Advertisement

ಇಂದಿನಿಂದ ಶಾ ಕೇರಳ ಯಾತ್ರೆ

06:45 AM Oct 03, 2017 | |

ಹೊಸದಿಲ್ಲಿ, ಅಹಮದಾಬಾದ್‌: ಕೇರಳದಲ್ಲಿ ತನ್ನ ಸ್ಥಾನ ಭದ್ರಪಡಿಸಲೋಸುಗ ಬಿಜೆಪಿ ಮಂಗಳವಾರದಿಂದ 15 ದಿನಗಳ ಯಾತ್ರೆ ಆಯೋಜಿಸಿದೆ. ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರು ಈ ಯಾತ್ರೆ ಕೈಗೊಳ್ಳಲಿದ್ದು, ಪಯ್ಯನ್ನೂರಿ ನಿಂದ ಆರಂಭವಾಗಿ 17ರಂದು ಸಮಾಪ್ತಿಯಾಗಲಿದೆ. ಇದಕ್ಕಾಗಿ ಶಾ ಅವರು ಸೋಮವಾರ ರಾತ್ರಿಯೇ ಮಂಗಳೂರಿಗೆ ಆಗಮಿಸಿದ್ದಾರೆ. ಕೇಂದ್ರ ಸಚಿವರಾದ ಅನಂತಕುಮಾರ್‌, ಸ್ಮತಿ ಇರಾನಿ, ಜ.ವಿ.ಕೆ.ಸಿಂಗ್‌, ಧರ್ಮೇಂದ್ರ ಪ್ರಧಾನ್‌, ಪ್ರಕಾಶ್‌ ಜಾವಡೇಕರ್‌ ಸೇರಿದಂತೆ ಪ್ರಮುಖ ಸಚಿವರ ತಂಡವೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

Advertisement

ಇಟಲಿ ಕನ್ನಡಕ ತೆಗೆಯಲಿ: ಗುಜರಾತ್‌ನಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ತಿಳಿಯಲು ರಾಹುಲ್‌ ಗಾಂಧಿ ಅವರು ಇಟಲಿ ಕನ್ನಡಕ ತೆಗೆದು ಗುಜರಾತ್‌ ಕನ್ನಡಕ ಹಾಕಿಕೊಳ್ಳಲಿ ಎಂದು ಅಮಿತ್‌ ಶಾ ಲೇವಡಿ ಮಾಡಿದ್ದಾರೆ. ಎರಡನೇ ಹಂತದ ಗುಜರಾತ್‌ ಗೌರವ ಯಾತ್ರೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಅಮೇಠಿ ಆಡಳಿತ ಯೂಟರ್ನ್
ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಅಮೇಠಿ ಪ್ರವಾಸ ಮುಂದೂಡುವಂತೆ ಹೇಳಿದ್ದ ಅಲ್ಲಿನ ಜಿಲ್ಲಾಡಳಿತ ಸೋಮವಾರ ಯೂಟರ್ನ್ ಹೊಡೆದಿದೆ. ನಾವು ಅವರು ಭೇಟಿ ನೀಡುವುದು ಬೇಡ ಎಂದು ಹೇಳಿಲ್ಲ ಎಂದಿರುವ ಜಿಲ್ಲಾಧಿಕಾರಿ,”ನಿಗದಿಯಾದಂತೆ ಬುಧವಾರದಿಂದಲೇ ರಾಹುಲ್‌ ಪ್ರವಾಸ ನಡೆಸಲಿ’ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next