Advertisement

ಬೆಂಗಳೂರಲ್ಲಿ ಬೀಫ್ ಫೆಸ್ಟ್ v/s ಗೋ ಪೂಜೆ; ಪ್ರತಿಭಟನಾಕಾರರು ವಶಕ್ಕೆ

01:41 PM May 29, 2017 | Team Udayavani |

ಬೆಂಗಳೂರು:ಕೇಂದ್ರ ಸರ್ಕಾರ ಗೋ ಹಾಗೂ ಪ್ರಾಣಿ ಹತ್ಯೆಗೆ ನಿಷೇಧ ಹೇರಿರುವ ಕ್ರಮವನ್ನು ಖಂಡಿಸಿ ಕೇರಳದಲ್ಲಿ ಸುಮಾರು 200 ಪ್ರದೇಶಗಳಲ್ಲಿ ವಿವಿಧ ಸಂಘಟನೆಗಳು ರಸ್ತೆ ಬದಿಯಲ್ಲೇ ಬೀಫ್ ಸಾರು ತಯಾರಿಸಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೂಮೆಂಟ್ ಬೆಂಗಳೂರು ಹೆಸರಿನಲ್ಲಿ ಸೋಮವಾರ ಸಂಜೆ ಟೌನ್ ಹಾಲ್ ಬಳಿ ಬೀಫ್ ಫೆಸ್ಟ್ ನಡೆಸಲು ಮುಂದಾದ ಮೂಮೆಂಟ್ ಬೆಂಗಳೂರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಏತನ್ಮಧ್ಯೆ ಬೀಫ್ ಫೆಸ್ಟ್ ವಿರೋಧಿಸಿ ಗೋ ಪೂಜೆಗೆ ನಡೆಸಲು ಆಗಮಿಸಿದ್ದ  ಭಾರತೀಯ ಗೋ ಪರಿವಾರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಘಟನೆ ನಡೆದಿದೆ.

Advertisement

ಕಾನೂನು ಸುವ್ಯವಸ್ಥೆ ದೃಷ್ಟಿಯ ಹಿನ್ನೆಲೆಯಲ್ಲಿ ಪೊಲೀಸರು ಬೀಫ್ ಫೆಸ್ಟ್ ಮತ್ತು ಗೋ ಪೂಜೆಗೆ ಅನುಮತಿ ನಿರಾಕರಿಸಿದ್ದರು. 

ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಲು ಟೌನ್ ಹಾಲ್ ಬಳಿ ಸಾರ್ವಜನಿಕವಾಗಿಯೇ ಗೋ ಮಾಂಸ ಭಕ್ಷಣೆ ಮಾಡಲು ಕೆಲವು ಸಂಘಟನೆಗಳು ನಿರ್ಧರಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಆದರೆ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ ಎಂದು ಹೇಳಿದ್ದರೆ, ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಬೀಫ್ ಫೆಸ್ಟ್ ಮಾಡುವುದಾಗಿ ತಿಳಿಸಿವೆ ಎಂದು ವರದಿ ವಿವರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next