ಅಮಿತ್ ಶಾ ಅವರು ಶನಿವಾರ ರಾತ್ರಿ ರಾಜ್ಯದ ರಾಜಧಾನಿ ರಾಂಚಿಗೆ ಆಗಮಿಸಿದ್ದು ಭಾನುವಾರ ಬೆಳಿಗ್ಗೆ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಈ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಸಂಜಯ್ ಸೇಠ್ ಮತ್ತು ಬಿಜೆಪಿ ಜಾರ್ಖಂಡ್ ಅಧ್ಯಕ್ಷ ಬಾಬುಲಾಲ್ ಮರಾಂಡಿ ಉಪಸ್ಥಿತರಿದ್ದರು.
Advertisement
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸರಕಾರದ ವಿರುದ್ಧ ಅಸ್ತ್ರ ಎಸೆದಿದ್ದು ಮತದಾರರಲ್ಲಿ ಆಯ್ಕೆಯನ್ನು ನೀಡಿದ್ದಾರೆ, ಅದರಂತೆ ಮತದಾರರಿಗೆ ಭ್ರಷ್ಟಾಚಾರ ತುಂಬಿರುವ ಸರಕಾರ ಬೇಕೇ ಅಥವಾ ರಾಜ್ಯವನ್ನು ಉತ್ತಮ ಅಭಿವೃದ್ಧಿಯತ್ತ ಕೊಂಡೊಯ್ಯುವ ಸರಕಾರ ಬೇಕೇ ಅಲ್ಲದೆ ಗಡಿಭಾಗದಲ್ಲಿ ಒಳನುಸುಳುವಿಕೆಗೆ ಅವಕಾಶ ನೀಡುವ ಮೂಲಕ ಭೂಮಿ ಮತ್ತು ಗ್ರಾಮದ ಮಹಿಳೆಯರಿಗೆ ರಕ್ಷಣೆ ನೀಡದ ಸರಕಾರ ಬೇಕೇ ಅಥವಾ ಗಡಿ ಸೇರಿದಂತೆ ದೇಶದ ಮಹಿಳೆಯರ ರಕ್ಷಣೆಗೆ ಮುಂದಾಗುವ ಬಿಜೆಪಿ ಸರಕಾರ ಬೇಕೇ ಎಂದು ಪ್ರಶ್ನೆ ಮಾಡಿದ್ದು ಆಯ್ಕೆ ನಿಮ್ಮದು ನಮ್ಮ ಪಕ್ಷ ಇತರ ಎಲ್ಲ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದು ಹೇಳಿದರು.
Related Articles
Advertisement
ಪ್ರತಿ ವರ್ಷ 1 ಲಕ್ಷ ಜಾರ್ಖಂಡಿನ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವ ಅವಧಿಗೆ ಮಾಸಿಕ 2,000 ‘ಯುವ ಸತಿ’ ಭತ್ಯೆ ನೀಡುವ ಭರವಸೆ ನೀಡಿದ್ದಾರೆ.
ಜೆಎಂಎಂ ಸರ್ಕಾರದಲ್ಲಿ ಪ್ರಚಲಿತದಲ್ಲಿರುವ ದುರಾಡಳಿತವನ್ನು ಕೊನೆಗೊಳಿಸುವುದು ಮತ್ತು ಎಲ್ಲರಿಗೂ ವಸತಿ ಖಾತ್ರಿಪಡಿಸುವುದು. ಜಾರ್ಖಂಡ್‌ನ ಪ್ರತಿಯೊಬ್ಬ ನಾಗರಿಕರಿಗೂ ಮನೆ ನಿರ್ಮಿಸಲು ಉಚಿತ ಮರಳನ್ನು ನೀಡಲಾಗುವುದು. ಅದರಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 21 ಲಕ್ಷ ಮನೆಗಳನ್ನೂ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದ್ದಾರೆ, ಇದಲ್ಲದೆ 2027 ರ ವೇಳೆಗೆ ಜಲ ಜೀವನ್ ಮಿಷನ್‌ನ ಸಂಪೂರ್ಣ ಅನುಷ್ಠಾನದ ಮೂಲಕ 59 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವನ್ನು ಒದಗಿಸಲಾಗುವುದು ಎಂದು ಹೇಳಿದರು.
ಜಾರ್ಖಂಡ್‌ನಲ್ಲಿ ಅಕ್ರಮ ಬಾಂಗ್ಲಾದೇಶದ ಒಳನುಸುಳುವಿಕೆಯನ್ನು ನಿಲ್ಲಿಸಲು ಮತ್ತು ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು, ಸಂತಾಲ್ ಪರಗಣ ಸೇರಿದಂತೆ ಇಡೀ ಜಾರ್ಖಂಡ್‌ನಲ್ಲಿ ಕಟ್ಟುನಿಟ್ಟಾದ ಕಾನೂನು ಪ್ರಕ್ರಿಯೆಯನ್ನು ಜಾರಿಗೊಳಿಸುವ ಮೂಲಕ ನಾವು ಅಕ್ರಮ ಒಳನುಸುಳುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುತ್ತೇವೆ ಎಂದು ಹೇಳಿದರು.
ಅಲ್ಲದೆ ನುಸುಳುಕೋರರು ಆಕ್ರಮಿಸಿಕೊಂಡಿರುವ ಬುಡಕಟ್ಟು ಜನಾಂಗದ ಭೂಮಿಯನ್ನು ಹಿಂದಿರುಗಿಸಲು ಕಾನೂನು ನಿರ್ಮಿಸಲಾಗುತ್ತದೆ. ಜೊತೆಗೆ ಬುಡಕಟ್ಟು ಮಹಿಳೆಯರನ್ನು ಮದುವೆಯಾಗುವ ನುಸುಳುಕೋರರ ಮಕ್ಕಳಿಗೆ ಬುಡಕಟ್ಟು ಸ್ಥಾನಮಾನ ನೀಡುವುದನ್ನು ನಿಷೇಧಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Director Guruprasad: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಗುರುಪ್ರಸಾದ್ ಆ*ತ್ಮಹತ್ಯೆ