Advertisement
ಇಂಥದ್ದೇ ಒಂದು ಸನ್ನಿವೇಶ ಜನಪ್ರಿಯ ಶೋಗಳಲ್ಲಿ ಒಂದಾಗಿರುವ ʼಅಮರಿಕಾಸ್ ಗಾಟ್ ಟ್ಯಾಲೆಂಟ್ʼ(America’s Got Talent) ಕಾರ್ಯಕ್ರಮದಲ್ಲಿ ನಡೆದಿದೆ.
Related Articles
Advertisement
ದೇಹದ ಮೇಲೆ ಯಾವ ಬಟ್ಟೆಯೂ ಇಲ್ಲದೆ, ಖಾಸಗಿ ಅಂಗಕ್ಕೆ ಒಂದು ಟೇಬಲ್ ಟೆನ್ನಿಸ್ ಆಡುವ ಬ್ಯಾಟ್ ಅಡ್ಡ ಹಿಡಿದುಕೊಂಡು ಮೂವರು ಪುರುಷರು ವೇದಿಕೆ ಮೇಲೆ ಬಂದಿದ್ದಾರೆ. ಖಾಸಗಿ ಅಂಗದಿಂದ ಬ್ಯಾಟ್ ತೆಗೆದು, ಮತ್ತೊಬ್ಬನ ಬ್ಯಾಟ್ ಖಾಸಗಿ ಅಂಗಕ್ಕೆ ಇಡುವ ಹಾಗೆ ತಮಾಷೆಯ ರೀತಿಯಲ್ಲಿ ತನ್ನ ಪ್ರದರ್ಶನವನ್ನು ನೀಡಿದ್ದಾರೆ. ನೋಡುಗರಿಗೆ ಇದು ಮೊದಲು ಅಸಹ್ಯ ಅನ್ನಿಸಿದೆ. ಆ ಬಳಿಕ ನಗು ಬಂದಿದೆ.
ನಾಲ್ವರು ತೀರ್ಪುಗಾರರು ಇವರ ಈ ಕಲಾ ಪ್ರದರ್ಶನವನ್ನು ನೋಡಿ ʼಎಸ್ʼ ಎಂದು ಹೇಳಿ ಮುಂದಿನ ಸುತ್ತಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರದರ್ಶನ ಬಳಿಕ ಬಟ್ಟೆ ಹಾಕಿಕೊಂಡು ಬಂದು ತೀರ್ಪುಗಾರರಿಗೆ ಧನ್ಯವಾದ ಹೇಳಿದ್ದಾರೆ.
ನೆಟ್ಟಿಗರ ಆಕ್ರೋಶ: ಬಹುತೇಕವಾಗಿ ಕುಟುಂಬ ಸಮೇತವಾಗಿ ನೋಡುವ ʼಅಮರಿಕಾಸ್ ಗಾಟ್ ಟ್ಯಾಲೆಂಟ್ʼ ಕಾರ್ಯಕ್ರಮದ ಈ ಪ್ರದರ್ಶನವನ್ನು ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಂಥದ್ದನ್ನು ಟಿವಿಯಲ್ಲಿ ಪ್ರಸಾರ ಮಾಡಬಾರದು, ಈ ದಿನಗಳಲ್ಲಿ ಎಲ್ಲವೂ ತುಂಬಾ ಅಸಹ್ಯಕರವಾಗಿದೆ, ಯಾರಿಗೂ ಸ್ವಾಭಿಮಾನವಿಲ್ಲ!” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. “ಇದು ಫ್ಯಾಮಿಲಿ ಕೂತು ನೋಡುವ ಕಾರ್ಯಕ್ರಮವಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ. “ಇದನ್ನು ಪ್ರಸಾರ ಮಾಡಲು ಅನುಮತಿ ನೀಡಬಾರದಿತ್ತು. ನನಗಿದು ನಿಜಕ್ಕೂ ಅತಿರೇಕ ಹಾಗೂ ಅಸಹ್ಯವಾಗಿ ಕಂಡಿತು” ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. “ಇದು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ತಪ್ಪು, ಇತ್ತೀಚಿನ ದಿನಗಳಲ್ಲಿ ಟಿವಿ ಕಾರ್ಯಕ್ರಮಗಳು ಅಸಹ್ಯವಾಗಿ ಕಾಣುತ್ತಿದೆ. ಇದು ಪ್ರತಿಭೆಯಲ್ಲ, ನೋಡಲು ಬಂದ ಪ್ರೇಕ್ಷಕರಲ್ಲಿ ಮಕ್ಕಳಿದ್ದಾರೆ” ಎಂದು ಆಕ್ರೋಶವಾಗಿ ಒಬ್ಬರು ಕಮೆಂಟ್ ಮಾಡಿದ್ದಾರೆ.
ಅಮೇರಿಕಾಸ್ ಗಾಟ್ ಟ್ಯಾಲೆಂಟ್‌ನ ಅಂತಿಮ ಆಡಿಷನ್ ಎಪಿಸೋಡ್ ಮುಂದಿನ ವಾರ (ಆಗಸ್ಟ್ 8 ರಂದು) ಪ್ರಸಾರವಾಗಲಿದೆ. ಆ ಬಳಿಕದ ಆರು ವಾರಗಳ ಲೈವ್ ಶೋಗಳು ಆಗಸ್ಟ್ 22 ರಿಂದ ಪ್ರಾರಂಭವಾಗಲಿದೆ.