Advertisement
ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉಗ್ರರ ಹೊರತಾಗಿ, ಕಳೆದೊಂದು ತಿಂಗಳಿಂದ ಸುಮಾರು 25-30 ಭಯೋತ್ಪಾದಕರು ಸತತವಾಗಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ಶುರು ಮಾಡಿದ್ದಾರೆ. ಈ ಅವಧಿಯಲ್ಲಿ ಪ್ರತೀ ದಿನ ಒಂದಿಲ್ಲೊಂದು ಐಇಡಿ ಸ್ಫೋಟ, ಭದ್ರತಾ ಪಡೆಗಳ ಮೇಲೆ ದಾಳಿ, ರಾಜಕೀಯ ನಾಯಕರ ಮೇಲೆ ದಾಳಿ ಗಳು ನಡೆಯುತ್ತಲೇ ಇವೆ. ಈ ವರ್ಷದ ಫೆಬ್ರವರಿ ಯಲ್ಲಿ ಕದನ ವಿರಾಮ ಘೋಷಿಸಿದ ಅನಂತರ ಖಾಲಿ ಬಿದ್ದಿದ ಲಾಂಚ್‌ಪ್ಯಾಡ್‌ಗಳಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರತೊಡಗಿವೆ ಎಂದು ಹಿರಿಯ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಯುದ್ದಕ್ಕೂ ವಿವಿಧ ಶಿಬಿರಗಳಲ್ಲಿ ಸುಮಾರು 300 ಉಗ್ರರು ನೆಲೆನಿಂತಿದ್ದಾರೆ ಎಂದು ವಿವಿಧ ಗುಪ್ತಚರ ಸಂಸ್ಥೆಗಳು ವರದಿ ನೀಡಿವೆ. ನಾವು ಕೂಡ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿ ದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಕಾಬೂಲ್‌ಗೆ ಬಂತು ಆರೋಗ್ಯ ವಿಮಾನ: ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊಂದಿರುವ ಡಬ್ಲ್ಯೂಎಚ್‌ಒ ವಿಮಾನ ಅಫ್ಘಾನ್ ರಾಜಧಾನಿ ಕಾಬೂಲ್‌ಗೆ ಸೋಮವಾರ ಆಗಮಿಸಿದೆ. 2 ಲಕ್ಷಕ್ಕೂ ಅಧಿಕ ಮಂದಿಗೆ ನೆರವಾಗುವ ನಿಟ್ಟಿನಿಂದ ಹಲವು ಔಷಧ ಮತ್ತು ಶಸ್ತ್ರಚಿಕಿತ್ಸೆ ನಡೆಸಲು ಬೇಕಾಗುವ ಅಗತ್ಯ ವಸ್ತುಗಳನ್ನು ವಿಮಾನದಲ್ಲಿ ತರಲಾಗಿದೆ.
ದೇಶ ತ್ಯಜಿಸಲು ಅನುಮತಿ?: ಸೂಕ್ತ ದಾಖಲೆಗಳನ್ನು ಹೊಂದಿರುವ ಅಫ್ಘಾನಿಸ್ಥಾನದ ಪ್ರಜೆಗಳು ಇತರ ದೇಶಗಳ ನಾಗರಿಕರ ಜತೆಗೆ ತೆರಳಲು ತಾಲಿಬಾನ್ ಉಗ್ರರು ಅನುಮತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಮೆರಿಕ, ಬ್ರಿಟನ್ ಮತ್ತು ಇತರ ದೇಶಗಳ ಪ್ರತಿನಿಧಿಗಳು ಹೇಳಿಕೆ ನೀಡಿದ್ದಾರೆ.
ಅಫ್ಘಾನಿಸ್ಥಾನದಲ್ಲಿ ಸದ್ಯ ಉಂಟಾಗಿರುವ ಪರಿಸ್ಥಿತಿ ಹೊಸ ರೀತಿಯ ಭದ್ರತಾ ಸವಾಲುಗಳನ್ನು ನಮ್ಮ ಮುಂದೆ ಒಡ್ಡಿದೆ. ಕೇಂದ್ರ ಸರಕಾರಕ್ಕೆ ಅದನ್ನು ನಿಭಾಯಿಸುವ ಸಾಮರ್ಥ್ಯ ಇದೆ.-ರಾಜನಾಥ್ ಸಿಂಗ್, ರಕ್ಷಣ ಸಚಿವ