Advertisement

ಜಿಜೆಎಂ ಮುಖ್ಯಸ್ಥ ಗುರುಂಗ್‌ ನಿವಾಸಕ್ಕೆ ದಾಳಿ, ಶಸ್ತ್ರಾಸ್ತ್ರ ವಶ

11:29 AM Jun 15, 2017 | udayavani editorial |

ಕೋಲ್ಕತ : ಪ್ರತ್ಯೇಕ ಗೂರ್ಖಾಲ್ಯಾಂಡ್‌ ರಾಜ್ಯ ರಚನೆಯನ್ನು ಆಗ್ರಹಿಸುವ ಚಳವಳಿಗೆ ಮರು ಜೀವ ದೊರಕಿರುವ ಹಿನ್ನೆಲೆಯಲ್ಲಿ  ಡಾರ್ಜಿಲಿಂಗ್‌ನಲ್ಲಿ  ಪ್ರಕೃತ ಬಂದ್‌ ನಡೆಯುತ್ತಿರುವಂತೆಯೇ ಪಶ್ಚಿಮ ಬಂಗಾಲ ಪೊಲೀಸರು ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಇದರ ಮುಖ್ಯಸ್ಥ ಬಿಮಲ್‌ ಗುರುಂಗ್‌ನ ಪಾಟ್ಲೆàಬಾಸ್‌ ಪ್ರದೇಶದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಪಶ್ಚಿಮ ಬಂಗಾಲ ಪೊಲಿಸರು ಮತ್ತು ಸಿಆರ್‌ಪಿಎಫ್ ಈ ಕಾರ್ಯಾಚರಣೆಯನ್ನು ಜಂಟಿಯಾಗಿ ನಡೆಸಿವೆ. ಅಧಿಕಾರಿಗಳು ಜಿಜೆಎಂ ಮುಖ್ಯಸ್ಥನ ಮನೆಯ ಬೀಗ ಮುರಿದು ಒಳಪ್ರವೇಶಿಸಿ ಬೃಹತ್‌ ಶೋಧ ಕಾರ್ಯ ನಡೆಸಿದರು. ಮನೆಯೊಳಗೆ ಅಪಾರ ಪ್ರಮಾಣದ ಸ್ಫೋಟಕ ಉಪಕರಣಗಳು, ಬಿಲ್ಲು – ಬಾಣ, ಹರಿತವಾದ ಆಯುಧಗಳು, ಪಟಾಕಿಗಳು ಮತ್ತು ಹಲವು ಮೊಬೈಲ್‌ ಫೋನ್‌ಗಳು ಪತ್ತೆಯಾದವು. 

ಬಿಮಲ್‌ ಗುರುಂಗ್‌ ನೇತೃತ್ವದ ಜಿಜೆಎಂ ನಿನ್ನೆ ಬುಧವಾರ ಗೂರ್ಖಾಲ್ಯಾಂಡ್‌ ರಾಜ್ಯರಚನೆಯ ತನ್ನ ಬೇಡಿಕೆಯನ್ನು ಆಗ್ರಹಿಸುವ ಚಳವಳಿಯನ್ನು ತೀವ್ರಗೊಳಿಸುವುದಾಗಿ ಹೇಳಿತ್ತು. 

ಈ ನಡುವೆ ಅನೇಕ ತೃಣಮೂಲ ಕಾರ್ಯಕರ್ತರು ತಮಗೆ “ದ್ರೋಹಿ’ಗಳೆಂಬ ಹಣೆ ಪಟ್ಟಿ ತಗಲುವ ಸಾಧ್ಯತೆಯ ಭೀತಿಯಲ್ಲಿ ಜಿಜೆಎಂ ಸೇರಲು ಆರಂಭಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next