Advertisement
ಅಮಿತ್ ಶಾ ಅವರು ಕರಾವಳಿ ಭಾಗಕ್ಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡುವ ಮೂಲಕ ಬಿಜೆಪಿ ವತಿಯಿಂದ ಚುನಾ ವಣಾ ತಾಲೀಮು ಸೋಮವಾರ ಆರಂಭ ವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ರವಿವಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಫೆ. 19ರಂದು ದಿಲ್ಲಿಯಿಂದ ಮಧ್ಯಾಹ್ನ 3 ಗಂಟೆಗೆ ವಿಮಾನದಲ್ಲಿ ಹೊರಡುವ ಅಮಿತ್ ಶಾ ಸಂಜೆ 5.30ಕ್ಕೆ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವರು. ಕೆಂಜಾರು ಪ್ರದೇಶದಲ್ಲಿ ರಸ್ತೆ ಬದಿ ಶಾ ಸ್ವಾಗತಕ್ಕೆ ಜಿಲ್ಲಾ ಬಿಜೆಪಿ ವ್ಯವಸ್ಥೆ ಮಾಡಿದೆ. ಸುಮಾರು 2,000 ಕಾರ್ಯ ಕರ್ತರು ಭಾಗವಹಿಸುವ ನಿರೀಕ್ಷೆ ಇದೆ. 6 ಗಂಟೆಗೆ ಕೆಂಜಾರಿನಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡ ಲಿದ್ದಾರೆ. ಅಲ್ಲಿ ಪ್ರಮುಖರ ಜತೆ ಮಾತುಕತೆ ನಡೆಸಿ ವಾಸ್ತವ್ಯ ಮಾಡುವರು. ಫೆ. 20ರಂದು ಬೆಳಗ್ಗೆ 8.15ರಿಂದ 9 ಗಂಟೆಯವರೆಗೆ ಕ್ಷೇತ್ರ ದಲ್ಲಿ ದೇವರ ದರ್ಶನ ಮಾಡಿ ಸ್ವಾಮೀಜಿ ಜತೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಸಮೀಪದ ಕುಲ್ಕುಂದ ದಲ್ಲಿ ನಡೆಯ ಲಿರುವ ನವಶಕ್ತಿ ಸಮಾವೇಶದಲ್ಲಿ ಭಾಗವಹಿ ಸುವರು. ಬಳಿಕ ಅಲ್ಲಿಂದ ಹೊರಟು ಪುತ್ತೂರು ವಿವೇಕಾನಂದ ಕಾಲೇಜಿಗೆ ತೆರಳಿ ಅಲ್ಲಿ 10.15 ರಿಂದ 11.40ರ ವರೆಗೆ ಯುವ ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ವರು. 12.30ಕ್ಕೆ ಬಂಟ್ವಾಳಕ್ಕೆ ಭೇಟಿ ನೀಡ ಲಿದ್ದು, ಅಲ್ಲಿ ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ಕ್ಷೇತ್ರಗಳ ನವಶಕ್ತಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗ ವಹಿಸುವರು. ಮಧ್ಯಾಹ್ನ 2.15ಕ್ಕೆ ಅಲ್ಲಿಂದ ಹೊರಟು 3 ಗಂಟೆಗೆ ಸುರತ್ಕಲ್‌ಗೆ ತಲುಪಿ ದೀಪಕ್ ರಾವ್ ಮನೆಗೆ ಭೇಟಿ ನೀಡುವರು. ಬಳಿಕ ಸೂರಜ್ ಹೊಟೇಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಿದ್ದಾರೆ. ಸಂಜೆ 4.15ಕ್ಕೆ ಉಡುಪಿಗೆ ತೆರಳಲಿದ್ದು, ಮಲ್ಪೆ ಯಲ್ಲಿ ಆಯೋಜಿ ಸಿರುವ ಮೀನು ಗಾರರ ಸಮಾವೇಶದಲ್ಲಿ ಭಾಗ ವಹಿಸುವರು. ಫೆ. 21ರಂದು ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಶಾ ರಾಜ್ಯ ಪ್ರವಾಸ ಮುಗಿಸಿದ ಬಳಿಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಂಸದ ನಳಿನ್ ಉತ್ತರಿಸಿದರು.
Related Articles
Advertisement
ಉಡುಪಿ ಜಿಲ್ಲೆಗೆ ಪ್ರಥಮ ಭೇಟಿಶಾ ಅವರದ್ದು ಉಡುಪಿ ಜಿಲ್ಲೆಗೆ ಪ್ರಥಮ ಭೇಟಿಯಾಗಿದೆ. ಇದಕ್ಕೆ ಬಿಜೆಪಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್ ಶೆಟ್ಟಿ ಮತ್ತು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಜಿಲ್ಲೆಯ ಗಡಿಭಾಗ ಹೆಜಮಾಡಿಯಲ್ಲಿ ಬಿಜೆಪಿ ವತಿಯಿಂದ ಶಾ ಅವರನ್ನು ಸ್ವಾಗತಿಸ ಲಾಗುವುದು. ಯುವಮೋರ್ಚಾ ಕಾರ್ಯ ಕರ್ತರು ಬೈಕ್ ರ್ಯಾಲಿ ನಡೆಸ ಲಿದ್ದಾರೆ. ಮಲ್ಪೆಯ ಸಮಾವೇಶದಲ್ಲಿ 50,000 ಜನರು ಸೇರುವ ನಿರೀಕ್ಷೆ ಯಿದೆ. ಅನಂತರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಶ್ರೀಪಾದರು, ಪೇಜಾವರ ಶ್ರೀಗಳನ್ನು ಅಮಿತ್ ಶಾ ಭೇಟಿ ಮಾಡಲಿದ್ದಾರೆ ಎಂದರು. ಸಂವಾದ, ಸಭೆ, ವೈಬ್‌ಸೈಟ್ ಅನಾವರಣ
ಫೆ. 21ರ ಬೆಳಗ್ಗೆ 10ಕ್ಕೆ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಪ್ರಮುಖರ ಜತೆ ಸಂವಾದ, ಬಿಜೆಪಿ ವೆಬ್‌ಸೈಟ್‌ಅನಾವರಣ, ಅನಂತರ 5 ಜಿಲ್ಲೆ ಗಳ ನ್ನೊಳ ಗೊಂಡ ಶಿವಮೊಗ್ಗ ಮತ್ತು ಮಂಗಳೂರು ವಿಭಾಗಗಳ ಶಕ್ತಿಕೇಂದ್ರದ ಪ್ರಮುಖರ ಜತೆಸಂಘಟನಾತ್ಮಕ ವಿಚಾರಗಳ ಕುರಿತು ಸಭೆ ನಡೆಯಲಿದೆ. ಶಾ ಅವರೊಂದಿಗೆ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಮತ್ತು ರಾಜ್ಯದ ಮುಖಂಡರು ಇರ ಲಿದ್ದಾರೆ. ಬಳಿಕ ಉ.ಕ. ಜಿಲ್ಲೆಯ ಕುಮಟಾಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಲಿದ್ದಾರೆ ಎಂದರು. ಪಕ್ಷದ ಪ್ರಮುಖ ನಾಯಕರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.