Advertisement
ನ. 22ರ ಮೊದಲ ದಿನದಾಟದ ವೇಳೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ಅಮಿತ್ ಶಾ ಕೂಡ ಸ್ಟೇಡಿಯಂನಲ್ಲಿ ಉಪಸ್ಥಿತರಿರುತ್ತಾರೆ ಎಂದು ಬಂಗಾಲ ಕ್ರಿಕೆಟ್ ಮಂಡಳಿ ತಿಳಿಸಿದೆ.
Related Articles
ಇದು ಭಾರತದಲ್ಲಿ ನಡೆಯಲಿರುವ ಹಾಗೂ ಭಾರತ, ಬಾಂಗ್ಲಾದೇಶ ತಂಡಗಳೆರಡೂ ಆಡಲಿರುವ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯವಾದ್ದರಿಂದ ಇದನ್ನು ಅವಿಸ್ಮರಣೀಯಗೊಳಿಸುವುದು ಬಿಸಿಸಿಐ ಮತ್ತು ಬಂಗಾಲ ಕ್ರಿಕೆಟ್ ಮಂಡಳಿಯ ಉದ್ದೇಶ. ಹೀಗಾಗಿ ಮೊದಲ ದಿನದಾಟದ ಬಿಡುವಿನ ವೇಳೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಯಾದಿ ಹೀಗಿದೆ…
Advertisement
– ಅರೆಸೇನಾಪಡೆಯವರು ಪಿಂಕ್ ಬಾಲ್‌ಗಳೊಂದಿಗೆ ಗ್ಯಾಲರಿ ಇಳಿದು ಬರುವುದರೊಂದಿಗೆ ಈ ಪಂದ್ಯಕ್ಕೆ ಅಧಿಕೃತ ಚಾಲನೆ ನೀಡುವುದು.
– ಈಡನ್ ಸಂಪ್ರದಾಯದಂತೆ ಗಂಟೆ ಹೊಡೆದು ಪಂದ್ಯವನ್ನು ಉದ್ಘಾಟಿಸುವುದು. ಈ ಅವಕಾಶ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಪಾಲಾಗಿದೆ. ಬಳಿಕ ಎರಡೂ ದೇಶಗಳ ರಾಷ್ಟ್ರಗೀತೆ ಹಾಡುವುದು.
– ಭೋಜನ ವಿರಾಮದ ವೇಳೆ ಮಾಜಿ ಕ್ರಿಕೆಟ್ ತಾರೆಗಳಾದ ತೆಂಡುಲ್ಕರ್, ದ್ರಾವಿಡ್, ಕುಂಬ್ಳೆ, ಲಕ್ಷ್ಮಣ್ ಮತ್ತು ಗಂಗೂಲಿ ಜತೆ ಚಾಟ್ ಶೋ.
– ಕ್ರೀಡಾಂಗಣದ ಹೊರವಲಯದಲ್ಲಿ ಎಚ್‌ಐವಿ ಬಾಧಿತ ಮಕ್ಕಳಿಂದ ಕ್ರಿಕೆಟ್ ಪಂದ್ಯ.
– ಸ್ತನ ಕ್ಯಾನ್ಸರ್ ಪೀಡಿತರಿಗೆ ಕ್ರಿಕೆಟಿಗರು ಹೂವಿನ ಗುಚ್ಛ ನೀಡಿ ಜಾಗೃತಿ ಮೂಡಿಸುವುದು.
– ಸಂಜೆ ಅಭಿನವ್ ಬಿಂದ್ರಾ, ಮೇರಿ ಕೋಮ್ ಮೊದಲಾದ ದೇಶದ ಕ್ರೀಡಾ ತಾರೆಗಳಿಗೆ ಸಮ್ಮಾನ.
– ಭಾರತ-ಬಾಂಗ್ಲಾದೇಶ ನಡುವಿನ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡ ಕ್ರಿಕೆಟಿಗರಿಗೆ ಸ್ಮರಣಿಕೆ ನೀಡಿ ಗೌರವಿಸುವುದು.