Advertisement
ಚುನಾವಣಾ ಆಯೋಗ ತನ್ನ ಭದ್ರತಾ ಉಸ್ತುವಾರಿಯನ್ನು ತೆಗೆದು ಹಾಕುವ ಉದ್ದೇಶ ನನ್ನನ್ನು ಕೊಲ್ಲುವ ಹಿಂದಿನ ಪಿತೂರಿಯೇ..? ಎಂದು ಮಮತಾ ಪ್ರಶ್ನೆ ಮಾಡಿದ್ದಾರೆ.
Related Articles
Advertisement
ಜಾರ್ಗ್ರಾಮ್ ಜಿಲ್ಲೆಯಲ್ಲಿ ನಿನ್ನೆ(ಸೋಮವಾರ, ಮಾ.15) ಶಾ ಅವರ ಮತ ಪ್ರಚಾರ ಸಭೆ ರದ್ದುಗೊಳಿಸಲಾಗಿದ್ದು ತಾಂತ್ರಿಕ ಸಮಸ್ಯೆಯಿಂದಲ್ಲ, ಅದು ಕಡಿಮೆ ಜನರ ಸ್ಪಂದನೆಯಿಂದ ರದ್ದುಗೊಂಡಿದ್ದು ಎಂದು ಸಹ ಹೇಳಿದ್ದಾರೆ.
ಇನ್ನು, ಅಮಿತ್ ಶಾ, ದೇಶವನ್ನು ಮುನ್ನೆಡೆಸುವ ಬದಲಾಗಿ ಕೋಲ್ಕತ್ತಾದಲ್ಲಿ ಕುಳಿತು ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರಿಗೆ ಏನು ಬೇಕಾಗಿದೆ..? ನನ್ನನ್ನು ಕೊಲ್ಲಲು ಬಯಸುತ್ತಿದ್ದಾರಾ..? ನನ್ನನ್ನು ಕೊಲ್ಲುವುದರ ಮೂಲಕ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಭಾವಿಸಿದ್ದಾರಾ..? ಎಂದು ಅವರು ಶಾ ವಿರುದ್ಧ ಕಿಡಿ ಕಾರಿದ್ದಾರೆ.
ಚುನಾವಣಾ ಆಯೋಗ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆಯೇ,,? ಚುನಾವಣಾ ಆಯೋಗವನ್ನು ಅಮಿತ್ ಶಾ ನಡೆಸುತ್ತಿದ್ದಾರಾ..? ಚುನಾವಣಾ ಆಯೊಗಕ್ಕೆ ಶಾ ಆದೇಶ ನಿಡುತ್ತಿದ್ದಾರೆ. ಚುನಾವಣಾ ಆಯೋಗದ ಸ್ವಾತಂತ್ರ್ಯಕ್ಕೆ ಏನಾಗಿದೆ..? ಶಾ ಸೂಚನೆಯ ಮೇರೆಗೆ ನನ್ನ ಭದ್ರತಾ ಉಸ್ತುವಾರಿಯನ್ನು ಅಮಾನತುಗೊಳಿಸಲಾಯಿತು ಎಂದು ಮಮತಾ ಕಟುವಾಗಿ ನುಡಿದಿದ್ದಾರೆ.
ಕಳೆದ ವಾರ ನಂದಿಗ್ರಾಮ್ನಲ್ಲಿ ಮುಖ್ಯಮಂತ್ರಿ ಗಾಯಗೊಂಡ ನಂತರ ಮುಖ್ಯಮಂತ್ರಿಯ ಭದ್ರತಾ ಉಸ್ತುವಾರಿ ವಿವೇಕ್ ಸಹಯ್ ಅವರನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ Z ಪ್ಲಸ್ ಭದ್ರತಾ ಪ್ರೋಟೋಕಾಲ್ ಉಲ್ಲಂಘನೆಗೆ ಸಹಯ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಆಯೋಗ ಹೇಳಿತ್ತು.
ಓದಿ : ರಾಜ್ಯದ ಉಪಚುನಾವಣೆಗೆ ದಿನಾಂಕ ಘೋಷಣೆ; ಏಪ್ರಿಲ್ 17ಕ್ಕೆ ಮತದಾನ, ಮೇ 2ಕ್ಕೆ ಫಲಿತಾಂಶ