Advertisement
ಏನಿದು ಅವ್ಯವಹಾರ?: ಡಿಸೆಂಬರ್ 2008ರಲ್ಲಿ ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ ಧೂತ್, ಐಸಿಐಸಿಐ ಬ್ಯಾಂಕ್ ಸಿಇಒ ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಸಹಭಾಗಿತ್ವದಲ್ಲಿ ನುಪವರ್ ರಿನ್ಯೂವೆಬಲ್ಸ್ ಪ್ರೈ ಲಿ ಎಂಬ ಕಂಪನಿ ಸ್ಥಾಪಿಸಿದ್ದರು. ನಂತರ 64 ಕೋಟಿ ಸಾಲವನ್ನು ಧೂತ್ ನೇತೃತ್ವದ ಕಂಪನಿಯಿಂದ ನುಪವರ್‌ಗೆ ನೀಡಲಾಯಿತು. ಆದರೆ ಕೆಲವೇ ದಿನಗಳಲ್ಲಿ ದೀಪಕ್ ನೇತೃತ್ವದ ಟ್ರಸ್ಟ್‌ಗೆ ಕೇವಲ 9 ಲಕ್ಷ ರೂ.ಗೆ ನುಪವರ್ ಕಂಪನಿ ಮಾರಲಾಗಿತ್ತು. ಮಾರುವುದಕ್ಕೆ 6 ತಿಂಗಳ ಮೊದಲು ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್‌ಗೆ 3250 ಕೋಟಿ ರೂ. ಸಾಲ ನೀಡಲಾಗಿತ್ತು. ಇದರ ಶೇ.86ರಷ್ಟು ಮೊತ್ತ ಮರುಪಾವತಿ ಆಗಿಲ್ಲ. 2017ರಲ್ಲಿ ವಿಡಿಯೋಕಾನ್ ಸಾಲವನ್ನು ಮರುಪಾವತಿ ಆಗದ ಸಾಲ ಎಂದು ದಾಖಲಿಸಲಾಗಿತ್ತು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.