Advertisement
ಶಾ ಅವರ ಸ್ವಾಗತಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಆಗಮನ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸ್ವಾಗತ ಫ್ಲೆಕ್ಸ್ , ಪಕ್ಷದ ಧ್ವಜ ಹಾಗೂ ಬಂಟಿಂಗ್ಸ್ ಅಳ ವಡಿಸ ಲಾಗಿದೆ. ನವಶಕ್ತಿ ಸಮಾವೇಶ ನಡೆ ಯುವ ಕುಲ್ಕುಂದದಲ್ಲಿ 5,000 ಮಂದಿಗೆ ಅನುಕೂಲವಾಗುವಂತೆ ಬೃಹತ್ ವೇದಿಕೆ ಹಾಗೂ ಪೆಂಡಾಲ್ ನಿರ್ಮಿಸಲಾಗಿದೆ.
ಸುಬ್ರಹ್ಮಣ್ಯದ ಸಮಾವೇಶದಲ್ಲಿ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಹಾಗೂ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತಕುಮಾರ್ ಭಾಗವಹಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಇವರು ಆಗಮಿಸುವ ಸಾಧ್ಯತೆ ಕಡಿಮೆ. ಪುತ್ತೂರು ಅಥವಾ ಬಂಟ್ವಾಳ ಕಾರ್ಯಕ್ರಮದಲ್ಲಿ ಇವರೆಲ್ಲರೂ ಭಾಗವಹಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಮಿತ್ ಶಾ 9.45ಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಪ್ರಯಾಣ ಮುಂದುವರಿಸುವರು. ಸಮಾವೇಶದ ಇತರ ಕಾರ್ಯಕ್ರಮಗಳು ಮಧ್ಯಾಹ್ನ 12ರ ತನಕ ಮುಂದುವರಿಯಲಿವೆ. ಹೆಸರಿಗಷ್ಟೆ ವಿವಿಐಪಿ: ಸೌಕರ್ಯಗಳಿಲ್ಲ
ಅಮಿತ್ ಶಾ ತಂಗುವ ವಸತಿಗೃಹ ವಿವಿಐಪಿ ಆಗಿದ್ದರೂ ಗಣ್ಯಾತಿಗಣ್ಯರು ಉಳಿದುಕೊಳ್ಳಲು ಬೇಕಿರುವ ಎಲ್ಲ ವ್ಯವಸ್ಥೆಗಳು ಈ ವಸತಿಗೃಹದ ಕೊಠಡಿಗಳಲ್ಲಿ ಇಲ್ಲ. ವಸತಿಗೃಹಕ್ಕೆ ಇದುವರೆಗೆ ಸಿಸಿ ಕೆಮರಾ ಅಳವಡಿಸಿಲ್ಲ, ಲಿಫ್ಟ್ ವ್ಯವಸ್ಥೆ ಇಲ್ಲ. ವಸತಿಗೃಹಕ್ಕೆ ಮೀಸಲು ಜನರೇಟರ್ ಇಲ್ಲ. ವಸತಿಗೃಹದ ಸುತ್ತಲೂ ಬೆಳಕಿನ ವ್ಯವಸ್ಥೆ ಇಲ್ಲ. ಹೀಗಾಗಿ ರವಿವಾರ ತರಾತುರಿಯಲ್ಲಿ ಇತರೆಡೆಗಳಿಂದ 10 ಸಿಸಿ ಕೆಮರಾ ತರಿಸಿ ಅಳ ವಡಿಸ ಲಾಗಿದೆ. ಬೆಳಕಿಗಾಗಿ ವಸತಿಗೃಹದ ಸುತ್ತಲೂ ಹ್ಯಾಲೋಜಿನ್ ಬಲುºಗಳನ್ನು ಕಾರ್ಮಿಕರು ಅಳವಡಿಸುತ್ತಿದ್ದುದು ಕಂಡು ಬಂದಿದೆ. ವಸತಿಗೃಹವನ್ನು ತೊಳೆದು ಸ್ವತ್ಛ ಗೊಳಿಸುವ ಕೆಲಸ ಕೂಡ ರವಿವಾರ ನಡೆದಿದೆ.
Related Articles
ಅಮಿತ್ ಶಾ ಕುಕ್ಕೆ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದತ್ರೆ ಏರ್ಪಡಿಸಲಾಗಿದೆ. ಪಕ್ಷದ ನಾಯಕ ರಿಗೆ ವಿನಾ ಇನ್ಯಾರಿಗೂ ಕೊಠಡಿ ನೀಡಿಲ್ಲ. ಶಾ ಅವರು ತಂಗುವ ಕೊಠಡಿಗೆ ಇಂಟರ್‌ನೆಟ್, ದೂರವಾಣಿ, ಟಿ.ವಿ., ಪ್ರಿಂಟರ್, ಫ್ರಿಜ್ ಸಹಿತ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದೆ. ವಿಶೇಷ ಭದ್ರತಾ ಪಡೆಯ 12 ಮಂದಿ ಯೋಧರು ಆಗಮಿಸಿದ್ದು, ಭದ್ರತೆ ದೃಷ್ಟಿಯಿಂದ ಶಾ ತಂಗುವ ಕೊಠಡಿ ಹಾಗೂ ನವಶಕ್ತಿ ಸಮಾವೇಶ ನಡೆಯುವ ಸ್ಥಳದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತು ಪರಿಶೀಲನೆ ನಡೆಸಿ ದ್ದಾರೆ. ಎಎನ್‌ಎಫ್ ಪಡೆಯ ನಾಲ್ಕು ತಂಡಗಳು ಸುಬ್ರಹ್ಮಣ್ಯ ಮತ್ತು ಸುತ್ತ ಮುತ್ತ ಶೋಧ ಕಾರ್ಯಾಚರಣೆ ನಡೆಸಿ ಕಟ್ಟೆಚ್ಚರ ವಹಿಸಿವೆ. ಶಾ ಆಗಮಿ ಸುವ ಉಪ್ಪಿನಂಗಡಿ-ಸುಬ್ರಹ್ಮಣ್ಯ ಮಾರ್ಗ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ ರನ್ನು ನಿಯೋಜಿಸಲು ಸಿದ್ಧತೆ ಗಳು ನಡೆಯುತ್ತಿದ್ದು, ಹೆಚ್ಚುವರಿ ಸಿಬಂದಿ ಯನ್ನು ಕರೆಸಿ ಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪುತ್ತೂರು ಡಿವೈಎಸ್‌ಪಿ ಶ್ರೀನಿವಾಸ್ ಮತ್ತು ವೃತ್ತನಿರೀಕ್ಷಕ ಸತೀಶ್ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
Advertisement