Advertisement

ಪೌರತ್ವ ವಿಧೇಯಕ ಮತ್ತೆ ಮಂಡನೆ

01:19 AM Sep 10, 2019 | mahesh |

ಗುವಾಹಟಿ: ದೇಶದಲ್ಲಿ ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಕ್ರಮ ಖಚಿತ. ಅದಕ್ಕಾಗಿ ಪೌರತ್ವ (ತಿದ್ದುಪಡಿ) ವಿಧೇಯಕ ಮತ್ತೆ ಜಾರಿಗೊಳಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಗುವಾಹಟಿಯಲ್ಲಿ ತಿಳಿಸಿದ್ದಾರೆ. ಅಸ್ಸಾಂ ಮಾತ್ರವಲ್ಲ ಸಂಪೂರ್ಣ ಈಶಾನ್ಯ ರಾಜ್ಯಗಳ ವ್ಯಾಪ್ತಿಯಲ್ಲಿ ಇರುವ ಅಕ್ರಮ ನೆಲೆಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

Advertisement

ಈಶಾನ್ಯ ರಾಜ್ಯ ಪ್ರಜಾಸತ್ತಾತ್ಮಕ ಒಕ್ಕೂಟ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ‘ವಿವಿಧ ರಾಜ್ಯಗಳಿಗೆ ಅನ್ವಯವಾಗುವ ಕಾನೂನು ತಿದ್ದುಪಡಿ ಮಾಡಬೇಕೆನ್ನುವ ಇರಾದೆ ಇಲ್ಲ. ಹಾಲಿ ಇರುವ ಕಾನೂನುಗಳು ಪೌರತ್ವ (ತಿದ್ದುಪಡಿ) ವಿಧೇಯಕದಲ್ಲಿ ಸೇರ್ಪಡೆಯಾಗುತ್ತವೆ’ ಎಂದಿದ್ದಾರೆ. ವಿಧೇಯಕ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next