ಯವಸ್ಥೆ ಮಾಡಿದ್ದರು.

‘ನಾನು ಇದಕ್ಕೂ ಮೊದಲು ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ, ಆದರೆ ಬಚ್ಚನ್ ಅವರು ನನಗೆ ಅದನ್ನು ಸಾಧ್ಯವಾಗಿಸಿದರು. ಅದೂ ಸಹ ನಾನು ಮುಂಬೈಯಲ್ಲಿ ಸಿಲುಕಿಕೊಂಡಿದ್ದ ಸಮಯದಲ್ಲಿ. ನಾನು ಎಂಟು ತಿಂಗಳ ನಂತರ ಮನೆಗೆ ಮರಳುತ್ತಿದ್ದೇನೆ” ಎಂದು ಟೈಲರಿಂಗ್ ಕೆಲಸ  ಮಾಡುತ್ತಿದ್ದ ಹಸನ್  ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next