ವಾಷಿಂಗ್ಟನ್: ರಷ್ಯಾ ಯಾವುದೇ ಸಮಯದಲ್ಲಿ ದಾಳಿ ಮಾಡಬಹುದು, ವೈಮಾನಿಕ ದಾಳಿಯ ಸಾಧ್ಯತೆಯಿದೆ. ಹೀಗಾಗಿ ಉಕ್ರೇನ್ ನಲ್ಲಿರುವ ಅಮೆರಿಕನ್ನರು 48 ಗಂಟೆಗಳ ಒಳಗೆ ಹೊರಡಬೇಕು, ಎಂದು ಶ್ವೇತಭವನ ಶುಕ್ರವಾರ ಹೇಳಿದೆ.
ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮದೇ ಆದ ಆಕ್ರಮಣಕಾರಿ ಕೃತ್ಯಗಳಿಂದ ಗಮನವನ್ನು ಸೆಳೆಯಲು ಸುಳ್ಳು ಹೇಳುತ್ತಿವೆ ಎಂದು ಮಾಸ್ಕೋ ಆರೋಪಿಸಿದೆ.
“ಅಪಾಯವು ಈಗ ಸಾಕಷ್ಟು ಹೆಚ್ಚಾಗಿದೆ” ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸುದ್ದಿಗಾರರಿಗೆ ತಿಳಿಸಿದರು.
ಒಂದು ವೇಳೆ ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದರೆ ಅಮೆರಿಕ ಸೇನೆ ರಕ್ಷಣೆಗೆ ಬರುವುದಿಲ್ಲ. ಹೀಗಾಗಿ ಕೂಡಲೇ ಉಕ್ರೇನ್ ತೊರೆದು ಬನ್ನಿ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಬಿಜೆಪಿ ಏರಿದೆ: ವಿಪಕ್ಷ ಜಾರಿದೆ ; ಮೊದಲ ಹಂತದ ಬಳಿಕ ವಿರೋಧಿಗಳಿಗೆ ನಡುಕ: ಪ್ರಧಾನಿ ಮೋದಿ
ಕಳೆದ ಹಲವು ದಿನಗಳಿಂದ ರಷ್ಯಾ- ಉಕ್ರೇನ್ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣವಿದೆ. ಲಕ್ಷಕ್ಕೂ ಹೆಚ್ಚು ಸೈನಿಕರು, ಕ್ಷಿಪಣಿಗಳು, ಟ್ಯಾಂಕರ್ ಗಳಲ್ಲು ರಷ್ಯಾ ಗಡಿಯಲ್ಲಿ ಜಮೆ ಮಾಡುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲೂ ಯುದ್ಧದಂತಹ ಘಟನೆ ನಡೆಯಬಹುದು ಎನ್ನಲಾಗಿದೆ.