Advertisement
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದು ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಅಮಿತ್ ಶಾ ಗುಜರಾತ್‌ನ ಗೃಹ ಸಚಿವರಾಗಿದ್ದಾಗ ಹರೇನ್ ಪಾಂಡ್ಯ ಹತ್ಯೆಯಾಗಿತ್ತು. ಕಳೆದ ಒಂದು ವರ್ಷದಲ್ಲಿ ಉತ್ತರ ಪ್ರದೇಶದಲ್ಲಿ 900 ನಕಲಿ ಎನ್‌ಕೌಂಟರ್‌ಗಳಾಗಿವೆ. ಗುರುದಾಸ್‌ಪುರದಲ್ಲಿ ಪಾಕಿಸ್ಥಾನಿ ಉಗ್ರರು ಎಸ್ಪಿ ಮೇಲೆ ದಾಳಿ ಮಾಡಿದರು. ಬಿಜೆಪಿಯವರು ಸರ್ಜಿಕಲ್ ಸ್ಟೈಕ್ ಹೆಸರಿನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆಂದು ಅವರು ತಿಳಿಸಿದರು.
ಪಾರ್ಟಿಗಳು, ಚುಂಬನ ದೃಶ್ಯಗಳು, ಚೆಕ್ ಮೂಲಕ
ಲಂಚ ತೆಗೆದುಕೊಂಡಿರುವ ದಾಖಲೆಗಳನ್ನು ನೋಡಿ ದ್ದೇವೆ. ಬಿಜೆಪಿಯನ್ನು ಗೋಡ್ಸೆ ಸಂತತಿಯವರು ಆಳುತ್ತಿದ್ದಾರೆ. ಅವರಿಂದ ದೇಶಭಕ್ತಿಯ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು. ಕರ್ನಾ ಟಕದಲ್ಲಿ ಹಿಂದುತ್ವ ಇಟ್ಟುಕೊಂಡು ರಾಜಕೀಯ ಮಾಡಲು ಸಾಧ್ಯವಿಲ್ಲ.
Related Articles
Advertisement
ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭ್ರಷ್ಟಾಚಾರದ ಹಿನ್ನೆಲೆಯಲ್ಲಿಯೇ ಅವರ ಪಕ್ಷದವರೇ ಅವರನ್ನು ಜೈಲಿಗೆ ಕಳುಹಿಸಿದ್ದರು. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ತಮ್ಮ ಚರಿತ್ರೆಯನ್ನೂ ನೋಡಿಕೊಳ್ಳಬೇಕು ಎಂದು ಹೇಳಿದರು. ರಾಜ್ಯ ಸರಕಾರದ ಮೇಲೆ ಕಮಿಷನ್ ಬಗ್ಗೆ ಆರೋಪ ಮಾಡುವ ಪ್ರಧಾನಿ ಕೇಂದ್ರ ಸರಕಾರದ ಅಧೀನದಲ್ಲಿಯೇ ತನಿಖಾ ಸಂಸ್ಥೆಗಳಿವೆ. ಆ ಸಂಸ್ಥೆಗಳಿಂದಲೇ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಲೋಕಾಯುಕ್ತರ ಮೇಲೆ ಹಲ್ಲೆ: ರಾಜಸ್ಥಾನಿ ಮನಃಸ್ಥಿತಿಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ವ್ಯಕ್ತಿ ರಾಜಸ್ಥಾನ ಮೂಲದವರಾಗಿದ್ದು, ಅದು ರಾಜಸ್ಥಾನದ ಬಿಜೆಪಿಯ ಮನಃಸ್ಥಿತಿ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಯವರು ಅಪರಾಧಿ ಮನೋಭಾವನೆಯನ್ನು ಬಿತ್ತುತ್ತಿದ್ದಾರೆ. ಅದರ ಪರಿಣಾಮವೇ ಆ ವ್ಯಕ್ತಿ ಲೋಕಾಯುಕ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.